'ಹೆಸರು ಬದಲಾವಣೆ ಮಾಡೋದೆ ಜೀವನದ ಏಕೈಕ ಸಾಧನೆ ಅಂದ್ಕೊಂಡಿದ್ದಾರೆ ಮೋದಿ'
* ಹೆಸರು ಬದಲಾವಣೆ ಬದಲು ಬೆಲೆ ಏಳಿಸಿ- ಡಾ.ಎಚ್‌ಸಿಎಂ ಆಗ್ರಹ
* ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿರುವುದು ಸ್ವಾಗತ
* ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಮಹದೇವಪ್ಪ
ಮೈಸೂರು(ಆ.07): ಹೆಸರು ಬದಲಾವಣೆ ಮಾಡುವುದೇ ಜೀವನದ ಏಕೈಕ ಸಾಧನೆ ಎಂದುಕೊಂಡಿರುವ ಪ್ರಧಾನಿ ಮೋದಿಯವರು ಇಂತಹ ಹುಸಿ ತಂತ್ರಗಳನ್ನು ಬದಿಗೊತ್ತಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಆಹಾರ ಸಾಮಗ್ರಿಗಳ ಬೆಲೆ ತಗ್ಗಿಸಿ ತಮ್ಮ ದೇಶಭಕ್ತಿ ಸಾಬೀತುಪಡಿಸಲಿ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಗ್ರಹಿಸಿದ್ದಾರೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿರುವುದನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.
ಕ್ಷೇತ್ರ ಬದಲಿಸುತ್ತಿದ್ದಾರಾ ಕೈ ಪಾಳಯದ ಪ್ರಭಾವಿ
ಆದರೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೊಟೆರಾ ಕ್ರಿಕೆಟ್ ಸ್ಟೇಡಿಯಂ ಅನ್ನು ಮೋದಿ ಕ್ರಿಕೆಟ್ ಸ್ಟೇಡಿಯಂ ಅಂತ ಬದಲಿಸಿದ್ದು, ಮೋದಿಯವರೇನು ಕ್ರಿಕೆಟ್ ಆಟಗಾರರೇ? ಎಂದು ಪ್ರಶ್ನಿಸಿದ್ದಾರೆ.