Asianet Suvarna News Asianet Suvarna News

ಬಾಲ ಮುದು​ರಿ​ಕೊಂಡು ಕೂತಿ​ದ್ದಾರೆ ಯಡಿ​ಯೂ​ರ​ಪ್ಪ : ಗುಡುಗಿದ ಮಾಜಿ ಸಚಿವ

ಮುಖ್ಯಮಂತ್ರಿ ಯಡಿಯೂರಪ್ಪ ಬಾಲ ಮುದುರಿಕೊಂಡು ಕೂತಿದ್ದು, ಅವರಿಗೆ ಅಮಿತ್ ಶಾ ಜೊತೆ ಮಾತನಾಡುವ ಧೈರ್ಯವಿಲ್ಲ ಎಂದು ಮಾಜಿ ಸಚಿವರೋರ್ವರು ಗುಡುಗಿದ್ದಾರೆ. 

Former Minister SR Srinivas Slams CM BS Yediyurappa
Author
Bengaluru, First Published Sep 12, 2019, 1:11 PM IST
  • Facebook
  • Twitter
  • Whatsapp

ತುಮ​ಕೂರು [ಸೆ.12 ]:  ಒಕ್ಕ​ಲಿ​ಗ​ರನ್ನು 100 ಪರ್ಸೆಂಟ್‌ ಟಾರ್ಗೆಟ್‌ ಮಾಡ​ಲಾ​ಗಿದೆ ಎಂದು ಮಾಜಿ ಸಚಿವ ಎಸ್‌.​ಆರ್‌. ಶ್ರೀನಿ​ವಾಸ್‌ ಗುಡು​ಗಿ​ದ್ದಾರೆ.

ಅವರು ತುಮ​ಕೂ​ರಿ​ನಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ, ಬಿಜೆ​ಪಿ​ಯ​ವರು ದ್ವೇಷದ ರಾಜ​ಕಾ​ರಣ ಮಾಡು​ತ್ತಿ​ದ್ದಾ​ರೆ. ಇದು ಎಲ್ಲ​ರಿಗೂ ತಿಳಿ​ದಿ​ರುವ ವಿಚಾರ. ಅಮಿತ್‌ ಶಾ ಅವರನ್ನು ಅಹ್ಮದ್‌ ಪಟೇಲ್ ಜೈಲಿಗೆ ಹಾಕಿಸಿದ್ದರು. ಅಹ್ಮದ್‌ ಪಟೇಲ್ ರಾಜ್ಯಸಭೆ ಸದಸ್ಯರಾ​ಗುವ ಕಾಲದಲ್ಲಿ ಅವರನ್ನು ತಪ್ಪಿಸೋಕೆ ಯತ್ನಿಸಿದ್ದರು. ಆ ಸಂದರ್ಭದಲ್ಲಿ ಡಿಕೆಶಿ ಅಲ್ಲಿನ ಗುಜರಾತ್‌ ಶಾಸಕರನ್ನು ರೆಸಾರ್ಟ್‌ಗೆ ಕರೆತಂದು ಅಹ್ಮದ್‌ ಪಟೇಲ್‌ ಅವರ ಗೆಲುವಿಗೆ ಅನುಕೂಲ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಮೇಲೆ ಐಟಿ ರೇಡ್‌ ಆಗಿದೆ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಡಿಗೂ ಇದಕ್ಕೂ ಸಂಬಂಧವೇ ಇಲ್ಲ. ತೆರಿಗೆ ಕಟ್ಟಲಿಲ್ಲ ಅಂದರೆ ಐಟಿ ನೋಡಿಕೊ​ಳ್ಳು​ತ್ತದೆ. ಇಡಿಯನ್ನು ಕೇಂದ್ರ ದುರುಪಯೋಗ ಮಾಡಿಕೊಂಡು ಪ್ರಬಲರನ್ನು ಧಮನ ಮಾಡುತ್ತಿದೆ ಎಂದರು.

 ಬಾಲ ಮುದು​ರಿ​ಕೊಂಡು ಕೂತಿ​ದ್ದಾರೆ ಯಡಿ​ಯೂ​ರ​ಪ್ಪ:

ಅಮಿತ್‌ ಶಾ ಜೊತೆ ಮಾತನಾಡುವ ಶಕ್ತಿ ಸಿ.ಟಿ.ರವಿಗೆ ಇಲ್ಲ. ಸಿಎಂ ಯಡಿಯೂರಪ್ಪಗೂ ಇಲ್ಲ. ಯಡಿಯೂರಪ್ಪನವ​ರೇ ಬಾಲ ಮುದುರಿಕೊಂಡು ಕೂತಿದ್ದಾರೆ, ಅವರದೇ ಏನು ನಡೀತಾ ಇಲ್ಲ. ಅಂಥ​ದ​ರಲ್ಲಿ ಸಿಟಿ ರವಿ ಏನು ಮಾಡು​ವು​ದಕ್ಕೆ ಆಗು​ವು​ದಿಲ್ಲ ಎಂದು ಟೀಕಿಸಿದ ಅವರು, ಕೆಲ​ಸದ ಮೇಲೆ ದೆಹ​ಲಿಗೆ ಹೋಗು​ತ್ತಿ​ದ್ದೇನೆ. ಅಲ್ಲಿಂದ ಬಂದನಂತರ ಕೋರ್ಟ್‌ ತೀರ್ಮಾನ ನೋಡಿ ಪ್ರತಿಭಟನೆ ಮಾಡುತ್ತೇವೆ ಎಂದ​ರು.

Follow Us:
Download App:
  • android
  • ios