ಐಸಿಸ್‌ ಮತ್ತು ಉಗ್ರ ಸಂಘಟನೆ ನಂಟಿನ ಆರೋಪದಲ್ಲಿ ಬಂಧಿತರಾಗಿರುವ ಉಳ್ಳಾಲ ಮಾಜಿ ಶಾಸಕ ದಿ. ಇದಿನಬ್ಬ ಮೊಮ್ಮಗ ಮೊಮ್ಮಗನ ಸಹಿತ ಮೂರು ಮಂದಿಯ ಪಾಸ್‌ಪೋರ್ಟ್‌ NIA ವಶಕ್ಕೆ

ಮಂಗಳೂರು (ಆ.09): ಐಸಿಸ್‌ ಮತ್ತು ಉಗ್ರ ಸಂಘಟನೆ ನಂಟಿನ ಆರೋಪದಲ್ಲಿ ಬಂಧಿತರಾಗಿರುವ ಉಳ್ಳಾಲ ಮಾಜಿ ಶಾಸಕ ದಿ. ಇದಿನಬ್ಬ ಮೊಮ್ಮಗನ ಸಹಿತ ಮೂರು ಮಂದಿಯ ಪಾಸ್‌ಪೋರ್ಟ್‌ ಅನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮುಟ್ಟುಗೋಲು ಹಾಕಿಕೊಂಡಿದೆ.

 ಕಳೆದ ಬುಧವಾರ ನಸುಕಿನ ಜಾವ ಇದಿನಬ್ಬರ ಪುತ್ರ ಬಿ.ಎಂ.ಭಾಷಾ ಅವರ ಮನೆಗೆ ಎನ್‌ಐಎ ತಂಡ ದಾಳಿ ನಡೆಸಿತ್ತು. ಈ ವೇಳೆ ಭಾಷಾರ ಕಿರಿಯ ಪುತ್ರ, ಇದಿನಬ್ಬರ ಮೊಮ್ಮಗ ಅಬ್ದುಲ್‌ ರೆಹ್ಮಾನ್‌ನನ್ನು ಬಂಧಿಸಿತ್ತು.

ಐಸಿಸ್‌ ಉಗ್ರರ ನಂಟು ಶಂಕೆ: ಮಾಜಿ ಶಾಸಕನ ಮೊಮ್ಮಗ ಸೇರಿ 4 ಮಂದಿ ಅರೆಸ್ಟ್‌!

 ಈ ಸಂದರ್ಭ ಭಾಷಾರ ಇನ್ನೋರ್ವ ಪುತ್ರ ಅನಾಸ್‌ ಹಾಗೂ ಆತನ ಪತ್ನಿ ದೀಪ್ತಿ ಮಾರ್ಲ ಯಾನೆ ಮರಿಯಂರನ್ನೂ ವಿಚಾರಣೆ ನಡೆಸಿ ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ. ಇದೇ ವೇಳೆ ಮರಿಯಂ ಪಾಸ್‌ಪೋರ್ಟ್‌ನಲ್ಲಿ ಮೂಲ ಹೆಸರು ದೀಪ್ತಿ ಮಾರ್ಲ ಎಂದೇ ಇತ್ತು ಎನ್ನಲಾಗಿದೆ. 

ಅನಾಸ್‌ ಜೊತೆ ವಿವಾಹಕ್ಕೂ ಮುನ್ನ ಮತಾಂತರಗೊಂಡಿದ್ದ ಆಕೆ ಮರಿಯಂ ಎಂದು ಹೆಸರು ಬದಲಾಯಿಸಿದ್ದರು. ಆದರೆ ಪಾಸ್‌ಪೋರ್ಟ್‌ನಲ್ಲಿ ಈಗಲೂ ಆಕೆಯ ಮೂಲ ಹೆಸರು ಇರುವುದನ್ನು ತನಿಖಾ ತಂಡ ಕಂಡುಕೊಂಡಿದೆ.