ಜಿಲ್ಲೆಯಲ್ಲಿ 2.8 ಲಕ್ಷ ಕುಂಚಿಟಿಗ ಸಮುದಾಯದ ಜನರಿದ್ದು, ರಾಜಕೀಯ ಹಕ್ಕಿಗಾಗಿ ಈ ಬಾರಿ ಕುಂಚಿಟಿಗ ಸಮಾಜದ ಅಭ್ಯರ್ಥಿಗಳಿಗೆ ಮೂರು ಪಕ್ಷದಲ್ಲಿ ಟಿಕೆಟ್‌ ನೀಡುವಂತೆ ಮಧುಗಿರಿ ತಾಲೂಕು ಕುಂಚಿಟಿಗ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಮಧುಗಿರಿ: ಜಿಲ್ಲೆಯಲ್ಲಿ 2.8 ಲಕ್ಷ ಕುಂಚಿಟಿಗ ಸಮುದಾಯದ ಜನರಿದ್ದು, ರಾಜಕೀಯ ಹಕ್ಕಿಗಾಗಿ ಈ ಬಾರಿ ಕುಂಚಿಟಿಗ ಸಮಾಜದ ಅಭ್ಯರ್ಥಿಗಳಿಗೆ ಮೂರು ಪಕ್ಷದಲ್ಲಿ ಟಿಕೆಟ್‌ ನೀಡುವಂತೆ ಮಧುಗಿರಿ ತಾಲೂಕು ಕುಂಚಿಟಿಗ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಸೋಮವಾರ ಇಲ್ಲಿನ ಸಿಪಿಸಿ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಪಿ.ಎನ್‌.ರಾಜಶೇಖರ್‌ ಮಾತನಾಡಿ, ಕುಂಚಿಟಿಗ ಸಮಾಜವು ಜಿಲ್ಲೆಯಲ್ಲಿ ನಿರ್ಣಾಯಕವಾಗಿದ್ದು 2.8 ಲಕ್ಷ ಮತದಾರರಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಪಕ್ಷ ಮತ್ತು ಬಿಜೆಪಿ, ಜೆಡಿಎಸ್‌ ಮೈತ್ರಿ ಪಕ್ಷದಲ್ಲಿ ಕುಂಚಿಟಿಗ ಸಮಾಜದವರಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಡಲು ತುಮಕೂರು ಲೋಕಸಭೆಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದರು.

ಉಪಾಧ್ಯಕ್ಷ ಜಗದೀಶ್‌ ಮಾತನಾಡಿ, ಕುಂಚಿಟಿಗ ಸಮಾಜ ಶಕ್ತಿಯಾಗಿ ಈ ಹಿಂದೆ ಮೂಡಲಗಿರಿಯಪ್ಪ 4 ಬಾರಿ, ಕೆ. ಮಲ್ಲಣ್ಣ 2 ಬಾರಿ ಮಧುಗಿರಿ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಸ್ಥಾನ ಅಲಂಕರಿಸಿದ್ದರು. ಆದರೆ ಈಗ ಇಂತಹ ರಾಜಕೀಯ ಶಕ್ತಿ ಸಿಗುವುದು ಅನುಮಾವಾಗಿದೆ. ಆದ ಕಾರಣ 3 ಪಕ್ಷದಲ್ಲಿ ನಮ್ಮ ಸಮಾಜಕ್ಕೆ ಟಿಕೆಟ್‌ ನೀಡುವಂತೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ಖಜಾಂಚಿ ರಾಮಚಂದ್ರಪ್ಪ, ವ್ಯವಸ್ಥಾಪಕ ರಾಮಕೃಷ್ಣಯ್ಯ,ನಿರ್ದೇಶಕ ಹರೀಶ್‌ ಇದ್ದರು.