'ಬಿಜೆಪಿಯವರು ರಾಕ್ಷಸ ರಾಜ್ಯ ಮಾಡ್ತಾ ಇದ್ದಾರೆ'

ಮಹಿಳಾ ಸದಸ್ಯೆ ನೂಕಾಟದಲ್ಲಿ ಪೊಲೀಸ್‌ ವೈಫಲ್ಯವಾಯ್ತಾ?| ಚುನಾವಣೆಯಲ್ಲಿ ಮಹಿಳಾ ಸದಸ್ಯೆಯರು ಮತ ಹಾಕಲು ಪೊಲೀಸರು ರಕ್ಷಣೆ ಕೊಡ್ಬೇಕಾಗಿತ್ತು, ಬಿಜೆಪಿಯವರು ರಾಮರಾಜ್ಯ ಮಾಡೋಕೆ ಹೊರಟಿದ್ದಾರೆ. ಇದು ರಾಮರಾಜ್ಯ ಕಟ್ಟುವ ರೀತಿ ನೀತಿನಾ ಎಂದು ಪ್ರಶ್ನಿಸಿದ ಮಾಜಿ ಸಚಿವೆ ಉಮಾಶ್ರೀ| 

Former Minister Umashree Talks Over BJP grg

ಬಾಗಲಕೋಟೆ(ನ.12): ಮಹಾಲಿಂಗಪುರ ಪುರಸಭೆ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ತೇರದಾಳ ಕ್ಷೇತ್ರದ ಮಾಜಿ ಶಾಸಕಿ ಉಮಾಶ್ರೀ, ಮಹಿಳಾ ಸದಸ್ಯೆ ನೂಕಾಟದಲ್ಲಿ ಪೊಲೀಸ್‌ ವೈಫಲ್ಯವಾಯ್ತಾ!? ಎಂದು ಪ್ರಶ್ನಿಸಿದ ಅವರು, ಮಹಾಲಿಂಗಪುರ ಪುರಸಭೆಯ ಮೂವರು ಬಿಜೆಪಿ ಸದಸ್ಯರು ಕಿಡ್ನಾಪ್‌ ಆಗಿದ್ದಾರೆ ಎಂದು ದೂರು ಕೊಟ್ಟಿದ್ರು. ಆದರೆ ಮಹಿಳಾ ಸದಸ್ಯೆಯರು ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್‌ನೊಂದಿಗೆ ಬಂದಿದ್ರು. 

ನಮಗೆ ಮತ ಚಲಾಯಿಸುವಲ್ಲಿ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ರು. ನಾನು ಕೂಡಾ ಪಿಎಸ್‌ಐ, ಡಿವೈಎಸ್ಪಿ, ಎಸ್ಪಿಯವರೊಂದಿಗೆ ಮಹಿಳಾ ಸದಸ್ಯೆಯರಿಗೆ ರಕ್ಷಣೆ ಕೊಡುವ ಬಗ್ಗೆ ಮಾತನಾಡಿದ್ದೇ. ಆದರೆ ಪೊಲೀಸರು ರಕ್ಷಣೆ ಕೊಡಲಿಲ್ಲವೆಂದ ಎಂದು ಉಮಾಶ್ರೀ ಗರಂ ಆದರು.

