Ballari: ಬಿಟಿಪಿಎಸ್ ಆಕ್ಸಿಜನ್ ಘಟಕದಲ್ಲಿ ಸ್ಫೋಟ..!

*  ಬಳ್ಳಾರಿ ಘಟನೆ ತಾಲೂಕಿನ ಕುಡತಿನಿ ಬಳಿಯ ಬಿಟಿಪಿಎಸ್‌ನಲ್ಲಿ ನಡೆದ ಘಟನೆ
*  ಮೂವರಿಗೆ ಗಾಯ, ಇಬ್ಬರ ಪರಿಸ್ಥಿತಿ ಗಂಭೀರ
*  ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿರುವ ಬಿಟಿಪಿಎಸ್ ಅಧಿಕಾರಿಗಳು
 

Explosion in the BTPS Oxygen Unit in Ballari grg

ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಮಾ.19): ಆಕ್ಸಿಜನ್ ಪ್ಲಾಂಟ್(Oxygen Plant) ಸ್ಫೋಟಗೊಂಡ ಪರಿಣಾಮ ಮೂವರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಕುಡತಿನಿ ಬಳಿಯ ಬಳ್ಳಾರಿ(Ballari) ಥರ್ಮಲ್ ಪವರ್ ಸ್ಟೇಷನ್‌ನಲ್ಲಿನ ಆಕ್ಸಿಜ‌ನ್ ಪ್ಲಾಂಟ್‌ನಲ್ಲಿ ಇಂದು(ಶನಿವಾರ) ಬೆಳಗಿನ‌ ಜಾವ ನಡೆದಿದೆ. ದಿಢೀರ್‌ ಸ್ಫೋಟದ(Explosion) ರಭಸಕ್ಕೆ ಪ್ಲಾಂಟ್ ಸಂಪೂರ್ಣ ಸುಟ್ಟು ಕರಕಲಾಗಿದೆ. 

ಬಿಟಿಪಿಎಸ್‌ನ(BTPS) 750 ಮೆಗಾ ವ್ಯಾಟ್ ವಿದ್ಯುತ್(Power) ಉತ್ಪಾದಿಸುವ ಸೂಪರ್ ಕ್ರಿಟಿಕಲ್ ಬಾಯ್ಲರ್ ಪವರ್ ಪ್ಲಾಂಟ್‌ನಲ್ಲಿ ಆಕ್ಸಿಜನ್ ಉತ್ಪಾದನೆಗೆ ಅವಕಾಶವಿದೆ.  ಹೀಗಾಗಿ ಎಂದಿನಂತೆ ಆಕ್ಸಿಜನ್ ಫಿಲಿಂಗ್ ಮಾಡುವ ವೇಳೆ ದಿಢಿರ್‌ನೆ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಬೆಂಕಿ ಕಾಣಿಕೊಳ್ಳುತ್ತಿದ್ದಂತೆ ಕೆಲ ಕಾರ್ಮಿಕರಿಗೆ(Workers) ಬೆಂಕಿ ಹತ್ತಿಕೊಂಡಿದೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನ ಸ್ಥಳೀಯ ಆಸ್ಪತ್ರೆಗೆ(Hospital) ದಾಖಲು ಮಾಡಲಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿ ಎನ್ನಲಾಗುತ್ತಿದೆ.

ಬಳ್ಳಾರಿ: ಬಿಟಿಪಿಎಸ್‌ನಲ್ಲಿ ನಿತ್ಯ 500 ಮೆ.ವ್ಯಾಟ್‌ಷ್ಟೇ ವಿದ್ಯುತ್‌ ಉತ್ಪಾದನೆ

ಘಟನಾ ಸ್ಥಳಕ್ಕೆ ಬಿಟಿಪಿಎಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಕುಡುತಿನಿ ಪೊಲೀಸ್(Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಗೊಂಡವರ ಹೆಸರು, ವಿಳಾಸ ತಿಳಿದು ಬಂದಿಲ್ಲ. ಆದರೆ, ಮೂವರು ಗುತ್ತಿಗೆ ಕಾರ್ಮಿಕರು ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 
 

Latest Videos
Follow Us:
Download App:
  • android
  • ios