ಹಾಸನ(ಜೂ.11): ರೈತರನ್ನು ಭಿಕ್ಷುಕರಂತೆ ಕಾಣಲು ಜೋಳ ಬೆಳೆಯುವ ರೈತರಿಗೆ 100 ರು.ಗಳನ್ನು ಸರಕಾರ ಘೋಷಣೆ ಮಾಡಿದ್ದು, ರೈತರು ಬೆಳೆದ ಬೆಳೆಗೆ ಶೇ. 50 ರಷ್ಟು ಪರಿಹಾರ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಹೆಚ್‌.ಡಿ. ರೇವಣ್ಣ ಆಗ್ರಹಿಸಿದ್ದಾರೆ. 

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಬೆಳೆದ ಬೆಳೆಗೆ ಸಬ್ಸಿಡಿ ಕಡಿಮೆ ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜೋಳಕ್ಕೆ ಸಬ್ಸಿಡಿಯನ್ನು 100 ರು. ಕೊಡುತ್ತಿರುವುದು ರೈತರಿಗೆ ಅವಮಾನ ಮಾಡಿದಂತೆ ಎಂದು ಹೇಳಿದರು. ಕೂಡಲೇ ಈ ಆದೇಶ ಕೈಬಿಟ್ಟು ರೈತರು ಬೆಳೆದ ಬೆಳೆಗೆ ಶೇ. 50 ರಷ್ಟುಪರಿಹಾರವಾಗಿ ಹಣ ಕೊಡಬೇಕು ಎಂದು ಒತ್ತಾಯಿಸಿದರು.

ಕೊರೋನಾ ಸೇವೆ ಮಾಡುತ್ತಲೇ ಜೀವ ಬಿಟ್ಟ ವೈದ್ಯ..!

ಇನ್ನು ಸೆಣಬು ಸಬ್ಸಿಡಿಯನ್ನು ಇದುವರೆಗೂ ಕೊಟ್ಟಿಲ್ಲ .ಅಡಿಕೆ ಬೆಲೆ ಕುಸಿದು ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. 10 ಎಕರೆ ಪ್ರದೇಶದಲ್ಲಿ ಬೆಳೆದ ರೈತರ ಜೋಳಕ್ಕೂ 100 ರು. 100 ಎಕರೆ ಪ್ರದೇಶದ ಜೋಳಕ್ಕೂ 100 ರು. ಸಬ್ಸಿಡಿ ಕೊಡುವ ಮೂಲಕ ರೈತರ ಮರ್ಯಾದೆಯನ್ನು ಹಾಳು ಮಾಡುತ್ತಿರುವುದಾಗಿ ಸಿಡಿಮಿಡಿಗೊಂಡರು.

ಮುಸುಕಿನ ಜೋಳ ಹಾಗೂ ಆಲೂಗಡ್ಡೆಗೆ ಸಬ್ಸಿಡಿಯನ್ನು ಈಗ ನೀಡುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅವರ ಅ​ಧಿಕಾರಾವಧಿ​ಯಲ್ಲಿ ನೀಡಿದ ಸಬ್ಸಿಡಿಯನ್ನು ಬಿಜೆಪಿ ಕಡಿತಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಮುಗಿದ ಮೇಲೆ ಸರ್ಕಾರ ಸಬ್ಸಿಡಿ ನೀಡುತ್ತದೆ ಎಂದು ಕಾಣುತ್ತದೆ ಎಂದು ವ್ಯಂಗ್ಯವಾಡಿದರು.

ಇಲಾಖೆಯ ಸರ್ವೆ ಪ್ರಕಾರ ಜಿಲ್ಲೆಯಲ್ಲಿ 3,15,693 ಎಕರೆ ಪ್ರದೇಶದಲ್ಲಿ 1 ಲಕ್ಷ, ಕುಟುಂಬದವರು ಮೆಕ್ಕೆಜೋಳ ಬೆಳೆದಿದ್ದಾರೆ. ಒಟ್ಟು 97 ಸಾವಿರ ಹೆಕ್ಟೇರ್‌ ಪ್ರದೇಶ ಜೋಳ ಬೆಳೆದಿದ್ದರೆ 5 ಕೋಟಿ ರು. ಸಬ್ಸಿಡಿ ಬರಬೇಕಾಗಿದ್ದು, ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಬಗ್ಗೆ ಏನು ಪರಿಹಾರ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಪ್ಯಾಕೇಜ್‌ ಘೋಷಣೆ ಮಾಡಿದರಲ್ಲಿ ರೈತರಿಗೆ ಬರಬೇಕಾದ 5000 ಸಾವಿರ ರು. ಬಂದಿರುವುದಿಲ್ಲ. ಬೀದಿ ವ್ಯಾಪಾರಿ, ಮಡಿವಾಳ, ಸವಿತ ಸಮಾಜಕ್ಕೆ ಹಣ ಬಂದಿಲ್ಲ. 100 ರು. ಬದಲು ಬೆಳೆದ ಬೆಳೆಯ ಶೇ.50 ರಷ್ಟುಸಬ್ಸಿಡಿ ನೀಡಬೇಕು. ಕೇವಲ ಬಾಯಿ ಮಾತಲ್ಲಿ ಹೇಳುವುದನ್ನು ಬಿಟ್ಟು, ಘೋಷಣೆ ಮಾಡಿದನ್ನು ತಕ್ಷಣ ಕಾರ್ಯಗತ ಮಾಡಬೇಕು. ಕಾಳ ಸಂತೆಯಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಮಾರಾಟ ಮಾಡದಂತೆ ಎಚ್ಚರಿಕೆ ವಹಿಸಬೇಕು ಸಲಹೆ ನೀಡಿದರು.

