ಈಗ ಏಳೆಂಟು ಭಾಷೆಯ ಚಿತ್ರಗಳು ಏಕಕಾಲಕ್ಕೆ ತೆರೆ ಕಾಣುತ್ತಿವೆ. ಭಾಷೆ ಉಳಿಸುವಲ್ಲಿ ಚಿತ್ರೋದ್ಯಮ ಬಹುದೊಡ್ಡ ಕೊಡುಗೆ ನೀಡಿತ್ತು. ಇದೀಗ ಕನ್ನಡ ಭಾಷೆಯ ಚಿತ್ರಗಳು ಬಿಡುಗಡೆಯಾಗಿ ಹಾಗೆಯೇ ಮರೆಯಾಗುವ ಪರಿಸ್ಥಿತಿ ಇದೆ: ಮಾಜಿ ಕಸಾಪಾ ಅದ್ಯಕ್ಷ ಚಂದಪ್ಪ ಹಕ್ಕಿ

ಹನುಮಸಾಗರ(ನ.02): ಬೆಂಗಳೂರು ನಗರ ಹಲವು ಭಾಷೆ, ಸಂಸ್ಕೃತಿ, ಜೀವನ ಪದ್ಧತಿಗೆ ಹೆಸರಾಗಿದೆ. ಒಂದು ಕಾಲದಲ್ಲಿ ಕನ್ನಡ ಭಾಷೆಗೆ ಖ್ಯಾತವಾಗಿತ್ತು ಈ ನಗರ. ಕನ್ನಡ ಚಿತ್ರಗಳು ಬಿಡುಗಡೆಯಾದರೆ ಇಲ್ಲಿನ ಕನ್ನಡಿಗರು ಸಂಭ್ರಮಿಸುತ್ತಿದ್ದರು ಎಂದು ಮಾಜಿ ಕಸಾಪಾ ಅಧ್ಯಕ್ಷ ಚಂದಪ್ಪ ಹಕ್ಕಿ ಹೇಳಿದರು.

ಇಲ್ಲಿನ ಗೂಳಿ ಬಸವೇಶ್ವರ ವೃತ್ತದ ಹತ್ತಿರದ ಕನ್ನಡ ಕಟ್ಟೆಯಲ್ಲಿ ಕನ್ನಡಾಂಬೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗ ಏಳೆಂಟು ಭಾಷೆಯ ಚಿತ್ರಗಳು ಏಕಕಾಲಕ್ಕೆ ತೆರೆ ಕಾಣುತ್ತಿವೆ. ಭಾಷೆ ಉಳಿಸುವಲ್ಲಿ ಚಿತ್ರೋದ್ಯಮ ಬಹುದೊಡ್ಡ ಕೊಡುಗೆ ನೀಡಿತ್ತು. ಇದೀಗ ಕನ್ನಡ ಭಾಷೆಯ ಚಿತ್ರಗಳು ಬಿಡುಗಡೆಯಾಗಿ ಹಾಗೆಯೇ ಮರೆಯಾಗುವ ಪರಿಸ್ಥಿತಿ ಇದೆ. ಆಧುನಿಕ ಭರಾಟೆಯಲ್ಲಿ ಬೆಂಗಳೂರಿನಲ್ಲಿ ಕನ್ನಡವನ್ನು ಹುಡುಕುವ ದಯನೀಯ ಸ್ಥಿತಿ ಇದೆ. ಬೇರೆ ನಗರಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ. ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ಹರಡಿತ್ತು ಎನ್ನುವುದನ್ನು ಕವಿ ವಾಣಿ, ಇಂತಹ ಕನ್ನಡ ನಾಡು ಜಗತ್ತಿನ ಪ್ರಜಾತಂತ್ರ ವ್ಯವಸ್ಥೆಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂದರು.

