Tumakuru Accident: ಅಪಘಾತದಲ್ಲಿ ಮಡಿದ ಕುಟುಂಬಸ್ಥರಿಗೆ ದೊಡ್ಡ ಮೊತ್ತದ ಪರಿಹಾರ ನೀಡಿ: HDK

*  ಪಾವಗಡ ಅತ್ಯಂತ ಬರಗಾಲ ಪ್ರದೇಶವಾಗಿದೆ
*  ಅಲ್ಲಿನ ಜನರು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಾರೆ
*  ರಾಜ್ಯದಲ್ಲಿಂದು ಮೂರು ಕಡೆ ಸಂಭವಿಸಿದ ಅವಘಡಗಳು 

Former CM HD Kumaraswamy React on Tumakuru Accident grg

ಚನ್ನಪಟ್ಟಣ(ಮಾ.19): ರಾಜ್ಯದಲ್ಲಿ ಇಂದು(ಶನಿವಾರ) ಮೂರು ಕಡೆ ಅವಘಡಗಳು ಸಂಭವಿಸಿವೆ. ಬಸ್ ದುರಂತದಲ್ಲಿ 8 ರಿಂದ 10 ಜನರು ಸಾವನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಆದಷ್ಟು ಬೇಗ ಸ್ಥಳಕ್ಕೆ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳನ್ನ ಕಳಿಸಿ ಮಾಹಿತಿ ಕಲೆ ಹಾಕಬೇಕು. ದುರಂತದಲ್ಲಿ ಸಾವಿಗೀಡಾಗಿದ ಕುಟುಂಬಸ್ಥರಿಗೆ ದೊಡ್ಡ ಮಟ್ಟದಲ್ಲಿ ಪರಿಹಾರ ನೀಡಬೇಕು ಅಂತ ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಆಗ್ರಹಿಸಿದ್ದಾರೆ. 

ಇಂದು ರಾಮನಗರ(Ramanagara) ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕದುರಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾವಗಡ ಅತ್ಯಂತ ಬರಗಾಲ ಪ್ರದೇಶವಾಗಿದೆ. ಆ ಜನರು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಅವರಿಗೆ ಹೆಚ್ಚು ಪರಿಹಾರ ನೀಡಬೇಕು, ಅಲ್ಲದೇ ಉಡುಪಿ ಹಾಗೂ ಬಳ್ಳಾರಿಯಲ್ಲಿ ಆ್ಯಕ್ಸಿಜನ್ ಸ್ಫೋಟಗೊಂಡಿದೆ. ಇದರ ಬಗ್ಗೆ ಸರ್ಕಾರ ಗಮನ ಹರಿಸಿ ದೊಡ್ಡ ಮಟ್ಟದಲ್ಲಿ ನೊಂದಿರುವವರಿಗೆ ನೆರವು ನೀಡಬೇಕು ಕುಮಾರಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

Ballari: ಬಿಟಿಪಿಎಸ್ ಆಕ್ಸಿಜನ್ ಘಟಕದಲ್ಲಿ ಸ್ಫೋಟ..!

ಕಂದಕಕ್ಕೆ ಉರುಳಿ ಬಿದ್ದ ಖಾಸಗಿ ಬಸ್‌: ಸ್ಥಳದಲ್ಲೇ 8 ಮಂದಿ ದುರ್ಮರಣ

ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಬಸ್‌ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 8 ಮಂದಿ ಮೃತಪಟ್ಟು 25ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಇಂದು(ಶನಿವಾರ) ನಡೆದಿದೆ.

ಮೃತಪಟ್ಟವರ ಹೆಸರು, ವಿಳಾಸ ಇನ್ನೂ ತಿಳಿದು ಬಂದಿಲ್ಲ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಾಳುಗಳನ್ನ ಪಾವಗಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. 

