ಚಾಮರಾಜಪೇಟೆ ಜುಗುರಾಜ್ ಹತ್ಯೆ ಪ್ರಕರಣ: ನಾಲ್ವರ ಬಂಧನ, 8.75 ಕೆ.ಜಿ ಚಿನ್ನಾಭರಣ ವಶ!
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದ್ದ ಜುಗ್ಗುರಾಜ್ ಜೈನ್ ಹತ್ಯೆಗೆ ಸಂಬಂಧಿಸಿ ಗುಜರಾತ್ ನಲ್ಲಿ ಪ್ರಮುಖ ಆರೋಪಿ ಸೆರೆಯಾಗಿದ್ದು, ಆತನ ಮಾಹಿತಿಯಂತೆ ಮತ್ತೆ ಮೂವರನ್ನು ಬಂಧಿಸಲಾಗಿದೆ.
ಕಿರಣ್.ಕೆ.ಎನ್. ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜೂ.7): ಚಾಮರಾಜಪೇಟೆಯಲ್ಲಿ (Chamrajpete ) ನಡೆದಿದ್ದ ಜುಗ್ಗುರಾಜ್ ಜೈನ್ (Jugraj Jain) ಕೊಲೆ ಪ್ರಕರಣ ಸಂಬಂಧ ಗುಜರಾತ್ ನಲ್ಲಿ ಸೆರೆಯಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಮತ್ತೆ ಮೂವರು ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.
ಚಾಮರಾಜಪೇಟೆಯ ಟೆಂಪಲ್ ಸ್ಟ್ರೀಟ್ ನಿವಾಸಿಯಾಗಿದ್ದ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜುಗ್ಗುರಾಜ್ ಜೈನ್ ನನ್ನು ಮೇ 24 ರಂದು ಕೆಲಸ ಮಾಡುತ್ತಿದ್ದ ಪ್ರಮುಖ ಆರೋಪಿ ರಾಜಸ್ತಾನ ಮೂಲದ ಬಿಜಾರಾಮ್, ಕಣ್ಣಿಗೆ ಖಾರದಪುಡಿ ಎರಚಿ ಕೈಕಾಲು ಕಟ್ಟಿ ಹತ್ಯೆ ಮಾಡಿ ಕೋಟ್ಯಂತರ ರೂಪಾಯಿ ನಗ-ನಾಣ್ಯ ದೋಚಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪಶ್ಚಿಮ ವಿಭಾಗದ ಪೊಲೀಸರು ಗುಜರಾತ್ ಪೊಲೀಸರ ಸಹಕಾರದೊಂದಿಗೆ ಬಿಜಾರಾಮ್‌ನನ್ನು ಸೆರೆಹಿಡಿದು 23 ಲಕ್ಷ ಚಿನ್ನಾಭರಣ ಜಪ್ತಿ ಮಾಡಿತ್ತು.
ಎಸ್‌ಸಿ ವಿದ್ಯಾರ್ಥಿಗಳಿಗೆ ಶ್ರೇಷ್ಠ ಯೋಜನೆ, ಏನೆಲ್ಲ ಲಾಭಗಳಿವೆ?
