ಉತ್ತರ ಕರ್ನಾಟಕ ಹಾಗೂ ಕರಾವಳಿಯ ಜನರು ಕೊಂಚ ನಿರಾಳರಾಗಿದ್ದಾರೆ. ಇಲ್ಲಿನ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಮಳೆಯ ಪ್ರಮಾಣ ತಗ್ಗಿದ್ದು  ಇದರಿಂದ ಜನತೆ ಸಮಾಧಾನಗೊಂಡಿದ್ದಾರೆ.

 ಬೆಂಗಳೂರು (ಆ.22): ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಅಬ್ಬರಿಸುತ್ತಿದ್ದ ಮಳೆ ಪ್ರವಾಹ ಬಹುತೇಕ ತಗ್ಗಿದ್ದು, ಕಲಬುರಗಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಶವ ಶುಕ್ರವಾರ ಪತ್ತೆಯಾಗಿದೆ. ಇನ್ನುಳಿದಂತೆ ಕೃಷ್ಣ ನದಿಯಲ್ಲಿ ನೀರಿನ ಮಟ್ಟಕೊಂಚ ಏರಿಕೆಯಾಗಿದ್ದು, ಉಳಿದ ನದಿಗಳಲ್ಲಿ ನೀರಿನ ಪ್ರಮಾಣ ತಗ್ಗಿದೆ.

ಇದರಿಂದಾಗಿ ನದಿ ಪ್ರವಾಹ ಭೀತಿ ಎದುರಿಸುತ್ತಿದ್ದ ಘಟಪ್ರಭ, ಮಲಪ್ರಭ, ಕೃಷ್ಣ ನದಿ ಪಾತ್ರದ ಜನರು ನಿಟ್ಟುಸಿರುವ ಬಿಟ್ಟಿದ್ದಾರೆ.

ನವಿಲುತೀರ್ಥ ಡ್ಯಾಂನಿಂದ ನೀರು ಬಿಡುಗಡೆ; ಗ್ರಾಮ ತೊರೆಯುವಂತೆ ಗ್ರಾಮಸ್ಥರಿಗೆ ಸೂಚನೆ...

ಗುರುವಾರ ಸಂಜೆ ಸುರಿದ ಬಿರುಸಿನ ಮಳೆಗೆ ಕಲಬುರಗಿಯ ಭೀಮಳ್ಳಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಡಬರಾಬಾದ್‌ ನಿವಾಸಿ ಮಲ್ಲಿಕಾರ್ಜುನ ನೀಲಕಂಠ(12) ಶವ ದೊರಕಿದೆ.

ಈತ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕೊಚ್ಚಿ ಹೋಗಿದ್ದ. ಇನ್ನು ಈ ಬಾರಿಯೂ ಪ್ರವಾಹಕ್ಕೆ ತುತ್ತಾಗಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೆಳವಂಕಿ ಗ್ರಾಮದ ಜನರಿಗೆ ಮತ್ತೆ ಪರಿಹಾರ ಕೇಂದ್ರಗಳೇ ಆಸರೆಯಾಗಿವೆ. ಉತ್ತರ ಕನ್ನಡ, ಹುಬ್ಬಳ್ಳಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದೆರೆ, ಉಡುಪಿ, ಗದಗ, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿ ತುಂತುರು ಮಳೆಯಾಗಿದೆ.

"