Asianet Suvarna News Asianet Suvarna News

‘ಸನಾತನ’ ವಿವಾದ ಹಿಂದೆ ವಿದೇಶಿ ಷಡ್ಯಂತ್ರ: ಚಕ್ರವರ್ತಿ ಸೂಲಿಬೆಲೆ

ಸನಾತನವನ್ನು ತೊಡೆದುಹಾಕುವ ಕಲ್ಪನೆ ಕೇವಲ ತಮಿಳ್ನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ನಲ್ಲಿ ಮಾತ್ರವಲ್ಲ ಇದನ್ನು ವಿಶ್ವ ಮಟ್ಟಕ್ಕೆ ಪಸರಿಸುವ ದುರುದ್ದೇಶವನ್ನು ಹೊಂದಿದ್ದಾರೆ. ಈ ಮೂಲಕ ಹಿಂದುತ್ವವನ್ನು ವಿಭಜಿಸಲು ಹೊರಟಿದ್ದಾರೆ: ನಮೋ ಬ್ರಿಗೇಡ್ ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆ 

Foreign Conspiracy behind the Sanatana Dharma Controversy Says Chakravarti Sulibele grg
Author
First Published Sep 13, 2023, 4:38 PM IST

ಮಂಗಳೂರು(ಸೆ.13):  ‘ಸನಾತನ’ ಬಗ್ಗೆ ಮನಬಂದಂತೆ ಮಾತನಾಡುವುದು ಅಂತಾರಾಷ್ಟ್ರೀಯ ಷಡ್ಯಂತರದ ಭಾಗವಾಗಿದೆ. ಇದೊಂದು ಸೋಕಾಲ್ಡ್‌ಗಳ ಡಾಟ್‌ ಪಾರ್ಟಿಗಳ(ಇಂಡಿಯಾ) ಟೂಲ್‌ಕಿಟ್ ಆಗಿದ್ದು, ಇದರ ಹಿಂದೆ ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ ಇದೆ. ಇದನ್ನು ಹಿಂದೂ ಸಮಾಜ ಅರ್ಥಮಾಡಿಕೊಳ್ಳಬೇಕು ಎಂದು ನಮೋ ಬ್ರಿಗೇಡ್ ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಮಂಗಳವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೊಳಕಿನ ಮುಂದುವರಿದ ಭಾಗ ಇದು. ಹಿಂದೆ ಆರ್ಯರು ಆಕ್ರಮಣ ಮಾಡಿದರು ಎಂದು ಹೇಳಿದ್ದು, ಅದು ಸುಳ್ಳಾಯ್ತು, ನಂತರ ಗ್ಲೋಬಲ್‌ ಹಿಂದುತ್ವ ವಿಚಾರದಲ್ಲೂ ಎಡಪಂಥೀಯರಿಗೆ ಯಶಸ್ಸು ಸಿಗಲಿಲ್ಲ. ಈಗ ಅವರು ಸನಾತನವನ್ನೇ ಪ್ರತ್ಯೇಕ ಮಾಡಿಕೊಂಡು, ಅದು ಬ್ರಾಹ್ಮಣರಿಗೆ ಸಂಬಂಧಪಟ್ಟದ್ದು, ಅದನ್ನು ಪ್ರತ್ಯೇಕಿಸಿ ಮೂಲೋತ್ಪಾಟನೆ ಮಾಡಬೇಕು ಎಂದು ವಿಭಜನೆಗೆ ವ್ಯವಸ್ಥಿತ ಷಡ್ಯಂತರ ರೂಪಿಸಿದ್ದಾರೆ. ಇವೆಲ್ಲವೂ ಇಂಡಿಯಾ ಎನ್ನುವ ಡಾಟ್‌ ಪಾರ್ಟಿಗಳ ಹುನ್ನಾರ. ಅದರಲ್ಲಿರುವವರು ಯಾರು ಕೂಡ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದಾದರೆ, ಅದು ಟೂಲ್‌ಕಿಟ್‌ನ ಒಂದು ಭಾಗ ಎಂದೇ ಭಾವಿಸಬೇಕಾಗುತ್ತದೆ ಎಂದರು.

