ನೆರೆ ಬಂದ ಪ್ರದೇಶಗಳಲ್ಲಿ ಸರ್ವೆ ಮಾಡೋಕೆ ಹೋದ ಅಧಿಕಾರಿಗಳನ್ನೇ ಕೂಡಿ ಹಾಕಲಾಗಿದೆ. ಪರಿಹಾರ ನೀಡುವ ನಿಟ್ಟಿನಲ್ಲಿ ಸಮರ್ಪಕ ಸರ್ವೆ ಅಗತ್ಯವಿದ್ದು, ಸರ್ವೆ ಮಾಡಲು ಹೋದ ಅಧಿಕಾರಿಗಳು ಸಂತ್ರಸ್ತರಿಂದ ಕೂಡಿ ಹಾಕಲ್ಪಟ್ಟಿದ್ದಾರೆ.
ಬೆಳಗಾವಿ(ಆ.30): ನೆರೆ ಬಂದ ಪ್ರದೇಶಗಳಲ್ಲಿ ನಡೆಯುತ್ತಿರುವ ಸರ್ವೆ ಕಾರ್ಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸರ್ವೆಗೆ ಬಂದ ಅಧಿಕಾರಿಗಳು ಗ್ರಾಪಂ ಕಾರ್ಯಾಲಯದಲ್ಲಿ ಕೂಡಿ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಗುರುವಾರ ನಡೆದಿದೆ.
ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ನೋಡೆಲ್ ಅಧಿಕಾರಿಗಳನ್ನು ಒಳಗೊಂಡು ಎಲ್ಲರನ್ನು ಪಂಚಾಯತಿ ಕಾರಾರಯಲಯದಲ್ಲಿ ಕೂಡಿ ಹಾಕಿ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ: ಸರ್ಕಾರ ಬದಲಾದರೂ ಇಲ್ಲಿ ಮಾತ್ರ ಈಗಲೂ ಎಚ್‌ಡಿಕೆ ಸಿಎಂ..!
ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು, ಸೂಕ್ತ ರೀತಿಯಿಂದ ಸರ್ವೆ ಕಾರ್ಯ ಮಾಡಿ, ಎಲ್ಲರಿಗೂ ನ್ಯಾಯ ಒದಗಿಸಿಕೊಡಬೇಕು ಎಂದು ಪಟ್ಟು ಹಿಡಿದರು. ಈ ಸುದ್ದಿ ತಿಳಿಯುತಿದ್ದಂತೆ ಅಥಣಿ ಪೊಲೀಸರು ಹಲ್ಯಾಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿ ಅಧಿಕಾರಿಗಳನ್ನು ಬಿಡುಗಡೆ ಮಾಡಿದರು. ನಂತರ ಪೊಲೀಸರ ಮಧ್ಯೆಯೇ ಸರ್ವೆ ಕಾರ್ಯ ಆರಂಭಗೊಂಡಿತು.
