ಕೊಪ್ಪಳ(ಜ.26): ಬಿಜೆಪಿ ಸರ್ಕಾರ ಬಹಳ ದಿನ ನಡೆಯೋದಿಲ್ಲ, 17 ಜನರು ಮಂತ್ರಿ ಆಗಬೇಕೆಂದು ಬಿಜೆಪಿಗೆ ಹೋಗಿದ್ದಾರೆ. 17 ಜನರನ್ನೂ ಬಿಜೆಪಿ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಭಾರತೀಯ ಜನತಾ ಪಕ್ಷದ ತತ್ವ ಸಿದ್ದಾಂತ ಯೂಸ್ ಆ್ಯಂಡ್ ಥ್ರೋ ಸಿದ್ಧಾಂತವಾಗಿದೆ ಎಂದು ಮಾಜಿ ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಗೆ ಹೋದ 17 ಜನರನ್ನ ಮಂತ್ರಿ ಮಾಡಬೇಕು. ಸಿಎಂ ಯಡಿಯೂರಪ್ಪ, ಬಿಜೆಪಿ ವಚನಭ್ರಷ್ಟ ಆಗಬಾರದು ಅಂದರೆ 17 ಜನರನ್ನ ಮಂತ್ರಿ ಮಾಡಬೇಕು. ಅಕಸ್ಮಾತ್ ಸಚಿವ ಸ್ಥಾನ ನೀಡದೆ ಹೋದ್ರೆ ರಾಜ್ಯದಲ್ಲಿ ಯಡಿಯೂರಪ್ಪ ವಚನಭ್ರಷ್ಟ ಆಗ್ತಾರೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸೋತರೂ ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. ವಚನ ಭ್ರಷ್ಟರಾಗ್ತಿರೋ ಅಥವಾ ಕೊಟ್ಟ ಮಾತು ಉಳಿಸಿಕೊಳ್ಳುತ್ತೀರೋ ಸಿಎಂ ಯಡಿಯೂರಪ್ಪಗೆ ತಂಗಡಗಿ ಪ್ರಶ್ನೆ ಮಾಡಿದ್ದಾರೆ. 

17 ಜನರು ಬಿಜೆಪಿ ನಾಯಕರ ಮನೆ ಕಾಯುವ ಪರಸ್ಥಿತಿ ಬಂದಿದೆ. 17 ಜನರು ನಮ್ಮ ಪಕ್ಷದವರಾಗಿದ್ದಾರೆ. ಅವರ ಮೇಲೆ ಪ್ರೀತಿ ಇದೆ. ಎಲ್ಲ 17 ಜನರು ಅಧೋಗತಿಗೆ ಹೋಗಿದ್ದಾರೆ. ಅವರ ಪರಸ್ಥಿತಿ ನೋಡಿ ಅಯ್ಯೋ ಅಂತ ಅನಿಸುತ್ತಿದೆ. ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತ ಪರಿಸ್ಥಿತಿಯಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.