Asianet Suvarna News Asianet Suvarna News

‘ಅನರ್ಹ ಶಾಸಕರು ಯಡಿಯೂರಪ್ಪ ಪೈಜಾಮ್‌ ಬಿಚ್ಚಿಸ್ತಾರೆ’

ಬಿಜೆಪಿ ಸರ್ಕಾರವೂ ಇರಲ್ಲ, ಯಾರೂ ಮಂತ್ರಿಯಾಗಲ್ಲ: ಡಿ.ಕೆ. ಶಿವಕುಮಾರ್‌|ಹಿರೇಕೆರೂರು ಕ್ಷೇತ್ರದ ಚುನಾವಣೆಗೆ ದೊಡ್ಡ ದೊಡ್ಡ ಸೂಟ್‌ಕೇಸ್‌ ಬಂದಿದೆ| ಯಡಿಯೂರಪ್ಪ ಐದಾರು ತಿಂಗಳಿಗೆ ಮಾತ್ರ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೈಕಮಾಂಡ್‌ಗೆ ಕೇಳಿಕೊಂಡಿದ್ದಾರೆ| ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಬಟನ್‌ ಒತ್ತಿ ಬಿ.ಸಿ. ಪಾಟೀಲ ಅವರಿಗೆ ವಿಶ್ರಾಂತಿ ಕೊಟ್ಟು, ಬನ್ನಿಕೋಡ ಅವರನ್ನು ವಿಧಾನಸಭೆಗೆ ಕಳುಹಿಸಿ ಡಿ.ಕೆ. ಶಿವಕುಮಾರ್‌|

Former Minister D K Shivakumar Talks Over CM B S Yediyurappa
Author
Bengaluru, First Published Dec 2, 2019, 7:33 AM IST

ಹಿರೇಕೆರೂರು[ಡಿ.02]: ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದೇನೆ ಎಂಬುದು ಶುದ್ಧ ಸುಳ್ಳು. ಉಪಚುನಾವಣೆಯ ಫಲಿತಾಂಶದ ಆನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರವೂ ಇರುವುದಿಲ್ಲ. ಯಾರೂ ಮಂತ್ರಿಯೂ ಸಹ ಆಗುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರು ಹೇಳಿದ್ದಾರೆ. 

ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಚ್‌. ಬನ್ನಿಕೋಡ ಪರ ಮತಯಾಚನೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ನನ್ನ ಕಷ್ಟಕಾಲದ ಸಂದರ್ಭ ನನ್ನ ಮೇಲೆ ಬಿಜೆಪಿ ಸ್ನೇಹಿತರು ಸುಳ್ಳಿನ ಆರೋಪ ಹೊರಸಿ ಕೊಡಬಾರದ ತೊಂದರೆ, ಕಿರುಕುಳ ಕೊಟ್ಟು ತಿಹಾರ ಜೈಲಿಗೆ ಕಳಿಸಿದರು. ನನ್ನ ಸ್ನೇಹಿತರಿಗೆ, ಕುಟುಂಬಕ್ಕೆ ತೊಂದರೆ ಕೊಟ್ಟ ಸಂದರ್ಭದಲ್ಲಿ ತಾವೆಲ್ಲಾ ಹೋರಾಟ ಮಾಡಿ, ದೇವರಲ್ಲಿ ಪ್ರಾರ್ಥನೆ ಮಾಡಿ, ಪ್ರತಿಭಟನೆ ಮಾಡಿ ನನ್ನ ಪರವಾಗಿ ನ್ಯಾಯ ಸಿಗಬೇಕು ಎಂದು ಪ್ರಾರ್ಥನೆ ಮಾಡಿರೋದಕ್ಕೆ ಐವತ್ತು ದಿನದಲ್ಲಿ ಮತ್ತೆ ನಿಮ್ಮ ಸೇವೆಗೆ ಬಂದಿದ್ದೇನೆ. ನಿಮಗೆಲ್ಲಾ ಕೋಟಿ ಕೋಟಿ ನಮನಗಳನ್ನು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪು ಅತ್ಯಂತ ಮಹತ್ವದ್ದು. ನಿಮ್ಮ ತೀರ್ಪಿಗೆ ದ್ರೋಹ ಆಗಿದೆ. ಅದರ ವಿರುದ್ಧ ಈ ಚುನಾವಣೆ ಮಾಡ್ತಿದ್ದೇವೆ. ನಾನು ಈ ಚುನಾವಣಾ ಪ್ರಚಾರಕ್ಕೆ ಆತ್ಮವಿಶ್ವಾಸದಿಂದ ಬಂದಿದ್ದೇನೆ. ಬಿ.ಸಿ ಪಾಟೀಲ ಅವರ ಆಚಾರ-ವಿಚಾರ ಹಾಗೂ ಬನ್ನಿಕೋಡ ಅವರ ಆಚಾರ-ವಿಚಾರಕ್ಕೂ ಮೈಲುಗಟ್ಟಲೆ ವ್ಯತ್ಯಾಸವಿದೆ. ಬಿ.ಸಿ. ಪಾಟೀಲ ಅವರು ಬಣಕಾರ ಅವರನ್ನು ಬಿಟ್ಟು ಹಳ್ಳಿಗೆ ಹೋಗೋಕೆ ಆಗ್ತಾ ಇಲ್ಲ. ಹೋಮ್‌ ಮಿನಿಸ್ಟರ್‌ ಇಲ್ಲದೆ ಹೋಗೋಕೆ ಆಗ್ತಿಲ್ಲಾ. ಈ ಪರಿಸ್ಥಿತಿ ಬಣಕಾರ ಹಾಗೂ ಬಣಕಾರ ಶಿಷ್ಯರಿಗೆ ಬರಬಾರದಿತ್ತು. ಬಣಕಾರ್‌ ಹಾಗೂ ಅವರ ಸ್ನೇಹಿತರು ಸಮಾಧಿಯಾಗುವುದು ನಿಶ್ಚಿತ ಎಂದು ಟಾಂಗ್‌ ನೀಡಿದರು.

