'ನನ್ನ ಅವಧಿಯ ಹಣದಲ್ಲಿ ಕೆಲಸ ನಡೆಯುತ್ತಿದೆ'  ಸರ್ಕಾರಕ್ಕೆ HDK ಸರಣಿ ಪ್ರಶ್ನೆ

ಮಂಡ್ಯ ಪ್ರಕರಣದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ/ ಸರ್ಕಾರ ಜನರ ಜೀವನದ ಜತೆ ಚೆಲ್ಲಾಟ ಆಡಬಾರದು/ ಮುಂಬೈನಿಂದ ಬಂದವರನ್ನು ಮೊದಲು ಪತ್ತೆ ಹಚ್ಚಬೇಕು

Former CM HD Kumaraswamy Slams Karnataka Govt

ಕೋಲಾರ (ಮೇ 01)  ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಹೋಗಲು ಅವಕಾಶವಿಲ್ಲ.  ಸತ್ತ ವ್ಯಕ್ತಿಯ ಕೊರೊನಾ ತಪಾಸಣೆ ಮಾಡದೆ ಹೇಗೆ ಮಂಡ್ಯಗೆ ತಂದರು.  ಮಹಾರಾಷ್ಟ್ರ ದಿಂದ ಇಲ್ಲಿಗೆ ತರಲು ಅವಕಾಶ ಕೊಟ್ಟವರು ಯಾರು?  ಮಂಡ್ಯದಲ್ಲಿ 8 ಜನರಿಗೆ ಪಾಸಿಟಿವ್ ಬಂದಿದೆ.  ಇವೆಲ್ಲಾ ಜಿಲ್ಲಾಧಿಕಾರಿಗಳ ಗಮನಕ್ಕೆ ಇರಲಿಲ್ವಾ ?  ಎಂದು ಕೋಲಾರದ ಮುಳಬಾಗಿಲು ನಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ವಹಿಸಬೇಕು.  ಇನ್ನು ಕೆಲ ಜನರು ಮುಂಬೈ ನಿಂದ ಬಂದಿದ್ದಾರೆ ಅವರನ್ನು ಪತ್ತೆ ಹಚ್ಚಬೇಕು.  ಲಾಕ್ ಡೌನ್ ಮುಂದುವರಿಸುವ ಅನಿವಾರ್ಯತೆ ಇದೆ.  ಸರ್ಕಾರ ಖಜಾನೆ ತುಂಬಿಸಿಕೊಳ್ಳಲು ರಿಯಾಯಿತಿ ನೀಡಿದ್ರೆ ಡ್ಯಾಮೇಜ್ ಆಗುತ್ತೆ ಅಂತ ಹಲವಾರು ಜನರು ಹೇಳಿದ್ದಾರೆ.  ಮೇ 18ರೊಳಗೆ ಇಡೀ ದೇಶದಲ್ಲಿ 38 ಸಾವಿರ ಜನ ಸಾಯುತ್ತಾರೆ ಅನ್ನೋ ಮಾಹಿತಿ ಇದೆ.  ಜನರ ಜೀವದ ಜೊತೆ ಚೆಲ್ಲಾಟವಾಡದೆ ಸರ್ಕಾರ ತೀರ್ಮಾನ ಮಾಡಬೇಕು.  ಈಗಾಗಲೇ ಕೆಲ ಚಟುವಟಿಕೆ ಗಳಿಗೆ ರಿಲ್ಯಾಕ್ಸ್ ನೀಡಲಾಗಿದೆ. ಮುಂದೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮ ವಹಿಸಬೇಕು ಎಂಬ ಸಲಹೆಯನ್ನು ನೀಡಿದ್ದಾರೆ.

ಮಹಾರಾಷ್ಟ್ರದ ನಂಟು; ಮಂಡ್ಯದಲ್ಲಿ ಸಿಕ್ಕಾಪಟ್ಟೆ ಪ್ರಕರಣ

ಲಾಕ್ ಡೌನ್ ಮೇಲಿರುವ ಕಾಳಜಿ.  ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ.  ಜನ ಸಾಮಾನ್ಯರ ನೋವನ್ನು ಸರಿಪಡಿಸುವಲ್ಲಿ ಸರ್ಕಾರ ವೈಫಲ್ಯವಾಗಿದೆ.  ನನ್ನ ಸರ್ಕಾರದಲ್ಲಿ ಬಿಡುಗಡೆ ಮಾಡಿದ ಹಣದಲ್ಲಿ ಈಗ ಕೆಲಸ ನಡಿಯುತ್ತಿದೆ.  ಸಿಎಂ ಕಚೇರಿಯಲ್ಲಿ ದುಂದು ವೆಚ್ಚ ನಡಿಯುತ್ತಿದೆ.  ಬೇರೆ ರಾಜ್ಯಗಳಲ್ಲಿ ಸರ್ಕಾರ ನೀಡುತ್ತಿರುವ ಪ್ಯಾಕೇಜ್ ಗಳ ಮಾಹಿತಿ ತರಸಿಕೊಳ್ಳಲಿ.  9 ಸಾವಿರ ಕೋಟಿ ಹಣವನ್ನು ಎಫ್ ಡಿ ನಲ್ಲಿ ಸರ್ಕಾರ ಇಟ್ಟುಕೊಂಡಿದೆ,ಅದನ್ನು ಉಪಯೋಸಿಕೊಳ್ಳಲಿ ಎಂದಿದ್ದಾರೆ.

ನಾವು ಬೀದಿಗೆ ಇಳಿದು ಪ್ರತಿಭಟನೆ ಮಾಡುವ ಸಮಯ ಇದಲ್ಲ, ರಾಜಕಾರಣ ಮಾಡುವ ಸಮಯವಲ್ಲ  ನಾವೆಲ್ಲರೂ ಒಗ್ಗಟಾಗಿ ಕೊರೊನಾ ಓನಡಿಸಬೇಕಾಗಿದೆ ಎಂದು ಸಲಹೆ ನೀಡಿದರು. 

Latest Videos
Follow Us:
Download App:
  • android
  • ios