ಬೀದರ್(ಡಿ.21): ರಾಜ್ಯದಲ್ಲಿ ಹಿಟ್ಲರ್ ಆಡಳಿತ ನಡೆಯುತ್ತಿದೆ. ಎಸ್.ಆರ್.ಪಾಟೀಲ್ ಮೇಲ್ಮನೆಯ ವಿರೋಧ ಪಕ್ಷದ ನಾಯಕರಿಗೂ ಹೋಗಲು ಬಿಟ್ಟಿಲ್ಲ. ಇಂದು ಮತ್ತು ನಿನ್ನೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಹೋಗಲಿಕೆ ಬಿಟ್ಟಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೋಗಬಹುದು, ಬರಬಹುದು. ವಿರೋಧ ‌ಪಕ್ಷ‌ದ ನಾಯಕರು ಅಂದ್ರೆ ಸಿಎಂಗೆ ನೆರಳು ಇದ್ದಂಗೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಎಂ. ಬಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. 

ಮಂಗಳೂರಿನಲ್ಲಿ ನಡೆಯುತ್ತಿರುವ ಪೌರತ್ವ ಕಾಯ್ದೆ ಹಿಂಸಾತ್ಮಕ ವಿಚಾರದ ಬಗ್ಗೆ ಶನಿವಾರ ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರನ್ನ ಕೆಲಸ ಮಾಡೋಕೆ ಬಿಡುತ್ತಿಲ್ಲ, ಹಿಂಸಾಚಾರ, ಅನ್ಯಾಯ ಆದಾಗ ವಿರೋಧ ಪಕ್ಷದ ನಾಯಕರು ಹೋಗಿ ನ್ಯಾಯ ಕೊಡಿಸಬೇಕು. ಆದರೆ ವಿರೋಧ ಪಕ್ಷದ ನಾಯಕರಿಗೆ ಹೋಗಲು ಬಿಡುತ್ತಿಲ್ಲ ಅಂದ್ರೆ ಏನು ಅರ್ಥ ಎಂದು ಪ್ರಶ್ನಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯದಲ್ಲಿ ಸರ್ವಾಧಿಕಾರಿ ಹಿಟ್ಲರ್ ಆಡಳಿತ ನಡೆದಂತೆ ಬಿ. ಎಸ್. ಯಡಿಯೂರಪ್ಪ ಸರ್ಕಾರ ನಡೆದಿದೆ. ಹೀಗಾಗಿ ವಿರೋಧ ಪಕ್ಷಗಳ ಸರಿಯಾಗಿ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಎಸ್‌ವೈ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.