ಅನರ್ಹರು ಬಿಎಸ್‌ವೈ ಪೈಜಾಮ ಬಿಚ್ಚಿಸ್ತಾರೆ:

15 ಅನರ್ಹ ಶಾಸಕರು ಯಡಿಯೂರಪ್ಪ ಅವರ ಪೈಜಾಮ್‌, ಜೇಬು ಎಲ್ಲವನ್ನು ಸೇರಿದಂತೆ ಬಿಚ್ಚಿಸುತ್ತಾರೆ. ಹಿರೇಕೆರೂರು ಕ್ಷೇತ್ರದ ಚುನಾವಣೆಗೆ ದೊಡ್ಡ ದೊಡ್ಡ ಸೂಟ್‌ಕೇಸ್‌ ಬಂದಿದೆ. ಯಡಿಯೂರಪ್ಪ ಐದಾರು ತಿಂಗಳಿಗೆ ಮಾತ್ರ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೈಕಮಾಂಡ್‌ಗೆ ಕೇಳಿಕೊಂಡಿದ್ದಾರೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಬಟನ್‌ ಒತ್ತಿ ಬಿ.ಸಿ. ಪಾಟೀಲ ಅವರಿಗೆ ವಿಶ್ರಾಂತಿ ಕೊಟ್ಟು, ಬನ್ನಿಕೋಡ ಅವರನ್ನು ವಿಧಾನಸಭೆಗೆ ಕಳುಹಿಸಿ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಚ್‌. ಬನ್ನಿಕೋಡ, ಶಾಸಕ, ಮಾಜಿ ಸಚಿವ ಎಚ್‌.ಕೆ. ಪಾಟೀಲ, ಕಾಂಗ್ರೆಸ್‌ ಮುಖಂಡರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಕೊಟ್ರೇಶಪ್ಪ ಬಸಗಣ್ಣಿ, ಸಂಜೀವ ನೀರಲಗಿ, ಡಿ.ಆರ್‌. ಪಾಟೀಲ, ಮಾಲತೇಶ ಗೋಣಿ, ಟಿ. ಈಶ್ವರ, ಜಿಪಂ ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ, ಸಿದ್ದು ತಂಬಾಕದ, ಪ್ರಶಾಂತ ತಿರಕಪ್ಪನವರ, ಬಸವರಾಜ ಪರಪ್ಪನವರ, ಪ್ರಕಾಶ ಬನ್ನಿಕೋಡ, ಎಸ್‌.ಬಿ. ತಿಪ್ಪಣ್ಣನವರ, ಬಿ.ಎನ್‌. ಬಣಕಾರ, ಎಚ್‌.ಎಸ್‌. ಕೋವಣ್ಣನವರ, ದುರುಗಪ್ಪ ನೀರಲಗಿ, ಇತರ ಮುಖಂಡರು ಇದ್ದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

Follow Us:
Download App:
  • android
  • ios