Asianet Suvarna News Asianet Suvarna News

Uttara Kannada: ಬೇಡಿಕೆ ಈಡೇರದಿದ್ದಲ್ಲಿ ಆತ್ಮಹತ್ಯೆ, ಐವರು ವಾಟರ್ ‌ಮ್ಯಾನ್‌ಗಳಿಂದ ಸರಕಾರಕ್ಕೆ ಎಚ್ಚರಿಕೆ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿರುವ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ರಾಮನಗರದ ಐವರು ವಾಟರ್ ಮ್ಯಾನ್‌ಗಳು ಬೇಡಿಕೆ ಈಡೇರದಿದ್ದಲ್ಲಿ ಫೆಬ್ರುವರಿ 6ರಂದು ಸಾಮೂಹಿಕ ಆತ್ಮಹತ್ಯೆ ನಡೆಸುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

five waterman warn the government to commit suicide if not fulfill the demands in Uttara Kannada gow
Author
First Published Jan 24, 2023, 6:36 PM IST

ಉತ್ತರ ಕನ್ನಡ (ಜ.24): ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿರುವ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ರಾಮನಗರದ ಐವರು ವಾಟರ್ ಮ್ಯಾನ್‌ಗಳು ಬೇಡಿಕೆ ಈಡೇರದಿದ್ದಲ್ಲಿ ಫೆಬ್ರುವರಿ 6ರಂದು ಸಾಮೂಹಿಕ ಆತ್ಮಹತ್ಯೆ ನಡೆಸುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ವಾಟರ್ ಮ್ಯಾನ್ (ನೀರಗಂಟಿ)ಗಳು ಹೇಳುವ ಪ್ರಕಾರ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಲ್ಲಿ 1992ರಿಂದ ಸತತ ಮೂವತ್ತು ವರ್ಷಗಳಿಂದ ರಾಮನಗರದ ಗ್ರಾಮಪಂಚಾಯತ್‌ಗಳಲ್ಲಿ ಅತೀ ಕಡಿಮೆ ವೇತನಕ್ಕೆ ವಾಟರ್‌ಮ್ಯಾನ್‌ಗಳಾಗಿ ಕೆಲಸ ಮಾಡುತ್ತಿದ್ದೆವು. ಭಾರತ ಸಂವಿಧಾನದ ಕಾನೂನಿನ ಪ್ರಕಾರ ನಮ್ಮ ಕೆಲಸವನ್ನು ಖಾಯಂಗೊಳಿಸಬೇಕಿತ್ತು ಮತ್ತು ವೇತನವನ್ನು ಹೆಚ್ಚಳ ಮಾಡಬೇಕಿತ್ತು. ಆದರೆ, ಇದ್ಯಾವುದನ್ನೂ ಸರ್ಕಾರ ಮಾಡಿಲ್ಲ. ಈ ಬಾರಿ ನಮ್ಮ ಕೆಲಸವನ್ನು ಇತರ ಐವರಿಗೆ ನೀಡಿ ನಮ್ಮ ಕೆಲಸ ಕಸಿಯಲಾಗಿದೆ. ಆದ್ದರಿಂದ, ನಮಗೆ ಕೆಲಸವನ್ನು ಖಾಯಂ ಮಾಡುವುದಲ್ಲದೇ, ವೇತನವನ್ನು ಕೂಡಾ ಹೆಚ್ಚಿಸಬೇಕು. ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಿ ಫೆಬ್ರುವರಿ 5ರ ಒಳಗಾಗಿ ನಮ್ಮನ್ನು ಖಾಯಂಗೊಳಿಸಿದ ಆರ್ಡರ್ ಕಾಪಿ ನೀಡಬೇಕು. ಇಲ್ಲದಿದ್ದರೆ ಫೆಬ್ರುವರಿ 6ರಂದು ಜೊಯಿಡಾದ ಶಿವಾಜಿ ವೃತದಲ್ಲಿ ಪ್ರತಿಭಟನೆ ನಡೆಸವ ಮೂಲಕ ಮೈಮೇಲೆ‌ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮೃತರ ಮನೆಗೆ ಹಲಗೇಕರ ಭೇಟಿ, ಸಾಂತ್ವನ:
ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿ ಕೃಷಿ ಕೆಲಸ ಮುಗಿಸಿ ತಮ್ಮ ಮನೆಗಳತ್ತ ಹೊರಟಿದ್ದ ಸಂದರ್ಭದಲ್ಲಿ ಹಿಂದಿನಿಂದ ವಾಹನ ಗುದ್ದಿ ಸ್ಥಳದಲ್ಲೇ ಮೃತಪಟ್ಟತಾಲೂಕಿನ ಘಾರ್ಲಿ ಗ್ರಾಮದ ದುರ್ಗಾ ಕಾಳಸೇಕರ, ತುಳಸಿ ಗಾವಡೆ ಮತ್ತು ಪಾರ್ವತಿ ಗಾವಡೆ ಅವರ ಮನೆಗಳಿಗೆ ಸೋಮವಾರ ಬಿಜೆಪಿ ಮುಖಂಡ ವಿಠ್ಠಲ ಹಲಗೇಕರ ಹಾಗೂ ತೋಪಿನಕಟ್ಟಿಶ್ರೀಮಹಾಲಕ್ಷ್ಮೇ ಗ್ರುಪ್‌ನ ಪದಾ​ಧಿಕಾರಿಗಳು ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

Assembly election: ದೇಶದ ಏಳಿಗೆಗೆ ಮೋದಿ ಪರ ನಿಲ್ಲಿ; ರೂಪಾಲಿ ನಾಯ್ಕ್

ಇದೇ ಸಂದರ್ಭದಲ್ಲಿ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಜೋಯಿಡಾ ತಹಸೀಲ್ದಾರ್‌ಗೆ ಕರೆ ಮಾಡಿದ ಹಲಗೇಕರ, ಮೂವರೂ ಮಹಿಳೆಯರ ಕುಟುಂಬದ ಸದಸ್ಯರಿಗೆ ಸರ್ಕಾರದಿಂದ ಅಗತ್ಯ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಉತ್ತರಕನ್ನಡ: ಅನುದಾನದ ಕೊರತೆಯಿಂದ ಸಂಕಷ್ಟದಲ್ಲಿ ಗೋಶಾಲೆ

ಬಳಿಕ ತೋಪಿನಕಟ್ಟಿಶ್ರೀಮಹಾಲಕ್ಷ್ಮೇ ಗ್ರುಪ್‌ ವತಿಯಿಂದ ಮೂರು ಕುಟುಂದವರಿಗೆ ಆರ್ಥಿಕ ಸಹಾಯ ನೀಡಿದ ಅವರು, ಮೃತರ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತೋಪಿನಕಟ್ಟಿಶ್ರೀ ಮಹಾಲಕ್ಷ್ಮೇ ಗ್ರುಪ್‌ ಉಪಾಧ್ಯಕ್ಷ ವಿಠ್ಠಲ ಕರಂಬಳಕರ, ನಿರ್ದೇಶಕರಾದ ಚಾಂಗಪ್ಪ ನಿಲಜಕರ, ಯಲ್ಲಪ್ಪ ತಿರವೀರ, ಲೈಲಾ ಶುಗರ್ಸ್‌ ಎಂಡಿ ಸದಾನಂದ ಪಾಟೀಲ ಹಾಗೂ ಇತರರು ಇದ್ದರು.

Follow Us:
Download App:
  • android
  • ios