ಬಾಗಲಕೋಟೆ ಜಿಲ್ಲೆ ಕಲಾದಗಿ ಸಮೀಪದ ಯಡಹಳ್ಳಿ ಕ್ರಾಸ್‌ ಬಳಿ ವಾಹನವೊಂದನ್ನು ಓವರ್‌ಟೇಕ್‌ ಮಾಡಲು ಹೋಗಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಬೈಕ್‌ 

ಕೊಲ್ಹಾರ(ಅ.06): ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿಯವರ ಸಹೋದರ ಮಲ್ಲಿಕಾರ್ಜುನ ಬೆಳ್ಳುಬ್ಬಿಯವರ ಪುತ್ರ ಸಚಿನ್‌ ಬೆಳ್ಳುಬ್ಬಿ (29) ಬುಧವಾರ ಸಂಜೆ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಚಿನ್‌ ತಮ್ಮ ಸ್ನೇಹಿತ ಕೂಬಕಡ್ಡಿ ನಿವಾಸಿ ಪರಸಪ್ಪ ಉಗ್ರಾಣ ಜೊತೆಗೂಡಿ ಬೈಕ್‌ ಮೇಲೆ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಹೋಗಿ, ಮರಳಿ ಬರುವಾಗ ಬಾಗಲಕೋಟೆ ಜಿಲ್ಲೆ ಕಲಾದಗಿ ಸಮೀಪದ ಯಡಹಳ್ಳಿ ಕ್ರಾಸ್‌ ಬಳಿ ವಾಹನವೊಂದನ್ನು ಓವರ್‌ಟೇಕ್‌ ಮಾಡಲು ಹೋಗಿ ಕ್ಯಾಂಟರ್‌ಗೆ ಬೈಕ್‌ ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಕಲಾದಗಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಂತರ ಸಂಬಂಧಿಕರಿಗೆ ಶವಗಳನ್ನು ಹಸ್ತಾಂತರಿಸಲಾಗಿದ್ದು, ಬುಧವಾರ ರಾತ್ರಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

STING OPERATION: ಚಡಚಣ ಪೊಲೀಸರ ವಸೂಲಿ ದಂಧೆ ಬಯಲು!

ಬನ್ನಿ ವಿನಿಮಯ, ಸ್ಪರ್ಧಾ ಕಾರ್ಯಕ್ರಮ ರದ್ದು:

ಸಚಿನ್‌ ಬೆಳ್ಳುಬ್ಬಿ ನಿಧನದ ಹಿನ್ನೆಲೆಯಲ್ಲಿ ಅ.6 ಗುರುವಾರದಂದು ಕೊಲ್ಹಾರ ಪಟ್ಡಣದಲ್ಲಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿಯವರ ಮನೆಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಬನ್ನಿ ವಿನಿಮಯ ಹಾಗೂ ಸ್ನೇಹಮಿಲನ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.