ನಗರಕ್ಕೆ ಕರೆತಂದು ವಿಚಾರಣೆಗೊಳಪಡಿಸಿದಾಗ ಸಹಚರರ ನೆರವಿನಿಂದ ಕೃತ್ಯ ಎಸಗಲು ಎರಡು ದಿನಗಳ ಹಿಂದೆ ಸಂಚು ರೂಪಿಸಿದ್ದೆ ಎಂದು ಬಾಯ್ಬಿಟ್ಟಿದ್ದ. ಈತ ನೀಡಿದ ಮಾಹಿತಿ ಮೇರೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹೇಂದ್ರ, ಪೂರಾನ್ ಹಾಗೂ ಓಂ ಪ್ರಕಾಶ್ ಎಂಬುವರನ್ನು ಬಂಧಿಸಿ ಒಟ್ಟು ,4,93 ಕೋಟಿ ಮೌಲ್ಯದ 8 ಕೆಜಿ 752 ಗ್ರಾಂ ಚಿನ್ನ, 3 ಕೆ.ಜಿ.870 ಗ್ರಾಂ ಬೆಳ್ಳಿ, ಹಾಯು 53 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಓಂರಾಮ್ ದೇವಸಿ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಸಿಧು ಮೂಸೆವಾಲಾ ಹತ್ಯೆಗೂ ಮುನ್ನ ಆತನೊಂದಿಗೆ ಸೆಲ್ಫಿ ಕ್ಲಿಕ್ ಮಾಡಿದ್ದ ವ್ಯಕ್ತಿಯ ಬಂಧನ
ಹೆಂಡತಿ ಕಾಟಕ್ಕೆ ಬೇಸತ್ತು ಕೃತ್ಯವೆಸಗಿದ ಆರೋಪಿ: ರಾಜಸ್ತಾನದ ಪಾಲಿ ಜಿಲ್ಲೆಯ ಬೀಜೊರಾಮ್ ಕಳೆದ ಆರು ತಿಂಗಳಿಂದ ಕೊಲೆಯಾದ ಜುಗ್ಗುರಾಜ್ ಜೈನ್ ಬಳಿ ಕೆಲಸಕ್ಕೆ ಸೇರಿಕೊಂಡಿದ್ದ. ತಿಂಗಳಿಗೆ 15 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದ. ಹೆಚ್ಚಿನ ಸಂಬಳ ತರುವಂತೆ ಪತ್ನಿಯು ಬಿಜಾರಾಮ್ ಗೆ ಪೀಡಿಸುತ್ತಿದ್ದಳು. ಇದರಿಂದ ಬೇಸತ್ತಿದ್ದ ಆರೋಪಿ ಮಾಲೀಕನ ಮನೆಯಲ್ಲಿ ಚಿನ್ನಾಭರಣ ದೋಚುವ ಪ್ಲ್ಯಾನ್ ಮಾಡಿದ್ದಾನೆ. ಇದಕ್ಕೆ ಪೂರಕವಾಗಿ ಸಂಬಂಧಿಕರಾದ ಮಹೇಶ್, ಪೂರಾನ್ ಇನ್ನಿತರರು ಸಾಥ್ ನೀಡಿದ್ದಾರೆ.
Doddaballapura: ಗಂಡನ ಕೊಲೆಗೆ ಹೆಂಡತಿಯಿಂದಲೇ ಸುಪಾರಿ
ಒಟ್ಟು ಐವರ ಜೊತೆ ತಂಡವನ್ನು ರಚಿಸಿಕೊಂಡಿದ್ದ. ಹತ್ಯೆಯಾದ ದಿನದಂದು ಎರಡು ಬ್ಯಾಗಿನಲ್ಲಿ ಕೋಟ್ಯಂತರ ರೂ. ನಗನಾಣ್ಯ ದೋಚಿದ್ದ ಬಿಜೊರಾಮ್, ಆತನ ಸಹಚರರು ಹುಬ್ಬಳಿ ಮರ‍್ಗವಾಗಿ ಗೋವಾಕ್ಕೆ ತೆರಳಿದ್ದರು. ಪರಿಚಿತನಾಗಿದ್ದ ಓಂ ರಾಮ್ ದೇವಸಿ ಮನೆಗೆ ತೆರಳಿದ್ದರು. ಬಳಿಕ ಚಿನ್ನಾಭರಣ ಹಂಚಿಕೊಂಡು ಬಿಜೋರಾಮ್ ಗುಜರಾತ್ ನತ್ತ ಮುಖ ಮಾಡಿದರೆ ಇನ್ನಿಬ್ಬರು ರಾಜಸ್ತಾನದ ತಮ್ಮ ನಿವಾಸಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು ಎಂದು ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.