ಕರ್ನಾಟಕದಲ್ಲಿ ದೇಶದ್ರೋಹಿಗಳ ಸರ್ಕಾರ ಆಡಳಿತ ನಡೆಸುತ್ತಿದೆ: ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ರೇಣುಕಾಚಾರ್ಯ
ನಾಡು, ನುಡಿ ನೆಲ, ಜಲದ ವಿಚಾರದಲ್ಲಿ ಹೋರಾಟ ಮಾಡಿದವರ ಮೇಲಿನ ಕೇಸ್ ವಾಪಸ್ ಪಡೆಯಿರಿ. ದೇಶವಿರೋಧದ ಮೇಲೆ ಕೇಸ್ ಹಾಕಿದ್ದನ್ನು ಹಿಂಪಡೆದರೆ ಅವರು ಮತ್ತಷ್ಟು ಮೆರಿತಾರೆ. ಜನ ನಿಮಗೆ ಅವಕಾಶ ಕೊಟ್ಟಿದ್ದಾರೆ, ನಿಮ್ಮ ಇಬ್ಬಗೆ ನೀತಿ ಕೈಬಿಡಿ. ಭಯೋತ್ಪಾದನೆಗೆ ಬೆಂಬಲ ಕೊಡುವ ಕೆಲಸ ಕೈಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ
ದಾವಣಗೆರೆ(ಅ.12): ಮಹಿಷ ಮರ್ಧನ ರೀತಿ ರಾಜ್ಯ ಸರ್ಕಾರ ಮರ್ಧನ ಆಗುತ್ತದೆ. ವಿಜಯ ದಶಮಿ ದಿನ ಸರ್ಕಾರ ಹಿಂದೂಗಳ ಭಾವನೆಗಳನ್ನ ಕೆರಳಿಸಿದೆ. ರಾಜ್ಯದಲ್ಲಿ ಭಯೋತ್ಪಾದಕರ ಸರ್ಕಾರ ಹಿಂಬಾಗಿಲ ಮೂಲಕ ಆಡಳಿತ ನಡಿಸುತ್ತಿದೆ. ದೇಶದ್ರೋಹಿಗಳ ಸರ್ಕಾರ ಆಡಳಿತ ನಡಿಸ್ತಾ ಇದೆ. ಈ ಹಿಂದೆ ಪಿಎಫ್ಐ,ಎಸ್ ಟಿಪಿಐ ಮೇಲೆ ಹಾಕಿದ ಕೇಸ್ ಹಿಂಪಡೆದಿದ್ದರು. ಆ ಕಾರಣಕ್ಕೆ ಇಂದು ಭಯೋತ್ಪಾದನೆ ಹೆಚ್ಚಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಕಳೆದ ಮೂರು ವರ್ಷಗಳ ಹಿಂದೆ ಪೊಲೀಸ್ ಠಾಣೆ ಸುಡಲು ಹೋಗಿದ್ದರು, ಕಲ್ಲು ತೋರಾಟ ಮಾಡಿದ್ದರು. ಮಾರಕಾಸ್ತ್ರಗಳನ್ನು ಬಳಕೆ ಮಾಡಿದ್ದರು, ಪೊಲೀಸ್ ಮೇಲೆ ಹಲ್ಲೆ ಸಹ ಮಾಡಿದ್ದರು. ಆ ವೇಳೆ ಸುಮಾರು 120 ಜನರ ಮೇಲೆ ಕೇಸ್ ಹಾಕಲಾಗಿತ್ತು. ಆ ಕೇಸ್ ಇವತ್ತು ಈ ಸರ್ಕಾರ ಹಿಂಪಡಿತಾ ಇದೆ, ನಾಚಿಕೆ ಆಗಲ್ವಾ ನಿಮಗೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರಿದ್ದಾರೆ.
ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ಸೂಟ್ ಹೊಲೆಸಿ, ಕಾಯ್ತಿದ್ದಾರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ನಾಡು, ನುಡಿ ನೆಲ, ಜಲದ ವಿಚಾರದಲ್ಲಿ ಹೋರಾಟ ಮಾಡಿದವರ ಮೇಲಿನ ಕೇಸ್ ವಾಪಸ್ ಪಡೆಯಿರಿ. ದೇಶವಿರೋಧದ ಮೇಲೆ ಕೇಸ್ ಹಾಕಿದ್ದನ್ನು ಹಿಂಪಡೆದರೆ ಅವರು ಮತ್ತಷ್ಟು ಮೆರಿತಾರೆ. ಜನ ನಿಮಗೆ ಅವಕಾಶ ಕೊಟ್ಟಿದ್ದಾರೆ, ನಿಮ್ಮ ಇಬ್ಬಗೆ ನೀತಿ ಕೈಬಿಡಿ. ಭಯೋತ್ಪಾದನೆಗೆ ಬೆಂಬಲ ಕೊಡುವ ಕೆಲಸ ಕೈಬಿಡಬೇಕು ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.