ಶೇಕಡಾ 75ರಷ್ಟು ಕಾಮಗಾರಿ ಪೂರ್ಣ..!ಫೆ.20ರ‌ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ..!

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜ.24) : ವಿಜಯಪುರ ವಿಮಾನ ನಿಲ್ದಾಣ ಹಾಗೂ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಅಡಿಗಲ್ಲು ಕಾರ್ಯಕ್ರಮ ಫೆಬ್ರವರಿ ಮೂರನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಜಲಸಂಪ ನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ನಗರದ ಹೊರ ವಲಯದ ಬುರಣಾಪುರ- ಮದಭಾವಿ ಗ್ರಾಮದ ಮಧ್ಯೆ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ವೀಕ್ಷಿಸಿದ ಅವರು, ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದರು.

2024ರ ಚುನಾವಣೆ ನಂತರ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚೋಕು ಯಾರು ಇರಲ್ಲ: ಕಾರಜೋಳ

ವಿಮಾನ ನಿಲ್ದಾಣ ಕಾಮಗಾರಿ 75% ರಷ್ಟು ಪೂರ್ಣ:

ಈಗಾಗಲೇ ವಿಮಾನ ನಿಲ್ದಾಣದ ಕಾಮಗಾರಿ ಶೇ. 75ರಷ್ಟು ಪೂರ್ಣಗೊಂಡಿದೆ. ಫೆಬ್ರವರಿ 15ರಿಂದ 20ರೊಳಗಾಗಿ ಕಾಮಗಾರಿ ಪೂರ್ಣ ಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸಭೆ ನಡೆಸಿ ಸೂಚಿಸಲಾಗಿದೆ. ಫೆ. 20ರ ನಂತರ ವಿಮಾನ ನಿಲ್ದಾಣ ಪ್ರಧಾನಿ ಮೋದಿ(PM Narendra Modi)ಯವರಿಂದ ಲೋಕಾರ್ಪಣೆಗೊಳ್ಳಲಿದೆ. ಇದರ ಜತೆ ರೇವಣ ಸಿದ್ದೇಶ್ವರ ಏತ ನೀರಾವರಿ(Revanasiddeshwar lift irrigation) ಯೋಜನೆ ಅಡಿಗಲ್ಲು ನಡೆಯಲಿದೆ ಎಂದರು. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಇದೇ ತಿಂಗಳು ನಡೆಯಬಹುದು. ಅದು ತಡವಾದರೆ ವಿಜಯಪುರ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣ ಒಂದೇ ದಿನ ಉದ್ಘಾಟನೆಯಾಗಬಹುದು ಎಂದರು. 

ಕಾಮಗಾರಿ ಪೂರ್ಣವಾದ ಬಳಿಕ ಇತರೆ ಪ್ರಕ್ರಿಯೆ:

ವಿಮಾನ ನಿಲ್ದಾಣ ಮೇಲುಸ್ತುವಾರಿ ನೋಡಿಕೊಳ್ಳುವದು ಸಿಬ್ಬಂದಿ ಭರ್ತಿ, ರನ್ ವೇ ಸುಧಾರಣೆ ಸೇರಿದಂತೆ ಕಟ್ಟಡ ನಿರ್ಮಾಣ ನಂತರ ನಡೆಯುವ ಪ್ರಕ್ರಿಯೆ ಸಂಬಂಧ ಎಲ್ಲ ಖಾಸಗಿ ಹಾಗೂ ಏರ್ ಇಂಡಿಯಾ ವಿಮಾನ ಪ್ರಾಧಿಕಾರದ ಮುಖ್ಯಸ್ಥರ ಜತೆ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ‌ ಕಾಮಗಾರಿ ಪೂರ್ಣಗೊಂಡ ನಂತರ ಏರಲೈನ್ಸ್ ಕಂಪನಿಗಳ ಸುಪರ್ದಿಗೆ ವಿಮಾನ ನಿಲ್ದಾಣ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದರು.

