ಕಾರ್ಮಿಕನನ್ನು ಅಟ್ಟಾಡಿಸಿಕೊಂಡು ಬಂದ ಕಾಡಾನೆ: ಯುವಕ ಜಸ್ಟ್ ಮಿಸ್

ಕಳಸ ತಾಲೂಕಿನ ಹೊರನಾಡು ಸಮೀಪದ ಹೆಬ್ಬಾಳೆ ಬಳಿ ಘಟನೆ
ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ದಾಳಿಗೆ ಮುಂದಾದ ಒಂಟಿ ಸಲಗ

Forest elephant that chased the garden labor youth just miss sat

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಫೆ.14): ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಕಾಡಾನೆ ದಾಳಿಯಿಂದ ಕೂದಲಳೆ ಅಂತರದಲ್ಲಿ ಸಾವಿನಿಂದ ಪಾರಾಗಿರುವ ಚಿಕ್ಕಮಗಳೂರು ಘಟನೆ ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಸಮೀಪದ ಹೆಬ್ಬಾಳೆ ಗ್ರಾಮದಲ್ಲಿ ನಡೆದಿದೆ. 

ಕೂಲಿ ಕಾರ್ಮಿಕರು ಹೆಬ್ಬಾಳೆ ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸೈಲೆಂಟಾಗಿ ಕಾಫಿ ತೋಟಕ್ಕೆ ಎಂಟ್ರಿ ಕೊಟ್ಟ ಕಾಡಾನೆ ಏಕಾಏಕಿ ಕಾರ್ಮಿಕನ ಮೇಲೆ ದಾಳಿಗೆ ಮುಂದಾಗಿದೆ. ಆನೆಯನ್ನ ಕಂಡ ಕೂಡಲೇ ಕಾರ್ಮಿಕ ಬೇರೆ ಕಾರ್ಮಿಕರಿಗೂ ಕೇಳುವಂತೆ ಕೂಗಿಕೊಂಡು ತೋಟದಿಂದ ಜೀವ ಭಯದಲ್ಲಿ ಓಡಿಹೋಗಿದ್ದಾನೆ. ಕಾಡಾನೆ ಕೂಡ ಆತನ ಹಿಂದೆಯೇ ಓಡಿದೆ. ಆದರೆ, ಕೂಲಿ ಕಾರ್ಮಿಕ ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದಾನೆ. ಸ್ವಲ್ಪ ದೂರ ಅಟ್ಟಿಸಿಕೊಂಡು ಬಂದ ಕಾಡಾನೆ ನಂತರ ವಾಪಸ್ ಹೋಗಿದೆ. 

ಸಕ್ರೆಬೈಲು ಆನೆ ಬಿಡಾರದಿಂದ ಮತ್ತೆ 3 ಆನೆಗಳು ಶಿಫ್ಟ್‌?: ಮಧ್ಯಪ್ರದೇಶದಿಂದ ಅರಣ್ಯ ಇಲಾ​ಖೆಗೆ ಮತ್ತೆ ಬೇಡಿಕೆ

ಮನೆಯ ಪಕ್ಕದಲ್ಲಿದ್ದ ತೋಟದಲ್ಲಿ ಕಾಡಾನೆ ಪ್ರತ್ಯಕ್ಷ: ಇದರ ಜೊತೆಗೆ ಇಂದು ಕೂಡ ಬೆಳಗಿನ ಜಾವ ಕಳಸ ತಾಲೂಕಿನ ಮುಂಡುಗದಮನೆ ಗ್ರಾಮದಲ್ಲಿ ಮನೆಯ ಪಕ್ಕದಲ್ಲಿದ್ದ ತೋಟದಲ್ಲಿ ಕಾಡಾನೆ ಬಂದು ನಿಂತಿದೆ. ಬೆಳಗಿನ ಜಾವ ಮನೆಯಿಂದ ಹೊರಬಂದ ಮನೆಯವರು ಆನೆಯನ್ನು ನೋಡಿ ಭಯಗೊಂಡು ಮನೆ ಸೇರಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನ ಜೀವಭಯದಲ್ಲಿ ಬದುಕುವಂತಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಹಾವಳಿ ಯತೇಚ್ಛವಾಗಿತ್ತು. 