ವರ್ಗಾವಣೆ ದಂಧೆ

ಹಾಸನ ಜಿಲ್ಲೆಯ ಪ್ರದೇಶಗಳಿಗೆ ಕೆಲ ಇಲಾಖೆಯ ಅ​ಕಾರಿಗಳ ವರ್ಗಾವಣೆ ಹಾಗೂ ಬಡ್ತಿಗೆ ಲಕ್ಷಾಂತರ ರು. ಹಣವನ್ನು ಪಡೆಯಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದು, ಒಂದು ಹುದ್ದೆಗೆ ಕನಿಷ್ಠ 10 ಲಕ್ಷ ರು. ಹಣವನ್ನು ಪಡೆಯಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಅ​ಧಿಕಾರಿಗಳ ವರ್ಗಾವಣೆ ಹಾಗೂ ಹಣ ವಸೂಲಾತಿ ಬಿಜೆಪಿ ಸರ್ಕಾರ ಬಂದ ಮೇಲೆ ಹೆಚ್ಚಾಗಿದ್ದು, ಇದರಿಂದ ಆಡಳಿತದ ಮೇಲೆ ಕೆಟ್ಟಪರಿಣಾಮ ಬೀರಲಿದೆ ಎಂದು ಹೆಚ್‌.ಡಿ. ರೇವಣ್ಣನವರು ಎಚ್ಚರಿಕೆ ನೀಡಿದರು. ಹಿಂದಿನ ಸರ್ಕಾರದಲ್ಲಿನ ಮಂಜೂರಾತಿಯಾದ ಕಾಮಗಾರಿ ಪಟ್ಟಿಯಂತೆ ಜಿಲ್ಲೆಯ ಅಭಿವೃದ್ಧಿ ಆಗಬೇಕು, ಲೋಕೋಪಯೋಗಿ ಇಲಾಖೆ, ನಗರ ಸಭೆ, ಇನ್ನಿತರ ಇಲಾಖೆ ಕೆಲಸಗಳು ನಿಂತು ಹೋಗಿದೆ. ನಮ್ಮ ಕಾಲದ ಎಷ್ಟೋ ಕಾಮಗಾರಿಗಳು ಕೆಲಸವಾಗದೆ ಉಳಿದಿದ್ದು, ಮೊದಲು ಪೊರ್ಣಗೊಳಿಸಲು ಮುಂದಾಬೇಕು. ಡೈರಿ ವೃತ್ತದಿಂದ ಉದ್ದೂರು ವರೆಗಿನ ರಸ್ತೆ ಕಾಮಗಾರಿಗೆ ಭೂಸ್ವಾ​ಧೀನ ಮಾಡಿಕೊಂಡಿರುವ ಎಲ್ಲಾ ರೈತರಿಗೆ ಪರಿಹಾರ ಕೊಡಬೇಕು ಎಂದರು.

ಹಾಸನ ಜಿಲ್ಲೆಯಲ್ಲಿ ನಿರ್ಮಾಣವಾಗಿರುವಂತಹ ಸಮುದಾಯ ಭವನಗಳಿಗೆ ಯಾವ ರಾಜಕೀಯ ಪಕ್ಷದ ನಾಯಕರ ಫೋಟೋಗಳನ್ನು ಹಾಗೂ ಹೆಸರುಗಳನ್ನು ಹಾಕಬಾರದು. ಇತ್ತೀಚೆಗೆ ಸಮುದಾಯ ಭವನವೊಂದರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಹೆಸರು ಇರುವುದನ್ನು ತೆಗೆದಿರುವಾಗ ಬೇರೆ ಯಾವುದೇ ನಾಯಕರ ಹೆಸರನ್ನು ಹಾಕಬಾರದು ಎಲ್ಲರಿಗೂ ಒಂದೇ ನ್ಯಾಯ ಇರಬೇಕು ಎಂದು ಎಚ್ಚರಿಸಿದರು.

ಕೆಲ ರಾಜಕೀಯ ಪಕ್ಷದ ನಾಯಕರು ಸ್ಯಾನಿಟೈಸರ್‌ ಬಾಟಲಿ ವಿತರಣೆಯಲ್ಲಿ ರಾಜಕೀಯ ಮಾಡಲು ಮುಂದಾಗಿದ್ದಾರೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇವರ ಫೋಟೊ ಇಡುವ ಮೂಲಕ ರಾಜಕೀಯ ಮಾಡುತ್ತಿದ್ದು, ಇದಕ್ಕೆ ಸರ್ಕಾರಿ ಅ​ಕಾರಿಗಳು ಸಹ ಸಹಕಾರ ನೀಡುತ್ತಿದ್ದಾರೆ. ಇದನ್ನು ನಾವು ವಿರೋ​ಸುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆದರೆ ನಮ್ಮ ಕಾರ್ಯಕರ್ತರು ಅವುಗಳನ್ನು ಕಿತ್ತೆಸೆಯುವ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷ ಎಚ್‌.ಪಿ. ಸ್ವರೂಪ್‌, ಅಗಿಲೆ ಯೋಗೇಶ್‌ ಇತರರು ಇದ್ದರು.

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್‌

"