ಬೆಳಗಾವಿ[ಜ.24]: ಮಾಜಿ ಸಿಆರ್ ಪಿಎಫ್ ಪೊಲೀಸ್ ಆಗಿ ಸೇವೆ ಸಲ್ಲಿಸಿದ್ದಾತ ಪ್ರೀತಿಸಿ ಮದುವೆಯಾದ ಪತ್ನಿಗೆ ಕೈಕೊಟ್ಟು, ಮತ್ತಿಬ್ಬರನ್ಬ ಮದುವೆಯಾದ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ. ಅಷ್ಟಕ್ಕೂ ಆತ ಯಾರು? ಇಲ್ಲಿದೆ ವಿವರ.

ಹೌದು ಅಜೀತ ಮಾದರ ಎಂಬಾತ ತಾನು ಪ್ರೀತಿಸಿ ಮದುವೆಯಾಗಿದ್ದ ದ್ರಾಕ್ಷಾಯಿನಿಗೆ ಎಂಬಾಕೆಯ ಬಾಳಲ್ಲಿ ಚಲ್ಲಾಟವಾಡಿ, ಕೈ ಕೊಟ್ಟಿದ್ದಾನೆ. ಇಷ್ಟಕ್ಕೇ ಸುಮ್ಮನಾಗದ ಪೊಲೀಸಪ್ಪ ಸೀಮಾ ಚೌವಾಣ ಮತ್ತು ಜೆಡಿಎಸ್ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಶ್ರೀ ಸೂರ್ಯವಂಶಿ ಎಂಬ ಮತ್ತಿಬ್ಬರನ್ನ ನಂಬಿಸಿ ರಿಜಿಸ್ಟರ್ ಮದುವೆ ಆಗಿದ್ದಾನೆ. ಇನ್ನು ಜೆಡಿಎಸ್ ನಾಯಕಿ, ಅಜೀತ ಮಾದರ ಈ ಹಿಂದೆಯೇ ಮದುವೆಯಾಗಿದ್ದು, ಮೋಸದಾಟ ಆಡುತ್ತಿದ್ದಾನೆಂದು ತಿಳಿದಿದ್ದರೂ ಮದುವೆಯಾಗಿರುವುದು ಅಚ್ಚರಿ ಮೂಡಿಸಿದೆ. 

ಇತ್ತ ಪತಿಯ ಆಟ ತಿಳಿದ ಮೊದಲ ಪತ್ನಿ ದ್ರಾಕ್ಷಾಯಿಣಿ ಎಪಿಎಂಸಿ ಇನ್ಸ್ ಪೆಕ್ಟರ್ ಕಾಲಿ ಮಿರ್ಚಿಗೆ 40 ಸಾವಿರ ಮತ್ತು ಕಾಕತಿ ಇನ್ಸ್ ಪೆಕ್ಟರ್ ಗೆ 30 ಸಾವಿರ ನೀಡಲು ಬೆದರಿಕೆ ಹಾಕಿ ತನ್ನ ಪತಿ ಹಾಗೂ ಮೂರನೇ ಪತ್ನಿ ಹಣ ಕಿತ್ತುಕೊಂಡಿದ್ದಾರೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. 

ಇಷ್ಟೆಲ್ಲಾ ನಡೆದಿದ್ದರೂ ಮಹಿಳಾ ಠಾಣೆ ಪೊಲೀಸರು ದ್ರಾಕ್ಷಾಯಿಣಿಗೆ ನ್ಯಾಯ ಒದಗಿಸಿಲ್ಲ. ಇದರಿಂದ ಬೇಸತ್ತ ದ್ರಾಕ್ಷಾಯಿಣಿ ಬೆಳಗಾವಿ ಪೊಲೀಸ್ ಕಮೀಷನರಗೆ ದೂರು ಕೊಟ್ಟಿದ್ದು, ವಂಚಕ ಪತಿಯಿಂದ ನ್ಯಾಯ ಒದಗಿಸಿಕೊಡಲು ಮನವಿ ಮಾಡಿಕೊಂಡಿದ್ದಾರೆ.