Asianet Suvarna News Asianet Suvarna News

Gadag: ರೋಣದಲ್ಲಿ 10 ದಿನದಿಂದ ಶೋಧ, ಪತ್ತೆಯಾಗದ ಚಿರತೆ: ಆತಂಕದಲ್ಲಿ ಜನತೆ

*  ನಾಗೇಂದ್ರಗಡ ಸುತ್ತಮುತ್ತ ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ
*  ಇಲ್ಲಿಯವರೆಗೂ ಚಿರತೆಯಾಗಲಿ ಅಥವಾ ಅದರ ಹೆಜ್ಜೆ ಗುರುತು ಪತ್ತೆಯಾಗಿಲ್ಲ
*  ಸಿಸಿ ಕ್ಯಾಮೆರಾ ಕಣ್ಗಾವಲು

Forest Department Still Continue Cheetah Operation at Ron in Gadag grg
Author
Bengaluru, First Published Jan 26, 2022, 12:26 PM IST

ರೋಣ(ಜ.26):  ಚಿರತೆ(Leopard) ಓಡಾಡುತ್ತಿದೆ ಎಂಬ ವದಂತಿ ಹಿನ್ನೆಲೆ ಬಂಧನಕ್ಕೆ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಕಳೆದ 10 ದಿನಗಳಿಂದ ತೀವ್ರ ಕಾರ್ಯಾಚರಣೆಗಿಳಿದ್ದು, ಈವರೆಗೂ ಚಿರತೆ ಪತ್ತೆಯಾಗಿಲ್ಲ. ಚಿರತೆಯೊಂದು ಕುದುರೆ, ದನ, ಕರುಗಳನ್ನು ತಿಂದು ಹಾಕಿದೆ ಎನ್ನುವ ವದಂತಿಗೆ ನಾಗೇಂದ್ರಗಡ ಸೇರಿದಂತೆ ಸುತ್ತಲಿನ ಗುಡ್ಡುಗಾಡುಗಳಲ್ಲಿ(Forest) ಚಿರತೆ ಶೋಧ(Cheetah Operation) ಕಾರ್ಯ 10 ದಿನದಿಂದ ನಡೆಯುತ್ತಿದ್ದು, ಚಿರತೆ ಪತ್ತೆಗಾಗಿ ಸಿಸಿ ಕ್ಯಾಮೆರಾ(CC Camera), ಬೋನುಗಳನ್ನು ಅಳವಡಿಕೆ ಮಾಡಿ ಕಾರ್ಯಾಚರಣೆ ಮುಂದುವರಿಸಿದ್ದು, ಇಲ್ಲಿಯವರೆಗೂ ಚಿರತೆಯಾಗಲಿ ಅಥವಾ ಅದರ ಹೆಜ್ಜೆ ಗುರುತಾಗಲಿ ಪತ್ತೆಯಾಗಿಲ್ಲ.

ಸಿಸಿ ಕ್ಯಾಮೆರಾ ಕಣ್ಗಾವಲು:

ಚಿರತೆ ಪತ್ತೆಗಾಗಿ ಇಲ್ಲಿನ ಗುಡ್ಡುಗಾಡು ಪ್ರದೇಶದ ಇಳಿಜಾರು ಜಾಗೆಯಲ್ಲಿರುವ ಮರಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಲಾಗಿದೆ. ಕಳೆದ ಹತ್ತು ದಿನಗಳಿಂದ ಅರಣ್ಯ ಇಲಾಖೆಯ(Forest Department) ಸಿಬ್ಬಂದಿ ಗುಡ್ಡುಗಾಡು ಪ್ರದೇಶದ ಮೇಲಿರುವ ಟವರ್‌ ನಿರ್ಮಿಸಿಕೊಂಡು, ಈ ಮೂಲಕ ನಿರಂತರವಾಗಿ ಬೈನಾಕ್ಯುಲರ್‌ ಉಪಯೋಗಿಸಿ ಚಿರತೆ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ.