ವಿಶ್ವಗುರು ಬಸವೇಶ್ವರ ಹೆಸರು ಅಂತಿಮ:

ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕಾರಜೋಳ(Govind karjol), ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರ ಹೆಸರು ಇಡುವ ಕುರಿತು ಅನುಮೂದನೆಯಾಗಿದೆ. ಈಗ ಹೆಸರು ಬದಲಿಸುವದು ಸರಿಯಲ್ಲ, ಈ ವಿಚಾರವಾಗಿ ರಾಜಕೀಯ ಮಾಡುವದು ಬೇಡ ಎಂದು ಮನವಿ ಮಾಡಿದರು.‌

ಕಾಂಗ್ರೆಸ್ ಗೆ ಪಾರ್ಶ್ವವಾಯ ಹೊಡೆದಿದೆ:

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ ನಾಯಕರು ಮಾಡುತ್ತಿರುವ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಕಾರಜೋಳ, ಕಾಂಗ್ರೆಸ್ ಭಷ್ಟ್ರಾಚಾರದಲ್ಲಿ ಮುಳುಗಿದೆ. ಅವರ ಬಹುತೇಕ ಮುಖಂಡರು ಜೈಲು ವಾಸ ಅನುಭವಿಸಿದ್ದಾರೆ. ಕೆಲವರು ಜಾಮೀನಿನ ಮೇಲೆ ಹೊರ ಇದ್ದರೆ, ಹಲವರ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಇವೆ ಎಂದರು. 

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿ ಎನ್ನುವ ಆರೋಪಕ್ಕೆ ಎದುರುತ್ತರ‌‌ ನೀಡಿದ ಕಾರಜೋಳ, ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಉಪಮುಖ್ಯಮಂತ್ರಿ ಇದ್ದಾಗ ಅವರ ಮೇಲೆ ಇದ್ದ ಆರೋಪಗಳ ಬಗ್ಗೆ ಒಮ್ಮೆ ಹಿಂದೆ ತಿರುಗಿ ನೋಡಲಿ ಆ ಮೇಲೆ ಬೇರೆಯವರ ಬಗ್ಗೆ ಮಾತನಾಡಲಿ ಎಂದರು. 

ಸಿದ್ದರಾಮಯ್ಯ ಕಾಣುತ್ತಿರುವ ಸಿಎಂ ಕುರ್ಚಿ ಕನಸು ನನಸಾಗೋದಿಲ್ಲ: ಸಚಿವ ಕಾರಜೋಳ

ರೇವಣಸಿದ್ದೇಶ್ವರ ನೀರಾವರಿ ಬಿಜೆಪಿ ಕೊಡುಗೆ ; ಕಾರಜೋಳ:

ರೇವಣಸಿದ್ದೇಶ್ವರ ಏತನೀರಾವರಿ ಯೋಜನೆಯ ರೂವಾರಿಗಳು ನಾವು ಎಂದು ಜೆಡಿಎಸ್ ಬಿಂಬಿಸಿಕೊಳ್ಳುತ್ತಿರುವ ಕುರಿತು ಮಾತನಾಡಿದ ಸಚಿವರು, ಅವರು ಬಿಡಿ ಗೋಲಗುಮ್ಮಟ‌ ಕಟ್ಟಿದವರೇ‌ ನಾವು ಎನ್ನುತ್ತಾರೆ. ನಾನು ಶಾಸಕದ್ದಾಗಲೇ ಈ ನೀರಾವರಿ ಬಗ್ಗೆ ಕೇಳಿದ್ದೆ, ಆ ನಂತರ ಹೋರಾಟ ಸಹ ಮಾಡಿದ್ದೇನೆ.‌ಈಗ ಜೆಡಿಎಸ್‌ಕೊಡುಗೆ ಅನ್ನುತ್ತಿದ್ದಾರೆ ಇದಕ್ಕೆ ಏನು ‌ಹೇಳಲಿ ಎಂದ ಅವರು ಮಾಜಿ ಪ್ರಧಾನಿ ದೇವೇಗೌಡರ ಪಾತ್ರ ಈ ಯೋಜನೆಯಲ್ಲಿ ಏನು ಇದೆ. ಅವರು ಹಿರಿಯ ರಾಜಕಾರಣಿಗಳು ಅವರ ಬಗ್ಗೆ ನಾನು ಏನು ಮಾತನಾಡುವದಿಲ್ಲ ಎಂದರು.