Asianet Suvarna News Asianet Suvarna News

'ನನಗೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವ ಇಚ್ಚೆ ಇಲ್ಲ'

25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ| ಕಾಂಗ್ರೆಸ್ ಶಾಸಕರುಗಳ‌  ಕ್ಷೇತ್ರಗಳಿಗೆ 19 ಸಾವಿರ‌ ಕೋಟಿ‌ ರೂ. ಅನುದಾನ ಕೊಟ್ಟಿದ್ದೆ| ಆದರೆ, ಯಾರೊಬ್ಬರು ಇದರ ಬಗ್ಗೆ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ| ರಾಜ್ಯ ರಾಜಕೀಯದಲ್ಲಿ ಏನ್ ಬೇಕಾದ್ರು ಬದಲಾವಣೆ ಆಗಬಹುದು| ಸರ್ಕಾರ ಇರುತ್ತೆ ಅಂಗ ನಾನು ಅಂದಿದ್ದೆ, ಆದ್ರೆ ಬಿಜೆಪಿ ಸರ್ಕಾರ ಅಂತ ಹೇಳಿಕೆ ನೀಡಿಲ್ಲ|

Former CM HD Kumaraswamy Talks Over Chief Minister Post
Author
Bengaluru, First Published Dec 2, 2019, 1:20 PM IST

ಹುಬ್ಬಳ್ಳಿ(ಡಿ.02): ನನಗೆ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುವ ಇಚ್ಚೆ ಇಲ್ಲ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಯಾರೊಬ್ಬರು ಮಾತನಾಡುತ್ತಿಲ್ಲ. ನನ್ನ ಕೆಲಸದ ಬಗ್ಗೆ ನಮ್ಮವರು, ಕಾಂಗ್ರೆಸ್ ಯಾರು ಮಾತಮಾಡಲಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಜೆಡಿಎಸ್-ಕಾಂಗ್ರೆಸ್ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. 

ಸೋಮವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ. ಕಾಂಗ್ರೆಸ್ ಶಾಸಕರುಗಳ‌  ಕ್ಷೇತ್ರಗಳಿಗೆ 19 ಸಾವಿರ‌ ಕೋಟಿ‌ ರೂ. ಅನುದಾನ ಕೊಟ್ಟಿದ್ದೆ. ಆದರೆ, ಯಾರೊಬ್ಬರು ಇದರ ಬಗ್ಗೆ ಹೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯ ರಾಜಕೀಯದಲ್ಲಿ ಏನ್ ಬೇಕಾದ್ರು ಬದಲಾವಣೆ ಆಗಬಹುದು. ಸರ್ಕಾರ ಇರುತ್ತೆ ಅಂಗ ನಾನು ಅಂದಿದ್ದೆ, ಆದ್ರೆ ಬಿಜೆಪಿ ಸರ್ಕಾರ ಅಂತ ಹೇಳಿಕೆ ನೀಡಿಲ್ಲ, ಡಿಸೆಂಬರ್ 9 ರ ನಂತರ ಎಲ್ಲವೂ ಗೊತ್ತಾಗುತ್ತೆ‌. ಅಪ್ಪ ಮಕ್ಕಳ‌ ಪಕ್ಷವನ್ನು ಮನೆಗೆ ಕಳಿಸುವುದಾಗಿ ಹೇಳಿದ್ದ ಎಲ್ಲರೂ ಮನೆಗೆ ಹೋಗಿದ್ದಾರೆ. ರಮೇಶ್ ಜಾರಕಿಹೊಳಿ ಸಹ ಮನೆಗೆ ಹೋಗುತ್ತಾರೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

Follow Us:
Download App:
  • android
  • ios