ಖಾಸಗಿ ಬಸ್ ವೈ.ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ  ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಈ ದರ್ಘಟನೆ ಸಂಭವಿಸಿದೆ. ದುರ್ಘಟನೆಯಲ್ಲಿ ಗಾಯಾಳುಗಳನ್ನ ಸ್ಥಳೀಯರು ರಕ್ಷಿಸಿ ಆಸ್ಪತ್ರೆ ದಾಖಲಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

ಘಟನಾ ಸ್ಥಳಕ್ಕೆ ಪಾವಗಡ ಪೊಲೀಸರು ದೌಡಾಯಿಸಿದ್ದಾರೆ. ಬಸ್‌ನಲ್ಲಿ 80ಕ್ಕೂ ಹಚ್ಚು ಜನರು ಪ್ರಯಾಣಿಸುತ್ತಿದ್ದರು. ಬಸ್‌ನ ಟಾಪ್ ಮೇಲೂ ಕೂಡ ಕುಳಿತಿದ್ದರು ಎಂದು ತಿಳಿದು ಬಂದಿದೆ. ಬಸ್ ಪಲ್ಟಿಯಾಗುತ್ತಿದ್ದಂತೆ ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದಾರೆ. ವೈ.ಎನ್ ಹೊಸಕೋಟೆ ಮೂಲದ ಬಸ್ ಇದಾಗಿದ್ದು ಬಸ್ ಮಾಲೀಕನ ಹೆಸರು ಶ್ರೀನಿವಾಸ್ ಅಂತ ತಿಳಿದು ಬಂದಿದೆ. 

Mandya Accident: ಪಿಲ್ಲರ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌ಗೆ ಬೆಂಕಿ: ಡ್ರೈವರ್‌ ಸಜೀವ ದಹನ

ದುರ್ಘಟನೆಯಲ್ಲಿ ವಿದ್ಯಾರ್ಥಿಗಳೂ ಕೂಡ ಮೃತಪಟ್ಟಿದ್ದಾರೆ. ಮೃತರ ಹೆಸರು ಅಮೂಲ್ಯ ಪೋತಗಾನಹಳ್ಳಿ (16), ಅಜಿತ್ ಸೂಲನಾಯಕನಹಳ್ಳಿ(18), ಕಲ್ಯಾಣ್ (18) ವೈ.ಎನ್ ಹೊಸಕೋಟೆ, ಶಹನವಾಜ್ (18) ಬೆತ್ತರಹಳ್ಳಿ ಅಂತ ಗುರುತಿಸಲಾಗಿದೆ. ಇನನ್ನುಳಿದವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶಾಸಕ ವೆಂಕಟರಮಣಪ್ಪ ಭೇಟಿ ನೀಡಿ, ಗಾಯಾಳುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ವೈದ್ಯರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ನಾಗರಾಜು ಟಿ.ಆರ್ ಬಸ್(KA06-C 8933) ಗೆ ಇನ್‌ಶ್ಯೂರೆನ್ಸ್‌ ಅಪ್ಡೇಟ್ ಇದೆ.  ಒರಿಯಂಟಲ್ ಇನ್ ಶ್ಯೂರೆನ್ಸ್ ಮಾಡಲಾಗಿದೆ. 8-9-2022ರವೆಗೂ ಇನ್‌ಶ್ಯೂರೆನ್ಸ್ ಚಾಲ್ತಿಯಲ್ಲಿದೆ. ಬಸ್ ನೋಂದಣಿ ತುಮಕೂರು ಆರ್.ಟಿ.ಒ ದಿಂದ ಮಧುಗಿರಿ ಆರ್.ಟಿ.ಒಗೆ ವರ್ಗಾವಣೆಯಾಗಿದೆ. ಮೊದಲು ರಘು ಎಂಬುವರ ಹೆಸರಿನಲ್ಲಿದ್ದ ಬಸ್ ಈಗ ನಾಗರಾಜು ಟಿ.ಆರ್ ಹೆಸರಿಗೆ ವರ್ಗಾವಣೆಯಾಗಿದೆ. 2019ರಲ್ಲಿ ನಾಗರಾಜು ಹೆಸರಿಗೆ ಮಾಲೀಕತ್ವ ವರ್ಗಾವಣೆಯಾಗಿದೆ.
 

Latest Videos
Follow Us:
Download App:
  • android
  • ios