ಬೆಳಗಾವಿ(ನ.30): ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಮೂವರು ಪ್ರಬಲ ಸ್ಪರ್ಧಿಗಳಿದ್ದು, ಯಾರಿಗೆ ಮತ ಹಾಕಬೇಕೆಂದು ಜನ ಗೊಂದಲದಲ್ಲಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಅವರು ಹೇಳಿದ್ದಾರೆ. 

ಶನಿವಾರ ಜಿಲ್ಲೆಯ ಗೋಕಾಕ್ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೋಕಾಕ್ ಕ್ಷೇತ್ರದಲ್ಲಿ ಶೇಕಡ 30 ರಷ್ಟು ಗುಪ್ತ ಮತದಾರರಿದ್ದಾರೆ. ಅವರು ಯಾವ ಪಕ್ಷದ ಪರವಾಗಿ ಇದ್ದಾರೆ ಅನ್ನೋದನ್ನು ಹೇಳೋಕೆ ಆಗಲ್ಲ. ಅವರನ್ನ ಬಿಜೆಪಿಯವರಿಗೂ ಚೇಂಜ್ ಮಾಡಕ್ಕಾಗಲ್ಲ, ನಾವು ಚೇಂಜ್ ಮಾಡಕ್ಕಾಗಲ್ಲ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಮ್ಮ ಕೆಲವು ಸ್ಥಳೀಯ ನಾಯಕರ ಜೊತೆ ಫೋಟೋ ತಗೆಸಿಕೊಳ್ಳುತ್ತಿದ್ದಾರೆ. ಹೀಗೆ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲ ಸ್ಥಳೀಯ‌ ನಾಯಕರು ನಮ್ಮ ಜೊತೆಗಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌ ಪಕ್ಷ ತೊರೆದಿದ್ದರಿಂದ ಯಾವುದೇ ಅಭಿವೃದ್ಧಿ ಆಗಿಲ್ಲ, ಇದನ್ನು ಜನರಿಗೆ‌ ತಿಳಿಸುವ ಪ್ರಯತ್ನ ಮಾಡುತ್ತೇವೆ, ಪ್ರಜ್ಞಾವಂತ ಮತದಾರರು ಗೋಕಾಕ್ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದ್ದಾರೆ. 
ರಮೇಶ್ ಜಾರಕಿಹೊಳಿ‌ ಮಾನಸಿಕ ಅಸ್ವಸ್ಥ ಎಂಬ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು. ಗೋಕಾಕ್ ಕ್ಷೇತ್ರಗಳಲ್ಲಿ ಅಡ್ಡಾಡಿ ನೋಡಲು ನಡಹಳ್ಳಿಯವರಿಗೆ ಹೇಳಿ, ಇಪ್ಪತ್ತು ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆಂಬುದು ನೋಡಲು ಹೇಳಿ, ಅಭಿವೃದ್ಧಿ ಮಾಡುವ ಪ್ರಣಾಳಿಕೆಯ ಅವಶ್ಯಕತೆ ನಮಗೆ ಇಲ್ಲ, ಗೋಕಾಕ್ ಜನತೆಗೆ ನಮ್ಮ ಮೇಲೆ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.