ಬೆಂಗಳೂರು: ಆಹಾರ ಪ್ರಿಯರ ಹಾಟ್‌ಸ್ಪಾಟ್‌ ಈ ಫುಡ್ ಸ್ಟ್ರೀಟ್..!

ನೂರಾರು ಬಗೆಯ ರುಚಿಕರ ಚಿಕನ್ ಐಟಂಗಳು, ವಿಭಿನ್ನ ರುಚಿಯ ಸೀ ಫುಡ್ ಸೇರಿದಂತೆ ಹಲವು ಬಗ್ಗೆಯ ಮಾಂಸಾಹಾರಗಳಿಗೆ ಈ ರಸ್ತೆ ಫೇಮಸ್ ಆಗಿದೆ. ಬಿರಿಯಾನಿ, ಹಲೀಮ್ ಮತ್ತು ಇತರ ಹಬ್ಬದ ಭಕ್ಷ್ಯಗಳನ್ನು ರಂಜಾನ್ ಗಾಗಿ ತೆರೆದಿಡಲಾಗಿದೆ. ಸಾಲು ಸಾಲು ಅಂಗಡಿಗಳಲ್ಲಿ ಕೆಂಡದ ಮೇಲೆ ಸುಡುವ ತಂದೂರಿ ಆಹಾರವನ್ನು ಸಾರ್ವಜನಿಕರು ಸಾಲು ಗಟ್ಟಿ ನಿಂತು ಸವಿಯುವ ದೃಷ್ಯ ಸರ್ವೆ ಸಮಾನ್ಯವಾಗಿದೆ. 
 
Food Street Masjid Road Hotspot for Food Lovers in Bengaluru grg

ವರದಿ- ರಕ್ಷಾ 

ಬೆಂಗಳೂರು(ಏ.02):  ರಂಜಾನ್ ಹಿನ್ನೆಲೆ ಫ್ರೇಜರ್ ಟೌನ್‌ನ ಪ್ರತಿಷ್ಠಿತ ಫುಡ್ ಸ್ಟ್ರೀಟ್ ಮಸೀದಿ ರಸ್ತೆ ಆಹಾರ ಪ್ರಿಯರ ಸ್ವರ್ಗವಾಗಿದೆ. ಫ್ರೇಜರ್ ಟೌನ್‌ಗೆ ಕಾಲಿಟ್ಟ ತಕ್ಷಣ ಮಸಾಲೆಗಳ ಸುವಾಸನೆ ಮತ್ತು ಗ್ರಿಲ್‌ಗಳಿಂದ ಹೊಗೆಯಾಡುವ ದೃಶ್ಯಗಳು ಫುಡೀಗಳನ್ನು ಸ್ವಾಗತಿಸುತ್ತಿವೆ.

ರಸ್ತೆಯ ಎರಡು ಬದಿಗಳಲ್ಲಿ ವಿಭಿನ್ನ ರೀತಿಯ ವೆಜ್ ಹಾಗೂ ನಾನ್ ವೆಜ್ ಭಕ್ಷಗಳ ಅಂಗಡಿಗಳ ಸಾಲು ಸಾಲು ಬಾಯಲ್ಲಿ ನೀರು ತರಿಸುತ್ತದೆ. ಬಿಸಿ ಬಿಸಿಯಾದ ಮಟನ್ ಕೀಮಾ ವಿವಿಧ ಬಗೆಯ ಸಮೋಸಾಗಳು, ಸುವಾಸನೆಯ ಬಿರಿಯಾನಿ, ರುಚಿಕರವಾದ ಕೇಕ್‌ಗಳು ಮತ್ತು ರಸಭರಿತವಾದ ಸ್ಟೀಕ್ಸ್ - ಇವೆಲ್ಲವು ಸೇರಿ  ಬೆಂಗಳೂರಿನ ಫ್ರೇಜರ್ ಟೌನ್‌ನ ಮಸೀದಿ ರಸ್ತೆ ಸಧ್ಯದ ಆಹಾರ ಪ್ರಿಯರ ಹಾಟ್ ಸ್ಪಾರ್ಟ್ ಆಗಿದೆ. 

ಬೀದಿಬದಿ ಪಾನಿಪುರಿ ತಿಂದ ಕೊರಿಯನ್‌ ಯೂಟ್ಯೂಬರ್ ಏನು ಹೇಳಿದ ನೋಡಿ: ವೈರಲ್

ನೂರಾರು ಬಗೆಯ ರುಚಿಕರ ಚಿಕನ್ ಐಟಂಗಳು, ವಿಭಿನ್ನ ರುಚಿಯ ಸೀ ಫುಡ್ ಸೇರಿದಂತೆ ಹಲವು ಬಗ್ಗೆಯ ಮಾಂಸಾಹಾರಗಳಿಗೆ ಈ ರಸ್ತೆ ಫೇಮಸ್ ಆಗಿದೆ. ಬಿರಿಯಾನಿ, ಹಲೀಮ್ ಮತ್ತು ಇತರ ಹಬ್ಬದ ಭಕ್ಷ್ಯಗಳನ್ನು ರಂಜಾನ್ ಗಾಗಿ ತೆರೆದಿಡಲಾಗಿದೆ. ಸಾಲು ಸಾಲು ಅಂಗಡಿಗಳಲ್ಲಿ ಕೆಂಡದ ಮೇಲೆ ಸುಡುವ ತಂದೂರಿ ಆಹಾರವನ್ನು ಸಾರ್ವಜನಿಕರು ಸಾಲು ಗಟ್ಟಿ ನಿಂತು ಸವಿಯುವ ದೃಷ್ಯ ಸರ್ವೆ ಸಮಾನ್ಯವಾಗಿದೆ. 

ಬೇಸಿಗೆ ಬಿಸಿ ತಣಿಸಲು ರುಚಿಕರ ಪಾನೀಯಗಳು, ವಿಶೇಷ ರುಚಿಯ ಸಿಹಿ ತಿನಿಸಿಗಳು ಸಹ ಈ ಫುಡ್ ಸ್ಟ್ರೀಟ್‌ನ ಹೈಲೆಟ್ಸ್ ಆಗಿದೆ. ರಂಜಾನ್ ಹಿನ್ನಲೆಯಲ್ಲಿ ಎಂದಿಗಿಂತ ಹೆಚ್ಚಿನ ಸಾರ್ವಜನಿಕರು ಸಂಜೆ ವೇಳೆ ಫ್ರೇಜರ್ ಟೌನ್‌ನ  ಮಸೀದಿ ರಸ್ತೆಯ ಈ ಫುಡ್ ಸ್ಟ್ರೀಟ್‌ಗೆ ಹೆಚ್ಚಾಗಿ ಭೇಟಿ ನೀಡಿ ತಮ್ಮ ಇಷ್ಟದ ಖಾದ್ಯಗಳನ್ನು ಸವಿದು ಎಂಜಾಯ್ ಮಾಡುತ್ತಿದ್ದಾರೆ. 

Latest Videos
Follow Us:
Download App:
  • android
  • ios