* ಸಿಂಧೂರಿಯವರ ಕಾರ್ಯವೈಖರಿ ಬಗ್ಗೆ ಮಾತನಾಡಿದ ಎ. ಮಂಜು * ಈವರೆಗೂ ಭೂ ಮಾಫಿಯಾ ಮಾಡುವವರ ಮೇಲೆ ಎಫ್‌ಐಆರ್‌ ಆಗಿಲ್ಲ ಯಾಕೆ?* ಮೈಸೂರಿನಲ್ಲಿ ಕೆರೆ ಸಂರಕ್ಷಣೆ ಬಗ್ಗೆ ಮಾತನಾಡುವ ರೋಹಿಣಿ ಸಿಂಧೂರಿ 

ಮೈಸೂರು(ಜೂ.13): ಭೂ ಮಾಫಿಯಾ ಬಗ್ಗೆ ಮಾತನಾಡಿರುವ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಫ್‌ಐಆರ್‌ ಯಾಕೆ ದಾಖಲು ಮಾಡಿಲ್ಲ ಎಂದು ಮಾಜಿ ಸಚಿವ ಎ. ಮಂಜು ಪ್ರಶ್ನಿಸಿದ್ದಾರೆ. 

ಹಾಸನದಲ್ಲಿ ಒಂದೂವರೆ ವರ್ಷ ಜಿಲ್ಲಾಧಿಕಾರಿಯಾಗಿದ್ದ ಸಿಂಧೂರಿ ಒಂದು ಗುಂಟೆ ಒತ್ತುವರಿ ತೆರವು ಮಾಡಿಸಿಲ್ಲ. ಮೈಸೂರಿನಲ್ಲಿ ಕೆರೆ ಸಂರಕ್ಷಣೆ ಬಗ್ಗೆ ಮಾತಾಡುತ್ತಾರೆ. ಹಾಸನದಲ್ಲಿ ಜನರೇ ಕೆರೆ ಕಟ್ಟಿದರು. ಅದನ್ನು ನೋಡಲು ಕಾರಿನಿಂದ ಇಳಿಯಲಿಲ್ಲ. ಇದು ಸಿಂಧೂರಿಯವರ ಕಾರ್ಯವೈಖರಿ ಎಂದು ಆರೋಪಿಸಿದ್ದಾರೆ. 

'ಮೈಸೂರು ಡೀಸಿಯಾಗಿದ್ದ ರೋಹಿಣಿ ವರ್ಗಾವಣೆ ಹಿಂದಿನ ಕಾರಣವೇ ಇದು'

ಎಷ್ಟು ಅಧಿಕಾರಿಗಳು ಮೈಸೂರಿಗೆ ಬಂದು ಹೋಗಿದ್ದಾರೆ. ಈವರೆಗೂ ಭೂ ಮಾಫಿಯಾ ಮಾಡುವವರ ಮೇಲೆ ಎಫ್‌ಐಆರ್‌ ಆಗಿಲ್ಲ ಯಾಕೆ? ಭೂ ಮಾಫಿಯಾ ಮಾಡಿದ್ದಾರೆಂದು ಸಿಂಧೂರಿ ಹೇಳಿದ್ದಾರೆ. ಆದರೆ, ಅವರ ಮೇಲೆ ಏಕೆ ಎಫ್‌ಐಆರ್‌ ದಾಖಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.