ಕಸಾಪ ಹೋಬಳಿ ಅಧಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿ, ಬಸವಣ್ಣನರ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂರ್ತ ರೂಪ ದೊರೆಯಿತು. ಬಸವಣ್ಣನ ಕಾಲದ ಚಿಂತಕರ ಚಾವಡಿ ಮೂಲಕ ಪ್ರಜಾತಂತ್ರ ವ್ಯವಸ್ಥೆಯ ಬೀಜ ಬಿತ್ತಲಾಯಿತು. ಯಾವುದೇ ಸಮಸ್ಯೆಗೆ ಚರ್ಚೆ, ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎನ್ನುವುದಕ್ಕೆ ಆಗಲೇ ಸ್ಪಷ್ಟ ರೂಪ ದೊರೆಯಿತು. ಆಗಿನ ಚಿಂತಕರ ಚಾವಡಿಯ ಮೊದಲ ಸಭಾಧ್ಯಕ್ಷ ಅಲ್ಲಮ ಪ್ರಭು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರ ನಾವು ಅಲ್ಲಮರ ನೇತೃತ್ವದ ಸಭಾ ಮಂಟಪಗಳಲ್ಲಿ ಕನ್ನಡದಲ್ಲಿ ಚರ್ಚೆಗಳಾಗುತ್ತಿದ್ದವು. ಇದೇ ಭಾಗದ ಐಹೊಳೆ, ಪಟ್ಟದ ಕಲ್ಲಿನ ವಾಸ್ತುಶಿಲ್ಪಗಳು ಸಂಸತ್ತಿನ ಕಟ್ಟಡ ನಿರ್ಮಾಣಗೊಳ್ಳಲು ಪ್ರೇರಣೆಯಾಗಿವೆ ಎಂದರು.

ಕೊಪ್ಪಳ: ಹುಲಿಗೆಮ್ಮ ದೇವಸ್ಥಾನ ಬಳಿ ತುಂಗಭದ್ರಾ ನದಿ ಮಲಿನ

ನಿಸರ್ಗ ಶಾಲೆಯ ಸಂಸ್ಥೆಯ ಅಧ್ಯಕ್ಷರು ಮಲ್ಲಯ ಕೋಮಾರಿ, ಮುಖಂಡರಾದ ಶ್ರೀನಿವಾಸ ಜಹಗೀರದಾರ ಬಸವರಾಜ ಹಳ್ಳೂರ, ಮಲ್ಲಯ್ಯ ಕೋಮಾರಿ, ಅಬ್ದುಲ್‌ ಕರೀಂ ವಂಟೆಳ್ಳಿ, ಚಂದಪ್ಪ ಹಕ್ಕಿ, ವೆಂಕಟೇಶ ಹೊಸಮನಿ, ಗ್ಯಾನಪ್ಪ ತಳವಾರ, ಮಂಜುನಾಥ ಗುಳೆದಗುಡ್ಡ, ಅಬ್ದುಲ್‌ ರಜಾಕ ಟೇಲರ್‌, ಲಕ್ಷ್ಮೀ ಕೋಳೂರ, ಮಹಾಂತೇಶ ಗಣವಾರಿ, ಸಂಗಮೇಶ ಬ್ಯಾಳಿ, ಮರಿಯಪ್ಪ ಬೋದುರ, ಈರಣ್ಣ ವಿಶ್ವಕರ್ಮ, ಮಲ್ಲಪ್ಪ ಲಂಗಟದ ಇತರರು ಇದ್ದರು.

ಗ್ರಾ.ಪಂ.ಕಚೇರಿ:

ಗ್ರಾಮ ಪಂಚಾಯಿತಿಯಲ್ಲಿ ಜಿ.ಪಂ. ಸದಸ್ಯ ಭೀಮಣ್ಣ ಅಗಸಿಮುಂದಿನ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿದರು. ಗುತ್ತಿಗೆದಾರ ಆಸೀಫ್‌ ಡಾಲಾಯತ್‌, ಪಿಡಿಒ ನಿಂಗಪ್ಪ ಮೂಲಿಮನಿ, ದ್ವಿತೀಯ ದರ್ಜೆ ಸಹಾಯಕ ವೀರನಗೌಡ ಪಾಟೀಲ್‌, ವಿಶ್ವನಾಥ ಕನ್ನೂರ, ಶೇಖಪ್ಪ ಸಜ್ಜನ, ಅಶೋಕ ಮಿಸ್ಕೀನ್‌, ಮಂಜುನಾಥ ಹುಲ್ಲೂರ, ಮಹಾಂತಯ್ಯ ಕೋಮಾರಿ, ಮೈಬೂಬ ಇಟಗಿ ಇತರರು ಇದ್ದರು.