ಮಹಿಳೆ ಜೊತೆ ಶಾಸಕನ ಅನುಚಿತ ವರ್ತನೆ ಬಿಜೆಪಿಯ ಕೀಳು ಸಂಸ್ಕೃತಿ ತೋರಿಸುತ್ತೆ: ಡಿಕೆಶಿ

ಮಹಾಲಿಂಗಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಮಹಿಳಾ ಸದಸ್ಯೆಯರು ಮತ ಹಾಕಲು ಪೊಲೀಸರು ರಕ್ಷಣೆ ಕೊಡ್ಬೇಕಾಗಿತ್ತು. ಬಿಜೆಪಿಯವರು ರಾಮರಾಜ್ಯ ಮಾಡೋಕೆ ಹೊರಟಿದ್ದಾರೆ. ಇದು ರಾಮರಾಜ್ಯ ಕಟ್ಟುವ ರೀತಿ ನೀತಿನಾ. ರಾಕ್ಷಸ ರಾಜ್ಯ ಮಾಡ್ತಿದ್ದಾರೆ. ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವುದನ್ನು ಬಿಜೆಪಿಯ ಹಿರಿಯ ನಾಯಕರ ನೋಡಿ ಕಲಿಲಿ ಎಂದು ಸಿದ್ದು ಸವದಿ ಹೆಸರು ಹೇಳದೇ ಟಾಂಗ್‌ ಕೊಟ್ಟರು.
ಬಿಜೆಪಿಯಲ್ಲೂ ಒಳ್ಳೆಯ ನಾಯಕರಿದ್ದಾರೆ. ಅವರು ಮಾದರಿಯಾಗಿಲ್ವಾ!? ನಾನು ದೂಡಿಯೇ ಇಲ್ಲಂತಾರೆ. ಕಣ್ಣು ಸತ್ತು ಹೋಗಿವೆಯಾ, ಈ ವಿಡಿಯೋ ಜನ ನೋಡಿಲ್ಲವಾ. ಬಿಜೆಪಿ ಶಾಸಕ ಸಿದ್ದು ಸವದಿ ಮಹಿಳಾ ಸದಸ್ಯೆಯನ್ನು ಎಳೆದಾಡಿಲ್ಲವೆಂದು ಸಮರ್ಥನೆಗೆ ಉಮಾಶ್ರೀ ಕೆಂಡಾಮಂಡಲವಾದರು.

ವಿಕೃತ ಮನಸ್ಸಿನ ಇಂತಹ ರಾಜಕಾರಣದಲ್ಲಿರೋದು ಸೂಕ್ತನಾ ಎನ್ನುವ ಪ್ರಶ್ನೆ ಕಾಡ್ತಿದೆ. ಜನರ ಕಣ್ಣು ಸಾಯಿಸೋಕೆ ಹೋಗ್ಬೇಡಿ. ನಾವು ಇದನ್ನು ಖಂಡಿಸ್ತೇವೆ. ಯಾವುದೇ ಪಕ್ಷದ ಹೆಣ್ಣುಮಕ್ಕಳಿರಲಿ. ಇಂತಹ ವ್ಯಕ್ತಿ ವಿರುದ್ಧ ಅವರು ಯಾವ ಕ್ರಮ, ಬುದ್ದಿ ಕಲಿಸ್ತಾರೆ ಎನ್ನುವುದು ಕಾದು ನೋಡ್ತೀವಿ. ಸಿಎಂ ಬಿಎಸ್ವೈ ಬಗ್ಗೆ ಗೌರವವಿದೆ, ಅಡ್ವಾಣಿ ಸೇರಿದಂತೆ ಒಳ್ಳೊಳ್ಳೆ ನಾಯಕರಿದ್ದಾರೆ. ಅವರೆಲ್ಲಾ ಏನು ಅಂದ್ಕೋತಾರೆ. ಇದು ಸಲ್ಲದು, ಸಮರ್ಥನೆ ಮಾಡಿಕೊಳ್ಳುವ ವಿಷಯವಲ್ಲ. ರಾಜಕಾರಣಗೋಸ್ಕರ ಸಮರ್ಥನೆ ಮಾಡಿಕೊಂಡ್ರೆ. ಇದಕ್ಕಿಂತ ಹೇಯ ಕೃತ್ಯ ಮತ್ತೊಂದಿಲ್ಲ. ನಮ್ಮ ವರಿಷ್ಠರಿಗೆ ಎಲ್ಲಾ ವಿಷಯ ತಿಳಿಸಿದ್ದೇವೆ. ಕಾನೂನಾತ್ಮಕವಾಗಿ ಚರ್ಚಿಸಿ ಮುಂದಿನ ಹೆಜ್ಜೆ ಇಡ್ತೇವೆ ಎಂದು ಹೇಳಿದರು.

Latest Videos
Follow Us:
Download App:
  • android
  • ios