ಮಂಗಳೂರು(ಆ.09): ದ.ಕ.ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ಗುರವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ಕಟೀಲು ದೇವಳಕ್ಕೆ ನೀರು ನುಗ್ಗಿದೆಯೆಂಬ ವಿಡಿಯೋ, ಫೋಟೋಗಳು ವೈರಲ್‌ ಆಗತೊಡಗಿದ್ದವು.

ಈ ಹಿನ್ನೆಲೆಯಲ್ಲಿ ಮೂಲ್ಕಿ ಕಟೀಲು ದೇವಳಕ್ಕೆ ಭಕ್ತರಿಂದ ಇಂದು ನಿರಂತರ ದೂರವಾಣಿ ಕರೆಗಳು ಬರಲಾರಂಭಿಸಿದ್ದು ದೇವಳದ ಪ್ರಬಂಧಕರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

ಮಂಗಳೂರು: ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ಭಾರಿ ಗುಡ್ಡ ಕುಸಿತ

ವಾಸ್ತವದಲ್ಲಿ, ಇದು ಇತ್ತೀಚಿನ ಬಿರುಸಿನ ಮಳೆಗೆ ಕಮಲಶಿಲೆ ದೇವಳದ ಒಳಗೆ ನೀರು ನುಗ್ಗಿದ್ದು ಅದರ ಭಾವಚಿತ್ರವನ್ನು ಹಾಕಿ ಯಾರೋ ಕಿಡಿಗೇಡಿಗಳು ಕಟೀಲು ದೇವಳಕ್ಕೆ ನೆರೆಯಿಂದಾಗಿ ನೀರು ನುಗ್ಗಿದೆಯೆಂದು ಸುಳ್ಳು ಸುದ್ದಿಯನ್ನು ಹರಡಿದ್ದಾರೆ.

ಮೂಲ್ಕಿ, ಕಟೀಲಿನಲ್ಲಿ ನೆರೆಯಾಗುವಷ್ಟು ಮಳೆಯೇ ಸುರಿದಿಲ್ಲ:

ಮೂಲ್ಕಿ, ಕಟೀಲು ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗಿದ್ದರೂ ನೆರೆಯಾಗುವಷ್ಟುಮಳೆಯಾಗಿಲ್ಲ. ಇದೀಗ ಈ ಸುಳ್ಳು ಸುದ್ದಿ ಪ್ರಚಾರದಿಂದಾಗಿ ದೂರದ ಮುಂಬೈ ಮತ್ತಿತರ ಕಡೆಗಳಿಂದ ಭಕ್ತರು ದೇವಳಕ್ಕೆ ನಿರಂತರ ದೂರವಾಣಿ ಕರೆ ಮಾಡಿ ವಿಚಾರಿಸಿದ್ದು ಎಲ್ಲರಿಗೂ ಉತ್ತರ ನೀಡಿ ದೇವಳದ ಪ್ರಬಂಧಕರು ಹ್ಯೆರಾಣಾಗಿದ್ದಾರೆ. ದಯಮಾಡಿ ಇಂತಹ ಸುಳ್ಳು ಸುದ್ದಿಗಳನ್ನು ಹರಡಿಸಬಾರದೆಂದು ಆಸ್ರಣ್ಣ ಬಂಧುಗಳು ವಿನಂತಿಸಿದ್ದಾರೆ.

ಮಂಗಳೂರು: ಗುಡ್ಡ ಕುಸಿತ, ಸತತ ಮೂರನೇ ದಿನವೂ ರೈಲು ಸಂಚಾರ ಸ್ಥಗಿತ