ಕಾಡಾನೆ ಹಾವಳಿ ಮೂಡಿಗೆರೆಯಿಂದ ಕಳಸಕ್ಕೆ ಶಿಫ್ಟ್‌: ಮೂರ್ನಾಲ್ಕು ವರ್ಷದಲ್ಲಿ ಏಳೆಂಟು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಆದರೆ, ಕಳೆದ ಮೂರ್ನಾಲ್ಕು ತಿಂಗಳಿನಿಂದ ಮೂಡಿಗೆರೆಯಲ್ಲಿ ಕಾಡಾನೆ ಹಾವಳಿ ಕಡಿಮೆಯಾಗಿದ್ದು, ಕಳಸದಲ್ಲಿ ಹೆಚ್ಚಾಗಿದೆ. ಅಂದರೆ ಕಾಡಾನೆಗಳ ಹಾವಳಿ ಈಗ ಮೂಡಿಗೆರೆಯಿಂದ ಕಳಸ ಭಾಗಕ್ಕೆ ಶಿಫ್ಟ್‌ ಆಗಿದೆ. ಹಾಗಾಗಿ ಮಲೆನಾಡಿಗರು ಅರಣ್ಯ ಇಲಾಖೆ, ಕೂಡಲೇ ಕಾಡಾನೆಯನ್ನ ಸೆರೆಹಿಡಿದು ಬೇರೆ ಸ್ಥಳಾಂತರ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಜನರ ಪ್ರಾಣದ ಜತೆ ಕಾರು ಚಾಲಕನ ಚೆಲ್ಲಾಟ: ಒಂಟಿ ಸಲಗದಿಂದ ಕೂದಲೆಳೆ ಅಂತರದಲ್ಲಿ ಬಚಾವ್

ವಿದ್ಯುತ್ ತಂತಿ ತಗುಲಿ‌ ಅಸ್ವಸ್ಥಗೊಂಡಿದ್ದ ಕಾಡಾನೆಗೆ ಯಶಸ್ವಿ ಚಿಕಿತ್ಸೆ: 

ಚಾಮರಾಜನಗರ (ಫೆ.14): ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ‌ ಅಸ್ವಸ್ಥಗೊಂಡಿದ್ದ ಕಾಡಾನೆಗೆ ಪಶು ವೈದ್ಯರಿಂದ 10 ಗಂಟೆಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಮತ್ತೆ ಕಾಡಿನತ್ತ ಆನೆ ತೆರಳಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿಯಲ್ಲಿ ಕಾಡಾನೆ ಅಸ್ವಸ್ಥಗೊಂಡಿತ್ತು. ಈ ವೈದ್ಯರ ಸತತ ಪ್ರಯತ್ನದ ಚಿಕಿತ್ಸೆಗೆ ಕಾಡಾನೆ ಸ್ಪಂದಿಸಿದೆ. ಅಸ್ವಸ್ಥಗೊಂಡಿದ್ದ ಕಾಡಾನೆ ಚಿಕಿತ್ಸೆಗೆ ಫಲಪ್ರದವಾಗಿದೆ. ನಂತರ ಜೆಸಿಬಿ ಮೂಲಕ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ಮೇಲೆಬ್ಬಿಸಿ ನಿಲ್ಲಿಸಿದ್ದಾರೆ. ನಂತರ, ಆನೆ ನಿಧಾನವಾಗಿ ಚೇತರಿಸಿಕೊಂಡು ನಡೆಯುತ್ತಾ ಕಾಡಿನತ್ತ ಹೆಜ್ಜೆಯನ್ನು ಹಾಕಿದೆ. 

Latest Videos
Follow Us:
Download App:
  • android
  • ios