ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾದ ವಿದೇಶಿಗ

ಹಂಪಿ ಭದ್ರತಾ ಸಿಬ್ಬಂದಿ ಮೇಲೆ ವಿದೇಶಿಗನ ಹಲ್ಲೆ| ಗಂಭೀರವಾಗಿ ಗಾಯಗೊಂಡ ಸಿಬ್ಬಂದಿ ಆಸ್ಪತ್ರೆಗೆ ದಾಖಲು| ಹಂಪಿಯ ಪ್ರವಾಸಕ್ಕೆ ಬಂದ ವಿದೇಶಿ ಪ್ರಜೆಯ ಹುಚ್ಚಾಟ| ಹಂಪಿಯ ಕಮಲ ಮಹಲ್‌ ಮೇಲ್ಭಾಗಕ್ಕೆ ಪ್ರವೇಶ ನಿರಾಕರಿಸಿದ್ದೇ ವಿದೇಶಿಗನ ಹುಚ್ಚಾಟಕ್ಕೆ ಕಾರಣ ಎನ್ನಲಾಗಿದೆ|  ಹಲ್ಲೆ ನಡೆಸಿದ ವಿದೇಶಿಗನಿಗೆ ಹಂಪಿ ಪೊಲೀಸರಿಂದ  ಶೋಧಕಾರ್ಯ ಆರಂಭ| 

Foreigner Assault on Security Guard in Hampi

ಹೊಸಪೇಟೆ: (ಸೆ.23) ಹಂಪಿಯ ಪ್ರವಾಸಕ್ಕೆ ಬಂದ ವಿದೇಶಿ ಪ್ರಜೆಯೊಬ್ಬ ಹಂಪಿಯ ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವ ಮೂಲಕ ಹುಚ್ಚಾಟ ಮೆರೆದಿದ್ದಾನೆ.

ಹಂಪಿಯ ಕಮಲ ಮಹಲ್‌ ಮೇಲ್ಭಾಗಕ್ಕೆ ಪ್ರವೇಶ ನಿರಾಕರಿಸಿದ್ದೇ ವಿದೇಶಿಗನ ಹುಚ್ಚಾಟಕ್ಕೆ ಕಾರಣ ಎನ್ನಲಾಗಿದೆ. ವಿದೇಶಿಗ ಭದ್ರತಾ ಸಿಬ್ಬಂದಿಯ ಕೈಯಲ್ಲಿನ ಗನ್‌ ಕಿತ್ತುಕೊಂಡು ಹೆದರಿಸುವುದಲ್ಲದೆ, ಭದ್ರತಾ ಸಿಬ್ಬಂದಿ ಧರ್ಮರಾಜ ಎಂಬ ವ್ಯಕ್ತಿಯ ತಲೆಗೆ ಬಂದೂಕಿನ ಹಿಂಭಾಗದಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಧರ್ಮರಾಜ ಸ್ಥಳೀಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಹಲ್ಲೆ ನಡೆಸಿದ ವಿದೇಶಿಗನಿಗೆ ಹಂಪಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇತ್ತೀಚೆಗೆ ಹಂಪಿಯಲ್ಲಿ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಭಾರತೀಯ ಪುರಾತತ್ವ ಇಲಾಖೆಯ ಎಸ್‌ಐಎಸ್‌ ಸೆಕ್ಯುರಿಟಿಯಿಂದ ಶಸ್ತ್ರ ಸಜ್ಜಿತ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕಲು ಶಸ್ತ್ರಸಜ್ಜಿತ ಸಿಬ್ಬಂದಿ ಹಂಪಿಯ ಸ್ಮಾರಕಗಳಿಗೆ ಕಾವಲಿದ್ದಾರೆ. 


ಆದರೆ, ಹಾಡಹಗಲೇ ಶಸ್ತ್ರಸಜ್ಜಿತ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದಲ್ಲದೆ ಸಿಬ್ಬಂದಿಯ ಕೈಯಲ್ಲಿ ಬಂದೂಕು ಕಿತ್ತುಕೊಂಡು ಹಲ್ಲೆಗೆ ಮುಂದಾಗಿರುವ ಘಟನೆ ಬೆಚ್ಚಿಬೀಳುವಂತೆ ಮಾಡಿದೆ. ಈ ಸಂಬಂಧ ಹಂಪಿ ಪ್ರವಾಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ವಿದೇಶಿ ಪ್ರಜೆಗಾಗಿ ಹುಡುಕಾಟ ನಡೆಸಿದ್ದಾರೆ.
 

Latest Videos
Follow Us:
Download App:
  • android
  • ios