ಉತ್ತರ ಕನ್ನಡದಲ್ಲಿ ಭಾರೀ ಮಳೆ: ಹೊನ್ನಾವರದಲ್ಲಿ ಪ್ರವಾಹ ಪರಿಸ್ಥಿತಿ

ಗುಂಡಬಾಳ, ಬಡಗಣಿ ನದಿ ಭರ್ತಿಯಾಗಿದೆ. ನಿರಂತರ ಮಳೆ ಮುಂದುವರೆದರೆ ಪ್ರವಾಹ ಉದ್ಭವಿಸುವ ಸಾಧ್ಯತೆ ಇದೆ. ಭಾಸ್ಕೇರಿ ಹೊಳೆ ಭರ್ತಿಯಾಗಿ ಮೈದುಂಬಿ ಹರಿದಿದೆ. ಏಕಾಏಕಿ ನೀರು ತುಂಬಿದ ಪರಿಣಾಮ ನದಿ ತಟದ ಮನೆಯ ಅಂಗಳದ ತನಕ ನೀರು ಆವರಿಸಿದೆ. ಸುತ್ತಮುತ್ತಲಿನ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ತಗ್ಗು ಪ್ರದೇಶವಾಗಿದ್ದರಿಂದ ಪ್ರತಿವರ್ಷ ಮಳೆಗಾಲದಲ್ಲಿಯು ಇಲ್ಲಿ ಬಹುಬೇಗ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. 

Flood situation in Honnavar For Heay Rain in Uttara Kannada grg

ಹೊನ್ನಾವರ(ಜು.06): ತಾಲೂಕಿನಲ್ಲಿ ಬುಧವಾರವು ವರುಣನ ಅಬ್ಬರ ಮುಂದುವರಿದಿದ್ದು, ಮಂಗಳವಾರ ರಾತ್ರಿಯಿಂದ ಬುಧವಾರ ಸಾಯಂಕಾಲದ ತನಕ ನಿರಂತರ ಮಳೆಯಿಂದ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೆಲವೆಡೆ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ.

ಗುಂಡಬಾಳ, ಬಡಗಣಿ ನದಿ ಭರ್ತಿಯಾಗಿದೆ. ನಿರಂತರ ಮಳೆ ಮುಂದುವರೆದರೆ ಪ್ರವಾಹ ಉದ್ಭವಿಸುವ ಸಾಧ್ಯತೆ ಇದೆ. ಭಾಸ್ಕೇರಿ ಹೊಳೆ ಭರ್ತಿಯಾಗಿ ಮೈದುಂಬಿ ಹರಿದಿದೆ. ಏಕಾಏಕಿ ನೀರು ತುಂಬಿದ ಪರಿಣಾಮ ನದಿ ತಟದ ಮನೆಯ ಅಂಗಳದ ತನಕ ನೀರು ಆವರಿಸಿದೆ. ಸುತ್ತಮುತ್ತಲಿನ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ತಗ್ಗು ಪ್ರದೇಶವಾಗಿದ್ದರಿಂದ ಪ್ರತಿವರ್ಷ ಮಳೆಗಾಲದಲ್ಲಿಯು ಇಲ್ಲಿ ಬಹುಬೇಗ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. 

ಕರಾವಳಿಯ 3 ಜಿಲ್ಲೆಗಳಿಗೆ ಇಂದು ‘ರೆಡ್‌ ಅಲರ್ಟ್‌’: 20 ಸೆಂ.ಮೀ.ವರೆಗೂ ಮಳೆಯಾಗುವ ಸಂಭವ

ಶರಾವತಿ ನದಿತಟದ ಕೆಲವೆಡೆ ತೋಟಗಳಿಗೆ ನೀರು ಆವರಿಸಿದೆ. ಪಟ್ಟಣದ ಬೆಂಗಳೂರು ಸರ್ಕಲ್‌ನಲ್ಲಿ ಐಆರ್‌ಬಿ ಅವಾಂತರ ಮುಂದುವರೆದಿದೆ. ಪರಿಣಾಮ ಬೆಳಗ್ಗೆ ಸಮಯದಲ್ಲಿ ರಸ್ತೆಯ ಮೇಲೆ ಹರಿದ ನೀರು ಕೃತಕ ಪ್ರವಾಹ ಸೃಷ್ಟಿಸಿದೆ. ಮಂಗಳವಾರ ರಾತ್ರಿ ಹಡಿನಬಾಳ ಗ್ರಾಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 69ರ ಮಸುಕಲ್ಮಕ್ಕಿ ಸಮೀಪ ಗುಡ್ಡ ಕುಸಿತವಾಗಿದೆ. ಸ್ವಲ್ಪ ಸಮಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ನೋಡಲ್‌ ಅಧಿಕಾರಿ ಸುರೇಶ ನಾಯ್ಕ, ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌, ಪಿಡಿಒ, ಗ್ರಾಪಂ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು ತೆರವು ಕಾರ್ಯ ನಡೆಸಿದರು. ಬುಧವಾರ ಮಧ್ಯಾಹ್ನದ ವೇಳೆಗೆ ಗುಡ್ಡ ಕುಸಿತದ ಹೆದ್ದಾರಿಯಲ್ಲಿ ಸಂಪೂರ್ಣ ತೆರವು ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಹಳದಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಕೆಲವೆಡೆ ನೀರು ನಿಂತು ಸಣ್ಣಪುಟ್ಟಅವಾಂತರ ಸೃಷ್ಟಿಸಿದ್ದು, ಜೆಸಿಬಿ ಬಳಸಿ ನೀರು ಸರಾಗವಾಗಿ ಹರಿಯುವಂತೆ ಗ್ರಾಪಂನವರು ಅನುಕೂಲ ಮಾಡಿದ್ದಾರೆ. ಎಲ್ಲಿಯು ಕಾಳಜಿ ಕೇಂದ್ರ ತೆರೆದ ಬಗ್ಗೆ ವರದಿಯಾಗಿಲ್ಲ. ಗುಂಡಬಾಳ ನದಿತಟದ ಜನತೆ ಪ್ರವಾಹ ಭೀತಿಯಲ್ಲಿರುವಂತಾಗಿದೆ. ಅಧಿಕಾರಿಗಳು ಎಲ್ಲಾ ಮುಂಜ್ರಾಗ್ರತಾ ಕ್ರಮಗಳೊಂದಿಗೆ ಸಿದ್ದರಾಗಿದ್ದು, ಒಂದೊಮ್ಮೆ ಪ್ರವಾಹ ಅಥವಾ ಯಾವುದೇ ಅವಘಡ ಸಂಭವಿಸಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲಿದ್ದಾರೆ.

Latest Videos
Follow Us:
Download App:
  • android
  • ios