ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರ ಬಳಿ ನಡೆದ ಘಟನೆ 

ಕೊಪ್ಪಳ(ಜು.24): ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕಾರ್ಪಿಯೋ ವಾಹನದಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿ, 4 ಮಂದಿ ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರ ಬಳಿ ಘಟನೆ ನಿನ್ನೆ(ಶನಿವಾರ) ರಾತ್ರಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೃತರನ್ನ ದೇವಪ್ಪ, ಗಿರಿಜಮ್ಮ, ಪಾರವ್ವ, ಶಾಂತವ್ವ ಹಾಗೂ ಗಿರಿಜಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅಂತ ತಿಳಿದು ಬಂದಿದೆ. 

ಸ್ಕಾರ್ಪಿಯೋ ವಾಹನದಿಂದ ಶವಗಳನ್ನ ಹೊರಗಡೆ ತೆಗೆಯಲು ಬರದ ಪರಿಸ್ಥಿತಿಯಲ್ಲಿದೆ. ಘಟನಾ ಸ್ಥಳಕ್ಕೆ ಕುಕನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನ ನಿರೀಕ್ಷಿಸಲಾಗುತ್ತಿದೆ.