ಹುಬ್ಬಳ್ಳಿ(ಡಿ.02): ಐಟಿ ಇಲಾಖೆಯವರು ನೊಟೀಸ್ ನೀಡಿದ್ದಾರೆ. ನನಗೆ ಸ್ವಲ್ಪ ಉಸಿರಾಡಲು ಬಿಡಿ ಅಂತ ಕೇಳಿಕೊಂಡಿದ್ದೆ, ಆದರೆ ಕೂಡಲೇ ಬನ್ನಿ ಅಂತಾ ಹೇಳಿದ್ದಾರೆ. ಅಸೆಸ್ಮೆಂಟ್ ಎಲ್ಲಾ ನೋಡಬೇಕಾಗಿದೆ, ಈಗ ಹೊರಟಿದ್ದೀನಿ. ಇರಲಿ ಕಾನೂನು ಅವರ ಕೈಯಲ್ಲಿದೆ. ಏನು ಬೇಕಾದರೂ ಮಾಡಬಹುದು ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ. 

ಸೋಮವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಗವಾಡ ಉಪಚುನಾವಣ ಪ್ರಚಾರಕ್ಕೆ ಅನುಮತಿ ಕೊಟ್ಟಿಲ್ಲ. ಅಧಿಕಾರ ಅವರದ್ದಾಗಿದೆ, ಹೇಗೆ ಬೇಕು ಹಾಗೆ ಮಾಡಲಿ. ದುಡ್ಡಿನ ಮೇಲೆಯೇ ರಾಜಕಾರಣ ನಡೆಯಲ್ಲ. ಮತದಾರರು ಬಿಜೆಪಿ ಬಳಿ ನೋಟ್ ಇಸ್ಕೊಂಡು, ಅನರ್ಹರ ವಿರುದ್ಧ ಓಟ್ ಹಾಕ್ತಾರೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮತ್ತೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರೂ ಅವರದೇ ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಬಗ್ಗೆ ಎಐಸಿಸಿಯಿಂದ ಕೆಲ ಮಾತುಗಳು ಬಂದಿದೆ. ಅವರು ಹೇಳಿದ ಮೇಲೆ ನಾವು ಮಾತಾಡೋದು ಎಂದು ಹೇಳಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.