ಮಂಗಳೂರು(ಸೆ.09): ಮಂಗಳೂರು ಮೂಲದ ಮೀನುಗಾರಿಕಾ ಬೋಟ್‌ ಭಾನುವಾರ ಮುಂಜಾನೆ ಮುರುಡೇಶ್ವರ ಸಮೀಪದ ನೇತ್ರಾಣಿಗುಡ್ಡದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಆಂಧ್ರ ಮೂಲದ 10 ಕಾರ್ಮಿಕರನ್ನು ರಕ್ಷಿಸಲಾಗಿದೆ.

ಮಂಗಳೂರಿನ ಕಸಬಾ ಬೆಂಗ್ರೆಯ ಮೊಹಮ್ಮದ್‌ ಆಶೀಫ್‌ ಎಂಬವರಿಗೆ ಸೇರಿದ ‘ಸಹೀಮಾ’ ಹೆಸರಿನ ಬೋಟ್‌ ಇದಾಗಿದೆ. ವಾರದ ಹಿಂದೆ ಮಂಗಳೂರಿನಿಂದ ಈ ಬೋಟ್‌ ಮೀನುಗಾರಿಕೆಗೆ ತೆರಳಿತ್ತು. ಆದರೆ ನೇತ್ರಾಣಿಗುಡ್ಡದ ಸಮೀಪ ಇರುವಾಗ ಕಡಲು ಭಾರಿ ಪ್ರಕ್ಷುಬ್ಧಗೊಂಡಿದ್ದರಿಂದ ಬೋಟಿನಲ್ಲಿದ್ದ ಉಪಕರಣ ಬಳಸಿ ಅಲ್ಲೇ ನಿಲುಗಡೆ ಮಾಡಲಾಗಿತ್ತು. ಆದರೆ ಭಾನುವಾರ ಮುಂಜಾನೆ ವೇಳೆಗೆ ಬೋಟು ಕಡಲಲೆಗಳ ರಭಸಕ್ಕೆ ನೀರಿನಲ್ಲಿ ಮುಳುಗಿದೆ.

ನನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸುವುದಿಲ್ಲ: ಸೆಂಥಿಲ್

ಬೋಟು ಮುಳುಗಡೆಯಾಗುವುದಕ್ಕೆ ಮೊದಲು ಅದರಲ್ಲಿದ್ದ 10 ಮೀನುಗಾರರನ್ನು ಇತರ ಬೋಟಿನವರು ರಕ್ಷಣೆ ಮಾಡಿದ್ದಾರೆ. ಈ ಅವಘಡದಿಂದ ಸುಮಾರು ಒಂದೂವರೆ ಕೋಟಿ ರು. ನಷ್ಟಉಂಟಾಗಿದೆ. ಪೊಲೀಸ್‌ ಪಣಂಬೂರು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಮಂಗಳೂರು: ಸೆಂಥಿಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು..?