ಮಂಗಳೂರು (ಸೆ.11) : ಯಾರ ಹುಟ್ಟು ಸಾವಿನ ಬಗ್ಗೆಯೂ ಮಾತನಾಡುವ ಅಧಿಕಾರ ಯಾರಿಗೂ ಇರುವುದಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ನೇಣು ಹಾಕಿಕೊಳ್ಳಬೇಕಾಗುತ್ತದೆ ಎನ್ನುವ ಕಾರ್ಕಳ ಸಂಸದ ಸುನಿಲ್ ಕುಮಾರ್ ಹೇಳಿಕೆಗೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.  

 ಸುನಿಲ್ ಕುಮಾರ್ ಎಲ್ಲಿ ಸಾಯ್ತಾರೆ ಹೇಗೆ ಸಾಯ್ತಾರೆ ಎನ್ನುವುದು ಅವರಿಗೆ ಗೊತ್ತಿದೆಯಾ? ನಾನು ಎಲ್ಲಿ ಸಾಯ್ತೀನಿ ಹೇಗೆ ಸಾಯ್ತಿನಿ ಅನ್ನೋದು ನನಗೆ ಗೊತ್ತಾಗುತ್ತಾ? ಟೀಕೆ ಮಾಡುವ ಭರದಲ್ಲಿ ಇಂತಹ ಮಾತುಗಳನ್ನಾಡುವುದು ಸರಿಯಲ್ಲ ಎಂದು ಖಾದರ್ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾಳೆ ಸುನೀಲ್ ಕುಮಾರ್ ಯಾರ ಮನೆಯ ಬಳಿಯಾದರೂ ಬಿದ್ದರೆ ಅವರಿಗೆ ನೀರು ಕೊಡುವುದು‌ ಮುಸ್ಲಿಂ ಅಥವಾ ಬೇರೆ ಧರ್ಮದ ವರಾಗಿರಬಹುದು ಎಂದರು. 

'ಮೋದಿ ನಿಲುವು ವಿರೋಧಿಸುವವರು ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು!'

ಇನ್ನು ಇದೇ ವೇಳೆ ನಳಿನ್ ಕುಮಾರ್ ಹೇಳಿಕೆಗಳ ಬಗ್ಗೆಯೂ ಮಾತನಾಡಿದ ಖಾದರ್, ಕಟೀಲು ಅವರು ‌ಅಸಂಬದ್ದ ಹೇಳಿಕೆ ನೀಡುತ್ತಿದ್ದಾರೆ. ಇದು ಅತ್ಯಂತ ಕೀಳು ಮಟ್ಟದ ಮತ್ತು ‌ಪಕ್ಷದ ನಾಯಕತ್ವ ಭಾಗ ಮಾಡುವ ರಾಜಕೀಯ. ಇಡೀ ರಾಜ್ಯವೇ ಅವರನ್ನು ಜೋಕರ್ ಎಂದು ಕರೆಯುತ್ತಿದೆ.  ನಮ್ಮ ಜಿಲ್ಲೆಯವರನ್ನ ಜೋಕರ್ ಎಂದು ಕರೆಯುವುದು ನಮಗೆ ಇಷ್ಟವಿಲ್ಲ ಎಂದು ಹೇಳಿದರು.

ಬೇರೆ ಬೇರೆ ಜಿಲ್ಲೆಗಳಲ್ಲಿ ಜನ ಇವರನ್ನ ಹಾಗೆ ಕರೆಯುತ್ತಿದ್ದಾರೆ. ಹಾಗಾಗಿ ಅವರು ಇನ್ನಾದರೂ ತಮ್ಮ ಮಾತುಗಳನ್ನು ನಳಿನ್ ಕುಮಾರ್ ಕಟೀಲ್ ಸರಿ ಮಾಡಿಕೊಳ್ಳಲಿ ಎಂದು ಖಾದರ್ ಹೇಳಿದರು.