ನಾರಯಣ ಸ್ವಾಮಿಯನ್ನು ಬಿಜೆಪಿ ಉಸ್ತುವಾರಿ ಯಾಗಿ ನೇಮಿಸಲು ಒತ್ತಾಯ
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಚಿತ್ರದುರ್ಗ ಲೋಕಸಭಾ ಚುನಾವಣೆಯ ಬಿಜೆಪಿ ಉಸ್ತುವಾರಿಯನ್ನಾಗಿ ಹಿರಿಯ ಮುಖಂಡ, ಸಂಘಟನಕಾರ ಆನೇಕಲ್ ಕೆ.ನಾರಾಯಣಸ್ವಾಮಿ ಅವರನ್ನು ನಿಯೋಜಿಸುವಂತೆ ಈ ಭಾಗದ ಲೋಕಸಭಾ ವ್ಯಾಪ್ತಿಯ ಆನೇಕ ಮಂದಿ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಬಿಜೆಪಿ ಹೈಕಮೆಂಡ್‌ಗೆ ಮನವಿ ಮಾಡಿದ್ದಾರೆ.
ಪಾವಗಡ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಚಿತ್ರದುರ್ಗ ಲೋಕಸಭಾ ಚುನಾವಣೆಯ ಬಿಜೆಪಿ ಉಸ್ತುವಾರಿಯನ್ನಾಗಿ ಹಿರಿಯ ಮುಖಂಡ, ಸಂಘಟನಕಾರ ಆನೇಕಲ್ ಕೆ.ನಾರಾಯಣಸ್ವಾಮಿ ಅವರನ್ನು ನಿಯೋಜಿಸುವಂತೆ ಈ ಭಾಗದ ಲೋಕಸಭಾ ವ್ಯಾಪ್ತಿಯ ಆನೇಕ ಮಂದಿ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಬಿಜೆಪಿ ಹೈಕಮೆಂಡ್‌ಗೆ ಮನವಿ ಮಾಡಿದ್ದಾರೆ.
ಹಿರಿಯ ಮುಖಂಡ ಆನೇಕಲ್ ಕೆ.ನಾರಾಯಣ ಸ್ವಾಮಿ, ಹಾಲಿ ಬಿಜೆಪಿಯ ಸಕ್ರೀಯ ರಾಜಕಾರಣಿಯಾಗಿದ್ದು, ಈ ಹಿಂದೆ ಆನೇಕ ವರ್ಷಗಳ ಕಾಲ ಜೆಡಿಎಸ್‌ನಲ್ಲಿ ಪ್ರಬಲ ಮುಖಂಡರಾಗಿ ಪಕ್ಷ ಸಂಘಟನೆಗೆ ಶ್ರಮಿಸಿದ್ದರು. ಕಳೆದ ಬಾರಿ ಇಲ್ಲಿನ ಜೆಡಿಎಸ್ ವಿಧಾನ ಸಭೆ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದರು. ಬೆಂಬಲಿಗರ ಸಲಹೆ ಮೇರೆಗೆ ಟಿಕೇಟ್‌ನಿಂದ ಹಿಂದೆ ಸರಿದಿದ್ದು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದರು.
ಈ ಭಾಗದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವರ ಆಪ್ತರಾದ ಮುಖಂಡ ಕೆ.ನಾರಾಯಣಸ್ವಾಮಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿದ್ದಾರೆ. ಈ ಭಾಗದ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಪರಿಚಿತರಾಗಿದ್ದು. ಇಲ್ಲಿನ ಲೋಕಸಭೆ ಎಸ್.ಸಿ.ಮೀಸಲು ಕ್ಷೇತ್ರವಾದ ಕಾರಣ, ಎಸ್ಸಿ, ಎಸ್ ಟಿ, ದಲಿತ ವರ್ಗ ಹಾಗೂ ಇತರೆ ಪಕ್ಷ ಸಂಘಟನೆಯಲ್ಲಿ ಸಕ್ರೀಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಿಜೆಪಿ ಜೆಡಿಎಸ್ ಸೇರಿ ಒಬ್ಬರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಹಿನ್ನಲೆಯಲ್ಲಿ ಕ್ಷೇತ್ರಾವ್ಯಾಪ್ತಿ ಪ್ರವಾಸ ಮಾಡಿದರೆ ಸಮಿಶ್ರ ಪಕ್ಷದ ಅಭ್ಯರ್ಥಿ ಪರ ಹೆಚ್ಚು ಮತಗಳಿಕೆ ಸಾಧ್ಯತೆ ಇದೆ. ಹೀಗಾಗಿ ಪಕ್ಷದ ಹಿತದೃಷ್ಟಿ ಹಾಗೂ ಅಭ್ಯರ್ಥಿ ಗೆಲುವಿನ ಹಿನ್ನಲೆಯಲ್ಲಿ ಮುಖಂಡ ಅನೇಕಲ್ ಕೆ.ನಾರಾಯಣಸ್ವಾಮಿರಿಗೆ ಬಿಜೆಪಿ ಚಿತ್ರದುರ್ಗ ಲೋಕಸಭೆ ಚುನಾವಣೆಯ ಉಸ್ತುವಾರಿಯನ್ನಾಗಿ ನಿಯೋಜಿಸುವಂತೆ ಇಲ್ಲಿನ ನಾಗರಾಜ್, ನಾರಾಯಣಪ್ಪ, ಮಂಜುನಾಥ್ ಹನುಮಂತರಾಯಪ್ಪ ಇತರೆ ಆನೇಕ ಮುಖಂಡರು ರಾಜ್ಯ ಹಾಗೂ ಕೇಂದ್ರ ಬಿಜೆಪಿ ವರಿಷ್ಟರಲ್ಲಿ ಮನವಿ ಮಾಡಿದ್ದಾರೆ.