ತುಮಕೂರು(ಆ.06): ಜನ ಸಂಕಷ್ಟದಲ್ಲಿದ್ದರೂ ದೇವರ ಕಾರ್ಯ ಮಾಡುತ್ತಿದ್ದಾರೆ ಎಂದು ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ನಡೆಯುತ್ತಿರುವ ಶಿಲಾನ್ಯಾಸದ ಬಗ್ಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡ ನಮ್ಮಲ್ಲಿ ನೂರು ದೇವಸ್ಥಾನ ಕಟ್ಟಿದ್ದೇನೆ. ನಾನೇನು ಹೇಳೋದು. ಜನ ಸಂಕಷ್ಟದಲ್ಲಿದ್ದರೂ ದೇವರ ಕಾರ್ಯ ಮಾಡುತ್ತಿದ್ದಾರೆ, ಮಾಡಲಿ. ಯಾರು ಬೇಡ ಅಂತಾ ಹೇಳಿದ್ದು? ಏನೋ ಮಾಡುತ್ತಿದ್ದಾರೆ ಮಾಡಲಿ ಎಂದು ಹೇಳಿದ್ದಾರೆ.

ರಾಮಮಂದಿರ ನಿರ್ಮಾಣ ನಮ್ಮೆಲ್ಲರ ಸಂತೋಷದ ಘಳಿಗೆ: ಹೆಚ್.ಡಿ.ಕುಮಾರಸ್ವಾಮಿ

ಇದಕ್ಕೆ ರಾಜಕೀಯ ಬೆರೆಸುವ ಅವಶ್ಯಕತೆಯಿಲ್ಲ. ರಾಮ ಒಂದು ಪಕ್ಷಕ್ಕೆ ಸೀಮಿತವಿಲ್ಲ. 130 ಕೋಟಿ ಜನಕ್ಕೆ ರಾಮ ಇದ್ದಾನೆ ಎಂದು ತಿಳಿಸಿದ್ದಾರೆ. 

ಉತ್ತರ ಪ್ರದೇಶ ಅಯೋಧ್ಯೆಯಲ್ಲಿ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣ ಕಾರ್ಯದ ಶಿಲಾನ್ಯಾಸ ನೆರವೇರಿಸಿದ್ದರು.