Leopard in School: ಶಾಲೆಗೆ ಬಂದ ಚೀತಾ... ಎದ್ದು ಬಿದ್ದು ಓಡಿದ ಮಕ್ಕಳು

ಡಿಸೆಂಬರ್‌ನಲ್ಲಿ ಸಂಶಯಾಸ್ಪದವಾಗಿ ಎರಡು ಕುದುರೆಗಳು ದಾಳಿಗೊಳಗಾಗಿ ಸಾವಿಗೀಡಾಗಿದ್ದವು. ಅದೇ ರೀತಿ ಜ. 16ರಂದು ಆಕಳೊಂದರ ಮೇಲೆ ದಾಳಿಯಾಗಿ ಹಸವು ಸಾವಿಗೀಡಾಗಿತ್ತು. ಇದರಿಂದ ತೀವ್ರ ಭಯಗೊಂಡ ಈ ಭಾಗದ ಜನತೆ ಚಿರತೆಯಿದೆ, ಇದರಿಂದಾಗಿಯೇ ಜಾನುವಾರುಗಳ(Livestock) ಮೇಲೆ ದಾಳಿಯಾಗುತ್ತಿದ್ದು, ಶೀಘ್ರದಲ್ಲಿ ಚಿರತೆ ಪತ್ತೆ ಮಾಡಿ, ಭಯಮುಕ್ತಗೊಳಿಸುವಂತೆ ಸ್ಥಳೀಯ ಶಾಸಕರು, ತಾಲೂಕು ಮತ್ತು ಜಿಲ್ಲಾ ಮಟ್ಟದ ಅರಣ್ಯ ಇಲಾಖೆ ಅಧಿಕಾರಿಗಳ ಮೊರೆ ಹೋಗಿದ್ದರು. ಈ ಹಿನ್ನೆಲೆ ಕಾರ್ಯಪ್ರವೃತ್ತರಾದ ಪ್ರಾದೇಶಿಕ ಅರಣ್ಯ ಇಲಾಖೆಯ ಸಿಬ್ಬಂದಿ ಕಳೆದ 10 ದಿನಗಳಿಂದ ಅಹೋರಾತ್ರಿ ಚಿರತೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಚಿರತೆಯೊಂದು ಜಾನುವಾರುಗಳನ್ನು ತಿಂದು ಹಾಕುತ್ತಿದೆ ಎನ್ನುವ ವದಂತಿ ಹಿನ್ನೆಲೆ ಜ. 16ರಿಂದ ನಾಗೇಂದ್ರಗಡ ಗುಡ್ಡುಗಾಡು ಪ್ರದೇಶದ ಸುತ್ತ ಎರಡು ವಿಶೇಷ ತಂಡಗಳನ್ನು ರಚಿಸಿಕೊಂಡು ನಿರಂತರ ಅಹೋರಾತ್ರಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಹೆಚ್ಚುವರಿಯಾಗಿ ದಿನಗೂಲಿ ನೌಕರರನ್ನು ನಿಯುಕ್ತಿಗೊಳಿಸಿ ಚಿರತೆ ಶೋಧನೆ ಕಾರ್ಯ ಮಾಡುತ್ತಿದ್ದೇವೆ ಅಂತ ರೋಣ ತಾಲೂಕು ಪ್ರಾದೇಶಿಕ ವಲಯ ಸಹಾಯಕ ಅರಣ್ಯಾಧಿಕಾರಿ ಎ.ಬಿ. ಕೋಲ್ಹಾರ ತಿಳಿಸಿದ್ದಾರೆ. 

