ವಿಜಯಪುರ(ಏ.27): ಮಹಾಮಾರಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿ ಇಂದು(ಸೋಮವಾರ) ಮೂರು ಮಕ್ಕಳು ಸೇರಿ 5 ಜನ ಕೊರೋನಾ ಸೋಂಕಿತರು ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಅವರು ಹೇಳಿದ್ದಾರೆ. 

ಈ ಸಂಬಂಧ ಮಾಹಿತಿ ನೀಡಿದ ಅವರು, 5 ಜನ ಕೊರೋನಾ ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಇವರನ್ನ ನಗರದ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 13 ಮತ್ತು 10 ವರ್ಷದ ಬಾಲಕರು, 12 ವರ್ಷದ ಬಾಲಕಿ, 29 ವರ್ಷದ ಯುವಕ, 20 ವರ್ಷದ ಯುವತಿ ಬಿಡುಗಡೆಯಾಗಿದ್ದಾರೆ. P.228, P.229, P.230, P.231, P.232 ಗುಣಮುಖರಾಗಿ ಬಿಡುಗಡೆಯಾದ ರೋಗಿಗಳಾಗಿದ್ದಾರೆ.

32 ಜನರಿಗೆ ಕೊರೋನಾ ಸೋಂಕು ಅಂಟಿಸಿದ್ದ ವೃದ್ಧೆ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್‌

ನಿನ್ನೆ(ಭಾನುವಾರ) ಕೂಡಾ P.221 ನಂಬರಿನ ವೃದ್ಧೆ ಕೂಡ ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖವಾದ ಹಿನ್ನೆಲೆಯಲ್ಲಿ ಅವರನ್ನ ಬಿಡುಗಡೆ ಮಾಡಲಾಗಿತ್ತು. ಇಂದೂ ಕೂಡ ಒಟ್ಟು ಐದು ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು 41 ಪಾಸಿಟಿವ್ ಪ್ರಕರಣಗಳ ಪೈಕಿ 6 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.