ಅರಣ್ಯ ಅಧಿಕಾರಿಗಳ ಹರಸಾಹಸ: ಕಾಡು ಸೇರಿದ ಕಾಡಾನೆ
ಶನಿವಾರ ಬೆಳಗಿನ ಜಾವ ಪಟ್ಟಣ ಸಮೀಪದ ಕುರುವಳ್ಳಿಯ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಅರಣ್ಯ ಇಲಾಖೆಯ ಸಿಸಿಎಫ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹರಸಾಹಸದಿಂದÜ ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗಟ್ಟೆಸಮೀಪದ ಗುಡ್ಡೆಕೊಪ್ಪ ಗ್ರಾಮದ ಬಳಿಯಲ್ಲಿರುವ ಕಾಡಿನಲ್ಲಿ ಸೇರಿಕೊಂಡಿದೆ
ತೀರ್ಥಹಳ್ಳಿ (ಜ.2) : ಶನಿವಾರ ಬೆಳಗಿನ ಜಾವ ಪಟ್ಟಣ ಸಮೀಪದ ಕುರುವಳ್ಳಿಯ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಅರಣ್ಯ ಇಲಾಖೆಯ ಸಿಸಿಎಫ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹರಸಾಹಸದಿಂದÜ ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗಟ್ಟೆಸಮೀಪದ ಗುಡ್ಡೆಕೊಪ್ಪ ಗ್ರಾಮದ ಬಳಿಯಲ್ಲಿರುವ ಕಾಡಿನಲ್ಲಿ ಸೇರಿಕೊಂಡಿದೆ.
ಕತ್ತಲು ಆವರಿಸುತ್ತಿದ್ದಂತೆ ಇದ್ದಲ್ಲಿಂದ ಹೊರಡುವ ನಿರೀಕ್ಷೆ ಇರುವ ಆನೆಯನ್ನು ಸಿಬ್ಬಂದಿ ಅದರ ಸ್ವಸ್ಥಾನದೆಡೆಗೆ ಕಳುಹಿಸುವ ಪ್ರಯತ್ನದಲ್ಲಿದ್ದಾರೆ. ಶನಿವಾರ ಬೆಳಗಿನಿಂದ ಆನೆಯ ಜಾಡನ್ನು ಬೆಂಬಿಡದೇ ಅಹೋರಾತ್ರಿ ಆನೆಯನ್ನು ಹಿಂಬಾಲಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರದಿಂದ ಕಾಯುತ್ತಲೇ ಇದ್ದಾರೆ. ಸದ್ಯ ಅದು ಸೇರಿಕೊಂಡಿರುವ ಪ್ರದೇಶ ಸ್ವಲ್ಪಮಟ್ಟಿನ ಸುರಕ್ಷತೆ ಇದೆಯಾದರೂ, ಕಾಡಿನ ಆಸುಪಾಸಿನಲ್ಲಿ ಮನೆಗಳು ಇರುವುದರಿಂದ ಅರಣ್ಯ ಇಲಾಖೆಯವರಿಗೆ ಇರುವ ಆತಂಕ ಕಡಿಮೆಯಾಗಿಲ್ಲ. ಆನೆಯ ಭಯದಲ್ಲಿ ಬಳಗಟ್ಟೆಸುತ್ತಲಿನ ಕೂಲಿ ಕಾರ್ಮಿಕರು ಭಾನುವಾರ ಕೆಲಸಕ್ಕೆ ಕೂಡ ಹೋಗಿರಲಿಲ್ಲ.
Chikkamagaluru: ಮತ್ತೆ ಮೂವರ ಮೇಲೆ ಒಂಟಿ ಕೊಂಬಿನ ಆನೆ ದಾಳಿ: ಗಂಭೀರ ಗಾಯ
ಕುರುವಳ್ಳಿ ಸಮೀಪದ ವಿಠಲನಗರದ ಬಳಿ ಇರುವ ನೆಡುತೋಪಿನಲ್ಲಿ ಸೇರಿಕೊಂಡಿದ್ದ ಈ ಆನೆ ಪಟಾಕಿ ಸಿಡಿತ ಮುಂತಾದ ಅರಣ್ಯ ಇಲಾಖೆಯವರ ಎಲ್ಲ ಪ್ರಯತ್ನಗಳನ್ನು ಧಿಕ್ಕರಿಸಿ ತನ್ನಿಚ್ಚೆ ಬಂದ ದಿಕ್ಕಿನಲ್ಲಿಯೇ ಹೊರಟಿದೆ. ತುಂಗಾನದಿ ದಾಟಿ ಎಳ್ಳಮಾವಾಸ್ಯೆ ಜಾತ್ರೆಗೆ ಆಗಮಿಸಿದ್ದ ಅಂಗಡಿ, ಮುಂಗಟ್ಟುಗಳ ನೂರಾರು ವ್ಯಾಪಾರಿಗಳು ರಸ್ತೆಯಲ್ಲೆ ಮಲಗಿದ್ದ ಪಟ್ಟಣದ ರಥಬೀದಿಯ ಕಡೆಗೆ ಮುಖ ಮಾಡುತ್ತಿದ್ದಂತೆ ಅಧಿಕಾರಿಗಳ ಜಂಘಾಬಲವೇ ಉಡುಗಿದಂತಾಗಿತ್ತು.
ಅರಣ್ಯ ಇಲಾಖೆಯವರು ಆನೆಯನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸುವ ಯತ್ನದಲ್ಲಿದ್ದರೆ ಹೊಸವರ್ಷದ ಸಂಭ್ರಮಾಚರಣೆ ಮಾಡುತ್ತಿದ್ದವರ ಪಟಾಕಿ ಶಬ್ದದಿಂದ ಗಾಬರಿಗೊಂಡ ಆನೆ ಸಿಟ್ಟಿನಿಂದ ಅತ್ತಿಂದಿತ್ತ ತಿರುಗಾಡಿ ಬಾಳೇಬೈಲಿನ ಕಡೆ ಹೊರಟಿದೆ. ಆ ಭಾಗದಲ್ಲಿ ನಡೆಯುತ್ತಿದ್ದ ಪಟಾಕಿ ಸದ್ದಿನಿಂದ ನದಿದಡದಲ್ಲೇ ಹಿಂದೆ ಬಂದು ಕೊನೆಗೆ ತೂಗು ಸೇತುವೆ ಕೆಳಭಾಗದಲ್ಲಿ ತುಂಗಾನದಿ ದಾಟಿ ತಳುವೆ ಕಡೆಗೆ ದಾವಿಸಿದ ಆನೆ ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಬಳಗಟ್ಟೆಹತ್ತಿರದ ಕಾಡನ್ನು ಸೇರುತ್ತಿದ್ದಂತೆ ನಿಟ್ಟುಸಿರು ಬಿಡುವಂತಾಗಿತ್ತು.
Chikkamagalauru Wild Elephant: ಜನರ ನಿದ್ದೆಗೆಡಿಸಿದ್ದ ಮಲೆನಾಡಿನ ನರಹಂತಕ ಕಾಡಾನೆ ಕೊನೆಗೂ ಸೆರೆ
ಸಿಸಿಎಫ್ ಹನುಮಂತಪ್ಪ, ಡಿಎಫ್‌ಓ ಶಿವಶಂಕರ್, ಎಸಿಎಫ್ ಪ್ರಕಾಶ್, ಮಂಡಗದ್ದೆ ಮತ್ತು ಮೇಗರವಳ್ಳಿ ವಲಯ ಆರ್‌ಎಫ್‌ಓ ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.