Asianet Suvarna News Asianet Suvarna News

ಅನರ್ಹ ಶಾಸಕರು ಈಗಾಗಲೇ ಗೆದ್ದಿದ್ದರೆ ಪ್ರಚಾರ ಯಾಕೆ ಮಾಡ್ತೀರಿ? ದೇಶಪಾಂಡೆ

ಯಡಿಯೂರಪ್ಪ ಹೋದಲ್ಲೆಲ್ಲಾ ಅಭ್ಯರ್ಥಿಗಳು ಈಗಾಗಲೇ ಗೆದ್ದಿದ್ದಾರೆ ಅಂತ ಹೇಳುತ್ತಿದ್ದಾರೆ| ಸಾವಿರಾರು ಮತಗಳ ಅಂತರದಿಂದ ಅಭ್ಯರ್ಥಿಗಳು ಗೆಲ್ತಾರೆ‌ ಅಂತಾರೆ| ಹಾಗಿದ್ರೆ ಯಡಿಯೂರಪ್ಪನವರು ಯಾಕೆ ಮತಪ್ರಚಾರಕ್ಕೆ ಬರಬೇಕು? ಅವರು ಸುಮ್ಮನೆ ಕುಳಿತುಕೊಳ್ಳಬಹುದಲ್ವಾ ಎಂದ ದೇಶಪಾಂಡೆ| 

Former Minister R V Deshpande Talks Over Disqualified MLA
Author
Bengaluru, First Published Nov 25, 2019, 12:59 PM IST

ಉತ್ತರಕನ್ನಡ(ನ.25): ಕಾಂಗ್ರೆಸ್- ಜೆಡಿಎಸ್‌ನ 17 ಜನ ಶಾಸಕರು ದ್ರೋಹ ಮಾಡಿದ್ದರಿಂದ ಸಮ್ಮಿಶ್ರ ಸರಕಾರ ಪತನವಾಯ್ತು, ಅವರಿಗಿರುವ ಅನರ್ಹ ಎಂಬ ಹಣೆಪಟ್ಟಿ ಯಾವಾಗಲೂ ಹೋಗುವುದಿಲ್ಲ, ಆ ಹಣೆಪಟ್ಟಿ ಅನರ್ಹರಿಗೆ ಶಾಶ್ವತವಾಗಿರುತ್ತದೆ. ಅನರ್ಹ ಶಾಸಕರಿಗೆ ಯಾವ ಶಿಕ್ಷೆ ಕೊಡಬೇಕು, ಯಾವ ರೀತಿ ಶಿಕ್ಷೆ‌ ಕೊಡಬೇಕೆಂದು ಚಿಂತಿಸಬೇಕಿದೆ ಎಂದು ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರು ಹೇಳಿದ್ದಾರೆ.

ಸೋಮವಾರ ಜಿಲ್ಲೆಯ ಕಿರವತ್ತಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅವರು, ಸಿಎಂ ಯಡಿಯೂರಪ್ಪ ಹೋದಲ್ಲೆಲ್ಲಾ ಅಭ್ಯರ್ಥಿಗಳು ಈಗಾಗಲೇ ಗೆದ್ದಿದ್ದಾರೆ ಅಂತ ಹೇಳುತ್ತಿದ್ದಾರೆ. ಸಾವಿರಾರು ಮತಗಳ ಅಂತರದಿಂದ ಅಭ್ಯರ್ಥಿಗಳು ಗೆಲ್ತಾರೆ‌ ಅಂತಾರೆ, ಹಾಗಿದ್ರೆ ಯಡಿಯೂರಪ್ಪನವರು ಯಾಕೆ ಮತಪ್ರಚಾರಕ್ಕೆ ಬರಬೇಕು? ಅವರು ಸುಮ್ಮನೆ ಕುಳಿತುಕೊಳ್ಳಬಹುದಲ್ವಾ ಎಂದು ಪ್ರಶ್ನಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಾರಿಯ‌ ಚುನಾವಣೆ ಸಾಮಾನ್ಯದಲ್ಲ ವಿಶೇಷವಾಗಿದೆ. ಪಕ್ಷ ಬಿಟ್ಟ ಶಾಸಕರು ಅನರ್ಹರು, ಪಕ್ಷದಲ್ಲಿರಲು ಲಾಯಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಜನರು ಅನರ್ಹ ಶಾಸಕರಿಗೆ ಸರಿಯಾದ ಪಾಠವನ್ನೇ ಕಲಿಸಬೇಕಿದೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

Follow Us:
Download App:
  • android
  • ios