ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ : ಚಿರತೆ ಉಗುರು, ಆನೆದಂತ ವಶ

ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಚಿರತೆ ಉಗುರು ಹಾಗೂ ಆನೆದಂತ ವಶಕ್ಕೆ ಪಡೆದಿದ್ದು 6 ಮಂದಿಯನ್ನು ಬಂಧಿಸಿದ್ದಾರೆ. 

Forest Officer Seized Elephant Tusk in Shivamogga

ಶಿವಮೊಗ್ಗ [ಜ.25]: ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆನೆದಂತ ಮತ್ತು ಚಿರತೆ ಉಗುರುಗಳನ್ನು ವಶಕ್ಕೆ ಪಡೆದಿದ್ದಾರೆ. 

ತೀರ್ಥಹಳ್ಳಿ - ಶಿವಮೊಗ್ಗ ಅರಣ್ಯ ಸಂಚಾರಿ ದಳದ ಡಿಎಫ್ ಒ ನಾಗರಾಜ್ ಮತ್ತು ಎಸಿಎಫ್ ಒ ಬಾಲಚಂದ್ರ ನೇತೃತ್ವದಲ್ಲಿ ದಾಳಿ ನಡೆದಿದೆ. 

ಈ ವೇಳೆ ನಾಲೂರು ವಾಸಿ ರಾಜಗೋಪಾಲ ಮತ್ತು ನರಟೂರಿನ ಕೃಷ್ಣಮೂರ್ತಿ ಎಂಬುವರನ್ನು ಬಂಧಿಸಲಾಗಿದೆ. ಇವರ ಬಳಿ ಇದ್ದ ಆನೆದಂತವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ವಿಶಿಷ್ಟ ರೀತಿಯಲ್ಲಿದೆ ತಾ.ಪಂ ಸದಸ್ಯನ ಪುತ್ರನ ವಿವಾಹ ಆಹ್ವಾನ ಪತ್ರಿಕೆ.!...

ಸಾಗರದ ತಾಲೂಕಿನ ತುಮರಿ ಗ್ರಾಮದಲ್ಲಿಯೂ ದಾಳಿ ನಡೆಸಿದ ಅಧಿಕಾರಿಗಳು 13 ಚಿರತೆ ಉಗುರುಗಳನ್ನು ವಶಕ್ಕೆ ಪಡೆದಿದ್ದು, ಈ ವೇಳೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಬಂಧಿತರನ್ನು ದೇವರಾಜ, ಉದಯ್ ಕುಮಾರ್, ಸುಧಾಕರ್, ನವೀನ್ ಎಂಬ ನಾಲ್ವರು ಆರೋಪಿಗಳನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Latest Videos
Follow Us:
Download App:
  • android
  • ios