"

ಅಥಣಿ(ನ.28): ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರ ಟಾಕ್ ವಾರ್ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ವಿರುದ್ಧ ಮಾಜಿ ಸಚಿವ ಎಂ ಬಿ ಪಾಟೀಲ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಗುರುವಾರ ಅಥಣಿ ಕ್ಷೇತ್ರದ ಕೋಕಟನೂರ ಗ್ರಾಮದಲ್ಲಿ  ನಡೆದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಪ್ರಚಾರದಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು, ಅನರ್ಹ ಶಾಸಕ ಮಹೇಶ್ ಕುಮಟಳ್ಳಿಯನ್ನ ಕಾಂಗ್ರೆಸ್ ನಿಂದ ಗೆಲ್ಲಿಸಿದ ಪಾಪ ನಮಗೂ ತಟ್ಟಲಿದೆ. ಮಹೇಶ್ ಕುಮಟಳ್ಳಿ ಮಾಡಿರುವ ದೋ ನಂಬರ್ ಕೆಲಸಕ್ಕೆ ತಕ್ಕ ಪಾಠ ಕಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಒಂದು ನಂಬರ್ ಗೆ ವೋಟ್ ಹಾಕಿ(ಗಜಾನನ ಮಂಗಸೂಳಿ) ಕುಮಟಳ್ಳಿ ಗುಳೆ ಹೋಗುವ ಹಾಗೆ ಮಾಡಿ. ಮಹೇಶ್ ಕುಮಟಳ್ಳಿ ಆಕಳ ಮುಖ ಹೋರಿ ಗುಣ ಇರುವ ವ್ಯಕ್ತಿಯಾಗಿದ್ದಾರೆ. ಅವರ ಮುಖವಾಡ ನಮಗೂ ಕೂಡ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ. 

ಇಂತಹ ಆಕಳ ಮುಖ ಹೋರಿ ಗುಣ ಹೊಂದಿರುವ ಮಹೇಶ್ ಕುಮಟಳ್ಳಿಗೆ ಸೋಲಿಸಿ ಮುಂದೆ ಬರುವ ಶಾಸಕರಿಗೆ ಭಯ ಹುಟ್ಟಿಸಬೇಕಾಗಿದೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.