ನರೇಂದ್ರ ಮೋದಿ ಸಂಪುಟಕ್ಕೆ ಮತ್ತೊಬ್ಬ ಕನ್ನಡಿಗನ ಎಂಟ್ರಿ!?

ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಕೇಂದ್ರದ ಪ್ರಭಾವಿ ಸಚಿವರಾಗಿ ದೇಶದಲ್ಲಿ ಮಿಂಚುವ ಸಮಯ ಸನ್ನಿಹಿತ: ಬಾಬುರಾವ್ ಚಿಂಚನಸೂರ್|ಹಳ್ಳಿಯಿಂದ ದೆಹಲಿವರೆಗೆ ಸಂತ ಸೇವಲಾಲ್ ಜಯಂತ್ಯುತ್ಸವ ಆಚರಿಸಿದ ಕೀರ್ತಿ ಡಾ. ಉಮೇಶ್ ಜಾಧವ್‌ಗೆ ಸೇರುತ್ತದೆ. 

Former Minister Baburao Chinchanasur Talks Over MP Umesh Jadhav

ಶಹಾಬಾದ್(ಫೆ.17): ಲೋಕಸಭಾ ಚುನಾವಣೆಯಲ್ಲಿ ಡಾ. ಉಮೇಶ್ ಜಾಧವ್ ಗೆಲುವಿಗಾಗಿ ಮಾಲೀಕಯ್ಯ ಗುತ್ತೇದಾರ ಹಾಗೂ ತಾವು ಜೋಡೆತ್ತಿನಂತೆ ಶ್ರಮಿಸಿದ ಫಲವಾಗಿ ಡಾ. ಜಾಧವ್ ಸಂಸದರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರದ ಪ್ರಭಾವಿ ಸಚಿವರಾಗಿ ದೇಶದಲ್ಲಿ ಮಿಂಚುವ ಸಮಯ ಸನ್ನೀತವಾಗುತ್ತಿದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳುವ ಮೂಲಕ ಮುಂದಿನ ಕೇಂದ್ರ ಸಂಪುಟ ವಿಸ್ತರಣೆ ವೇಳೆ ಸಂಸದ ಉಮೇಶ್ ಜಾಧವ್‌ಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. 

ಸಂತ ಸೇವಲಾಲ್‌ರ 281 ಜನ್ಮದಿನ ಹಾಗೂ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಯಿಂದ ದೆಹಲಿವರೆಗೆ ಸಂತ ಸೇವಲಾಲ್ ಜಯಂತ್ಯುತ್ಸವ ಆಚರಿಸಿದ ಕೀರ್ತಿ ಡಾ. ಉಮೇಶ್ ಜಾಧವ್‌ಗೆ ಸೇರುತ್ತದೆ. ಸಮುದಾಯ ಭವನ ಅಭಿವೃದ್ಧಿಗೆ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಪಂ ಮಾಜಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ಮಾತನಾಡಿ, ಲಂಬಾಣಿ ಭಾಷೆಗೆ ಲಿಪಿಯಿಲ್ಲದ ಕಾರಣ ಸೇವಾಲಾಲ್‌ರ ಇತಿಹಾಸ ಲಿಖಿತವಾಗಿ ದಾಖಲಾಗಿಲ್ಲ. ಬದಲಾಗಿ ಹಿರಿಯರ ಬಾಯಲ್ಲಿ ಕಥೆಗಳ ರೂಪದಲ್ಲಿ ನಮಗೆ ತಿಳಿದುಬಂದಿದೆ. ಯಾವುದೇ ವಿಶ್ವ ವಿದ್ಯಾಲಯಗಳಲ್ಲಿ ಸೇವಾಲಾಲರ ಬಗ್ಗೆ ಅಧ್ಯಯನ ನಡೆಯದೆ ಇರುವುದು ವಿಷಾದನಿಯ. ಅಲ್ಲಿ ಸೇವಾಲಾಲರ ಬಗ್ಗೆ ಅಧ್ಯಯನ ನಡೆಸಬೇಕು. ಬಂಜಾರ ಸಮುದಾಯದ ಜನರು ವಿವಿಧ ಉನ್ನತ ಹುದ್ದೆಗಳಿಸಲು ಶ್ರಮಿಸಬೇಕಾಗಿದೆ ಎಂದರು. 

ಕಂಬಳೇಶ್ವರ ಮಠದ ಸೋಮಖರ ಶಿವಾಚಾರ್ಯ ಮಾತನಾಡಿದರು. ಹಲಕಟ್ಟಿಯ ಅಭಿನವ ಮುನಿಂದ್ರ ಶಿವಾಚಾರ್ಯ, ಮುಗುಳುನಾಗಾಂವದ ಜೇಮಸಿಂಗ್ ಮಹಾರಾಜ, ಅಳ್ಳಳ್ಳಿಯ ನಾಗಪ್ಪಯ್ಯಾ ಮಹಾಸ್ವಾಮಿ, ಯರಗೋಳದ ಸಿದ್ಧಲಿಂಗ ಶಿವಾಚಾರ್ಯರು, ಹಲಕಟ್ಟಾದ ತುರಾಬ ಶಾಹಾ ಖಾದ್ರಿ, ಚಿತ್ರನಟಿ ತನುಜಾ ಪವಾರ್, ಶಾಸಕ ಅವಿನಾಶ್ ಜಾಧವ್, ಎಸಿಸಿ ಕಂಪನಿ ನಿರ್ದೇಶಕ ಕೆ.ಆರ್. ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಿ ಇದ್ದರು. 
 

Latest Videos
Follow Us:
Download App:
  • android
  • ios