ವಿಜಯಪುರ(ಜೂ.05): ರಾಜಕೀಯ ಬದ್ಧತೆ ಎಂಬುವುದೇ ಇಲ್ಲದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಬ್ಬ ಬಿಲ್ಡಪ್‌ ರಾಜಕಾರಣಿ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಟೀಕಿಸಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಬ್ಬ ಬಿಲ್ಡಪ್‌ ರಾಜಕಾರಣಿ. ಅವರು ಪ್ರಚಾರಕ್ಕಾಗಿ ಯಾರನ್ನಾದರೂ ತೆಗಳುತ್ತಾರೆ. ಇಲ್ಲವೆ ಹೊಗಳುತ್ತಾರೆ. ಅವರಿಗೆ ರಾಜಕೀಯ ಬದ್ಧತೆ ಎಂಬುವುದೇ ಇಲ್ಲ ಎಂದು ದೂರಿದ್ದಾರೆ.

'ಬಿಎಸ್‌ವೈ ಮುಂದೆ ಕೈ ಚಾಚಿ ಮಂತ್ರಿ ಮಾಡ್ರಿ ಅನ್ನುವಷ್ಟು ಅಯೋಗ್ಯ ರಾಜಕಾರಣಿ ನಾನಲ್ಲ'

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪನವರು ತನಗೆ ವಿಜಯಪುರ ವಿಧಾನಸಭೆ ಕ್ಷೇತ್ರದ ಟಿಕೆಟ್‌ ನೀಡಿದ್ದರು ಎಂದಿದ್ದರು. ಈಗ ನನಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಟಿಕೆಟ್‌ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಮುಂದೆ ಒಂದು ದಿನ ಪ್ರಸಂಗ ಬಂದರೆ ಪಕ್ಷ ನನಗೆ ಹೆದರಿ ಟಿಕೆಟ್‌ ನೀಡಿದೆ ಎಂದು ಹೇಳಲು ಅವರು ಹಿಂದೆ ಮುಂದೆ ನೋಡುವವರಲ್ಲ ಎಂದು ಲೇವಡಿ ಮಾಡಿದರು.

#NewsIn100Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್‌

"