Asianet Suvarna News Asianet Suvarna News

ಡಿಸಿಸಿ ಬ್ಯಾಂಕ್ ಅವ್ಯವಹಾರ ಇತ್ಯರ್ಥಕ್ಕೆ ಕಿಮ್ಮನೆ ಡೆಡ್‌ಲೈನ್

ಚುನಾವಣೆಯಲ್ಲಿ ಸೋತ ನಂತರ ಮಾದ್ಯಮಗಳಿಂದ ಕೊಂಚ ದೂರವೇ ಉಳಿದಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇದೀಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಆರೋಪದಲ್ಲಿ ರಾಜಕಾರಣವನ್ನು ಎಳೆದು ತಂದಿದ್ದಾರೆ.

former minister kimmane ratnakar attacks Shimoga DCC Bank President R M Manjunath Gowda
Author
Bengaluru, First Published Jul 17, 2018, 10:06 PM IST

ಶಿವಮೊಗ್ಗ(ಜು.17)  ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಅವರ ತೀರ್ಥಹಳ್ಳಿ ಹಾಗೂ ಶಿವಮೊಗ್ಗ ದಲ್ಲಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು ಎಂದು ಸರ್ಕಾರ ಈ ಹಿಂದೆಯೆ ಸದನಕ್ಕೆ ಮಾಹಿತಿಯನ್ನು ನೀಡಿತ್ತು. ಆದರೆ ಕೊಣಂದೂರು ಉದ್ಯಮಿ ಯೊಬ್ಬರಿಗೆ 83 ಲಕ್ಷ ರೂಪಾಯಿ ಗೆ ಅದೆ ಆಸ್ತಿ ಮಾರಾಟ ಮಾಡಲು ಅಗ್ರಿಮೆಂಟ್ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.

ನಕಲಿ ಬಂಗಾರ ಅಡವಿಟ್ಟು ಡಿಸಿಸಿ ಬ್ಯಾಂಕ್ ನಲ್ಲಿ 65 ಕೋಟಿ ರೂ. ಹಗರಣ ನಡೆದಿತ್ತು. ಆದರೆ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಅಸ್ತಿ ಮುಟ್ಟುಗೋಲು ಹಾಕಿಕೊಳ್ಳು ಸಹಕಾರಿ ಇಲಾಖೆಯ ನಿಬಂಧಕರು ನೀಡಿದ್ದ  ಆದೇಶ ಇನ್ನೂ ಜಾರಿಯಾಗಿಲ್ಲ ಎಂದು ಹೇಳಿದ್ದಾರೆ.

56 ಕೋಟಿ ಮತ್ತು ಬಡ್ಡಿ ಸೇರಿಸಿ 100 ಕೋಟಿ ರೂಪಾಯಿ ಆಗುತ್ತದೆ. ಇಷ್ಟಾದರೂ ಡಿಸಿಸಿ ಬ್ಯಾಂಕ್ ಎಂಡಿ ಯಾಕೆ ಸುಮ್ನನಿದ್ದಾರೆ ಯಾಕೆ ? ಈ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಬೇಕು ಎಂದು ಕಿಮ್ಮನೆ ಆಗ್ರಹಿಸಿದ್ದಾರೆ. ನಾನು 8 ದಿನಗಳ ಕಾಲಾವಕಾಶ ನೀಡಯತ್ತೇನೆ. ಅಷ್ಟರಲ್ಲಿ ಕ್ರಮ ಜರುಗಿಸದೇ ಹೋದರೆ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಲ್ಲಿ 50 ಸಾವಿರ ರೂ.‌ ರೈತರ ಸಾಲಮನ್ನಾ ಮಾಡಿ ಜಿಲ್ಲೆಗೆ 70 ಕೋಟಿ ರೂ. ಬಿಡುಗಡೆ ಮಾಡಲಾಯಿತು. ಆದರೆ ಡಿಸಿಸಿ ಬ್ಯಾಂಕ್ ನವರು ತಮಗೆ ಬೇಕಾದ ಸೊಸೈಟಿ ಗಳಿಗೆ 5 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ಯಾವುದೇ ಇಲಾಖೆಯ ಅನುಮತಿ ಇಲ್ಲದೇ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಯಲ್ಲಿ 49 ಲಕ್ಷ ರೂಪಾಯಿ ಮೌಲ್ಯ ದ ಕಟ್ಟಡವನ್ನು  ಆಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಮಂಜುನಾಥ ಗೌಡರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದಲ್ಲಿರುವ ಸಂಪರ್ಕಗಳಿಂದ ಪ್ರಭಾವ ಬೀರಿ ಹಗರಣ ಮುಚ್ಚಿ ಹಾಕಲು ಪ್ರಯತ್ನ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Follow Us:
Download App:
  • android
  • ios