Asianet Suvarna News

'ಆನಂದ ಸಿಂಗ್ ಅರಮನೆಗೆ ಧೂಳು ಬೀಳಬಾರದು ಎಂದು ಸಕ್ಕರೆ ಕಾರ್ಖಾನೆ ಮುಚ್ಚಿದ್ದಾರೆ'

ಮಣ್ಣನ್ನು ಚೀನಾಕ್ಕೆ ಮಾರಿದ್ರು| ವ್ಯವಸ್ಥೆ ಬದಲಾಯಿಸದೇ ಇದ್ರೇ, ಬಡವರು ಬಡವಾರಗಿರುತ್ತಾರೆ| ಶ್ರೀಮಂತರು ಶ್ರೀಮಂತರಾಗಿರುತ್ತಾರೆ ಎಂದ ಕುಮಾರಸ್ವಾಮಿ| ಬಿಜೆಪಿಗೆ ಮುಂದಿನ ದಿನದಲ್ಲಿ ಗಂಡಾಂತರ ಕಾದಿದೆ| ಯುವಕರು ಮೋದಿ ಮೋದಿ ಅಂತಾರೆ| ಬಿಜೆಪಿ ಬರದೇ ಇದ್ರೇ ಒಳಗೆ ಹಾಕ್ತೇನೆ ಎಂದು ಮೋದಿ ಹೇಳಿದ್ದಕ್ಕೆ ಬಿಜೆಪಿಗೆ ಬಂದಿದ್ದಾರೆ| 

Former CM H D Kumarswamy Talks Over Disqualified MLA Anand Singh
Author
Bengaluru, First Published Nov 25, 2019, 3:18 PM IST
  • Facebook
  • Twitter
  • Whatsapp

ಬಳ್ಳಾರಿ(ನ.25): ಮಣ್ಣನ್ನು ಹೊರದೇಶಕ್ಕೆ ಮಾರಿ ಆರಮನೆ ಕಟ್ಟಿದ್ರು, ಕೆಲವರು ಮಾತ್ರ ಶ್ರೀಮಂತರಾಗಿದ್ದಾರೆ.‌  ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್ ದೊಡ್ಡ ಅರಮನೆ ಕಟ್ಟಿದ್ದಾರೆ. ಅರಮನೆಗೆ ಧೂಳು ಬೀಳಬಾರದು ಎಂದು ಇಲ್ಲಿಯ ಸಕ್ಕರೆ ಕಾರ್ಖಾನೆ ಮುಚ್ಚಿದ್ದಾರೆ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿಗಿಂತ ನಾನೇನು ಕಡಿಮೆ ಎಂದು ಅರಮನೆ ಕಟ್ಟಿದ್ದಾರೆ ಎಂದು ಆನಂದ್ ಸಿಂಗ್ ವಿರುದ್ಧ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ. 

ಸೋಮವಾರ ವಿಜಯನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಪಾಪಿನಾಯಕನ ಹಳ್ಳಿಯಲ್ಲಿ  ನಡೆದ ಜೆಡಿಎಸ್ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಮಣ್ಣನ್ನು ಚೀನಾಕ್ಕೆ ಮಾರಿದ್ರು, ವ್ಯವಸ್ಥೆ ಬದಲಾಯಿಸದೇ ಇದ್ರೇ, ಬಡವರು ಬಡವಾರಗಿರುತ್ತಾರೆ. ಶ್ರೀಮಂತರು ಶ್ರೀಮಂತರಾಗಿರುತ್ತಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿಜೆಪಿಗೆ ಮುಂದಿನ ದಿನದಲ್ಲಿ ಗಂಡಾಂತರ ಕಾದಿದೆ. ಯುವಕರು ಮೋದಿ ಮೋದಿ ಅಂತಾರೆ.ಮೊದಲು ತಿಳಿದುಕೊಳ್ಳಿ ಆನಂದ ಸಿಂಗ್ ಬಿಜೆಪಿಯಲ್ಲಿಯೇ ಇರಬಹುದಾಗಿತ್ತು, ಯಾಕೆ  ಕಾಂಗ್ರೆಸ್ ಗೆ ಹೋಗಿದ್ದರು, ವ್ಯವಹಾರದಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿಬಿದ್ದಿದ್ದರು. ಬಿಜೆಪಿ ಬರದೇ ಇದ್ರೇ ಒಳಗೆ ಹಾಕ್ತೇನೆ ಎಂದು ಮೋದಿ ಹೇಳಿದ್ದಕ್ಕೆ ಬಿಜೆಪಿಗೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ. 

ದುಡ್ಡು ಮಾಡೋ ಹುಚ್ಚು ನನಗಿಲ್ಲ. ಶಾಶ್ವತವಾಗಿ ಪರಿಹಾರ ಕೋಡೋರನ್ನ ಆಯ್ಕೆ ಮಾಡಿ ಎಂದು ಮತದಾರರಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತಹಾಕಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

Follow Us:
Download App:
  • android
  • ios