ಕೊಪ್ಪಳ[ಜ.31]: ಜಿಲ್ಲೆಯ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ನಮ್ಮ ಪ್ರಾಡಕ್ಟ್ , ನಮ್ಮ ಗ್ರೈನೇಟ್ ಎಕ್ಸಪೋರ್ಟ್ ಆಗುತ್ತಿದೆ ಅಂದರೆ ನಾನು ಖುಷಿ ಪಡುತ್ತೇನೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಹೇಳಿದ್ದಾರೆ. 

ಶಾಸಕ ಹಾಲಪ್ಪ ಆಚಾರ್ ಗೆ ಸಚಿವ ಸ್ಥಾನ ಸಿಗುವ ವಿಚಾರದ ಸಂಬಂಧ ಶುಕ್ರವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಲಬುರ್ಗಾ ಕ್ಷೇತ್ರಕ್ಕೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು. ಇದು ವೈಯಕ್ತಿಕ ಜಗಳ ಅಲ್ಲ.  ಹಾಲಪ್ಪ ಈಸ್ ಮೈ ಪ್ರಾಡಕ್ಟ್ ಎಂದು ಹೇಳಿದ್ದಾರೆ. 

ಸಂಪುಟ ವಿಸ್ತರಣೆ: ' ಶಾ ನನ್ನ ಹೆಸರು ಯಾಕೆ ಆಯ್ಕೆ ಮಾಡಿಕೊಂಡಿದ್ದಾರೊ ಗೊತ್ತಿಲ್ಲ’

ನಮ್ಮದು ಲೀಡರಶಿಪ್ ತಯಾರು ಮಾಡುವ ಫ್ಯಾಕ್ಟರಿಯಾಗಿದೆ.  ಬಹಳಷ್ಟು ಜನ ಲೀಡರ್ ಗಳು ತಯಾರಾಗಿ ಬಿಟ್ಟು ಹೋಗುತ್ತಾರೆ. ನಮ್ಮ ಫ್ಯಾಕ್ಟರಿಯಲ್ಲಿ ತಯಾರಾದ ವಸ್ತು ಒಳ್ಳೆಯ ಗುಣಮಟ್ಟದ್ದಾಗಿರುತ್ತದೆ. ನಮ್ಮವರು ಸಚಿವರಾದರೆ ಒಳ್ಳೆಯದು. ಗೆದ್ದ ಶಾಸಕರಿಗೆ ಸಚಿವ ಸ್ಥಾನ ನಿಡುವ ವಿಚಾರ ಪಕ್ಷಕ್ಕೆ ಬಿಟ್ಟದ್ದು ಎಂದು ಹೇಳಿದ್ದಾರೆ.  ಪಕ್ಷಕ್ಕೆ ದ್ರೋಹ ಮಾಡಿದ್ದು ಅವರ ತಪ್ಪು ಬಿಜೆಪಿ‌ ಅತ್ಯಂತ ನಿಷ್ಠಾವಂತ ಪಕ್ಷ ಎಂದು ಪಕ್ಷಾಂತರ ಪಿಡುಗಿಗೆ ಸಪೋರ್ಟ್ ಮಾಡಿದೆ.  ಭ್ರಷ್ಟಾಚಾರ ಮಾಡಿದ್ದು ಸರಿನಾ ಎಂದು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪಕ್ಷಾಂತರಿಗಳಿಗೆ ತಕ್ಕ ಶಾಸ್ತಿ ಆಗಿದೆ, ಇನ್ನೂ ಆಗಬೇಕಿದೆ ಎಂದ ರಾಯರೆಡ್ಡಿ ಅವರು ಹೇಳಿದ್ದಾರೆ.