ಬಾಗಲಕೋಟೆ, [ಜ.21]: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾದಾಮಿ ಬನಶಂಕರಿ ದೇವಿ ರಥೋತ್ಸವಕ್ಕೆ ಚಾಲನೆ ನೀಡುವ ಮುನ್ನ ಸಿದ್ಧಗಂಗಾ ಶ್ರೀಗಳಿಗೆ ಸಂತಾಪ ಸೂಚಿಸಿದ್ದಾರೆ.

ಬನಶಂಕರಿ ದೇವಿ ಜಾತ್ರೆಯಲ್ಲಿ ನೆರೆದಿದ್ದ ಲಕ್ಷಾಂತರ ಜನರ ಮಧ್ಯೆ  ಮೌನಾಚರಣೆ ಮಾಡುವ ಮೂಲಕ ಸಿದ್ಧಗಂಗಾದ ಶಿವಕುಮಾರ ಸ್ವಾಮಿಗಳಿಗೆ ಸಂತಾಪ ಸೂಚಿಸಿದರು. ಬಳಿಕ ಬಾಗಲಕೋಟೆ ಜಿಲ್ಲೆ ಬದಾಮಿ ಕ್ಷೇತ್ರದ ಅಧಿದೇವತೆ ಜಾತ್ರೆಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಶ್ರೀ ದರ್ಶನಕ್ಕೆ ಪ್ರಧಾನಿ ಮೋದಿ ಬರಲ್ಲ, ಕಾರಣಕೊಟ್ಟ ಯಡಿಯೂರಪ್ಪ

ಇದಕ್ಕೂ ಮೊದಲು ಸಿದ್ದರಾಮಯ್ಯ ಅವರು ಇಂದು [ಸೋಮವಾರ] ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದುಕೊಂಡರು. ನಂತರ  ಬಾಗಲಕೋಟೆ ಜಿಲ್ಲೆಯ ಬನಶಂಕರಿಗೆ ತರಳಿದ್ದರು.

"