'ಹಿಂದೂ ಸಿದ್ಧಾಂತವನ್ನೇ ಸಂಘಿ ಎನ್ನುವುದಾದರೆ, ನಾನು ಸಂಘಿ' ಎಂದ ಖ್ಯಾತ ನಿರೂಪಕಿ ರಶ್ಮಿ ಗೌತಮ್‌!

ಸನಾತನವನ್ನು ತೊಡೆದುಹಾಕುವ ಕಲ್ಪನೆ ಕೇವಲ ತಮಿಳ್ನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ನಲ್ಲಿ ಮಾತ್ರವಲ್ಲ ಇದನ್ನು ವಿಶ್ವ ಮಟ್ಟಕ್ಕೆ ಪಸರಿಸುವ ದುರುದ್ದೇಶವನ್ನು ಹೊಂದಿದ್ದಾರೆ. ಈ ಮೂಲಕ ಹಿಂದುತ್ವವನ್ನು ವಿಭಜಿಸಲು ಹೊರಟಿದ್ದಾರೆ. ಅಮೆರಿಕದಲ್ಲಿರುವ ಬಿಳಿ ಮತ್ತು ಕಪ್ಪು ವರ್ಣಭೇದ ನೀತಿಗೆ ಕಾರಣ ಭಾರತ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ, ದುರದೃಷ್ಟವಶಾತ್‌ ಇಲ್ಲಿರುವ ಜಾತಿ ವ್ಯವಸ್ಥೆಗೂ ಅದೇ ಕಾರಣ ಎಂದು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಎರಡೂ ಬೇರೆ ಬೇರೆ. ವಿಶ್ವ ಮಟ್ಟದಲ್ಲಿ ಹಿಂದೂ ಧರ್ಮವನ್ನು ಕಿತ್ತೊಗೆಯಲು ಸಾಧ್ಯವಾಗಿಲ್ಲ, ಹಾಗಾಗಿ ಸನಾತನ ಎಂದು ಹೊಸದಾಗಿ ಶಬ್ದದ ಬೆನ್ನುಬಿದ್ದಿದ್ದಾರೆ. ಮೇಲ್ವರ್ಗ ಮತ್ತು ಕೆಳವರ್ಗ ಎಂದಿರುವುದನ್ನು ಭಾರತಲ್ಲಿ ಇಂದು ಕಾಣದಿದ್ದರೂ ಅದನ್ನು ವಿವಾದಕ್ಕೆ ತರುವ ಹುನ್ನಾರ ನಡೆಸುತ್ತಿದ್ದಾರೆ. ಸನಾತನ ಎಂದರೆ, ಅದು ಹಿಂದು ಅಲ್ಲ, ಬೇರೆ, ನಾವು ಆಚರಣೆ ಮಾಡುವುದೇ ಹಿಂದು ಎಂದು ಪ್ರತ್ಯೇಕಿಸಲು ನೋಡುತ್ತಿದ್ದಾರೆ. ಉದಾಹರಣೆಗೆ ರಾಹುಲ್‌ ಗಾಂಧಿ ದೇವಸ್ಥಾನಕ್ಕೆ ಹೋಗಿ ವಿಭೂತಿ ಬಳಿಯುತ್ತಾರೆ, ಅದುವೇ ಹಿಂದು ಎನ್ನುತ್ತಾರೆ, ಈ ವಾದ ಪ್ರಯೋಜನವಾಗದೇ ಇದ್ದಾಗ ಸನಾತನ ಎಂಬ ಪದವನ್ನು ವಿವಾದಕ್ಕೆ ಎಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇದು ಶೇಕಡಾ ನೂರರಷ್ಟು ಕುತಂತ್ರವಾಗಿದ್ದು, ಇದರ ಬಗ್ಗೆ ಹಿಂದೂ ಸಮಾಜ ಎಚ್ಚರಿಕೆಯಿಂದ ಇರಬೇಕು ಎಂಬುದು ನನ್ನ ವಿನಂತಿ ಎಂದರು.

Follow Us:
Download App:
  • android
  • ios