ಚಿರತೆ ಸೆರೆಗೆ ಅಧಿಕಾರಿಗಳು ವಿಫಲ

ಗಜೇಂದ್ರಗಡ:  ತಾಲೂಕಿನ ನಾಗೇಂದ್ರಗಡ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ಚಿರತೆ ಪತ್ತೆ ಕಾರ್ಯ ಮಾಡುವ ಬದಲು ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಕೊರತೆ ನೆಪವೊಡ್ಡಿ ಗ್ರಾಮದಿಂದ ಕಾಲ್ಕಿತ್ತಿದ್ದು, ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಿ.ಎಸ್‌. ಪಾಟೀಲ(GS Patil) ಆರೋಪಿಸಿದ್ದರು.

brave mother: ಚಿರತೆಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ಸಾಹಸಿ ತಾಯಿ

ತಾಲೂಕಿನ ನಾಗೇಂದ್ರಗಡ ಗ್ರಾಮದ ರೈತ ನಿಂಗಪ್ಪ ಹಂಡಿ ಅವರ ದನದ ದೊಡ್ಡಿಯಲ್ಲಿ ಭಾನುವಾರ ಚಿರತೆ ದಾಳಿಯಿಂದ ಹಸು ಮೃತಪಟ್ಟ(Death) ಹಿನ್ನೆಲೆ ಸೋಮವಾರ ರೈತನ ಮನೆಗೆ ಭೇಟಿ ಗ್ರಾಮಸ್ಥರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದರು.

ಕಳೆದ ಕೆಲ ತಿಂಗಳಿನಿಂದ ನಾಗೇಂದ್ರಗಡ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ನಾಯಿ, ನರಿ ಮೇಲೆ ದಾಳಿ ಮಾಡಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ ಕಾಟಾಚಾರಕ್ಕೆ ಎಂಬಂತೆ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಚಿರತೆ ಮಾತ್ರ ಪತ್ತೆಯಾಗಿಲ್ಲ. ಅಲ್ಲದೇ ಭಾನುವಾರ ಚಿರತೆ ದಾಳಿಯಿಂದ ಹಸು ಮೃತಪಟ್ಟಿದೆ. ಅಧಿಕಾರಿಗಳು .20 ಸಾವಿರ ಪರಿಹಾರ ಕೊಡುವುದಾಗಿ ನೀಡಿರುವ ಭರವಸೆಯೂ ಅವೈಜ್ಞಾನಿಕವಾಗಿದೆ. ಚಿರತೆ ಪತ್ತೆಗಾಗಿ ಗ್ರಾಮದಲ್ಲಿ ಮೊಕ್ಕಾಂ ಹೂಡಬೇಕಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಕೊರತೆ ನೆಪವೊಡ್ಡಿ ಗ್ರಾಮದಿಂದ ಹೊರನಡೆದಿದ್ದಾರೆ. ಪರಿಣಾಮ ಚಿರತೆ ಮತ್ತೆ ಗ್ರಾಮದಲ್ಲಿ ಕಾಣಿಸಿಕೊಂಡು ರೈತರಲ್ಲಿ ಮತ್ತಷ್ಟು ಭಯ ಹೆಚ್ಚಿಸಿದೆ. ಹೀಗಾಗಿ ಅವಘಡ ಸಂಭವಿಸುವ ಮುಂಚೆ ಸರ್ಕಾರ ತಕ್ಷಣವೇ ನೆರೆಯ ತಾಲೂಕಿನ ಅರಣ್ಯ ಸಿಬ್ಬಂದಿಯನ್ನು ಕನಿಷ್ಠ ಒಂದು ವಾರ ನಾಗೇಂದ್ರಗಡ ಗ್ರಾಮದಲ್ಲಿ ಚಿರತೆ ಪತ್ತೆ ಕಾರ್ಯಕ್ಕೆ ನಿಯೋಜನೆ ಮಾಡಬೇಕು. ಚಿರತೆ ದಾಳಿಯಿಂದ ಹಸು ಕಳೆದುಕೊಂಡಿರುವ ರೈತನಿಗೆ ಯೋಗ್ಯ ಪರಿಹಾರ(Compensation) ನೀಡಬೇಕು ಎಂದು ಆಗ್ರಹಿಸಿದರು.
 

Follow Us:
Download App:
  • android
  • ios