Udupi: ಸಮುದ್ರ ಆಂಬುಲೆನ್ಸ್‌ಗಾಗಿ ಹೋರಾಟಕ್ಕೆ ಸಿದ್ಧಗೊಂಡ ಮೀನುಗಾರರು

ಸಮುದ್ರದ ನಡುವೆ ಸಾಹಸಮಯ ಹೋರಾಟ ಮಾಡುತ್ತಾ ಬಂದಿರುವ ಮೀನುಗಾರರು ಸರ್ಕಾರದಿಂದ ಸವಲತ್ತು ಸೌಲಭ್ಯ ಪಡೆಯಲು ಕೂಡ ಹೋರಾಟಕ್ಕೆ ಇಳಿಯಬೇಕಿದೆ. ಇದೀಗ ಸಮುದ್ರ (ಸೀ) ಆಂಬುಲೆನ್ಸ್‌ಗಾಗಿ ಮತ್ತೆ ಹೋರಾಟ ಮಾಡುವ ಅನಿವಾರ್ಯ ಎದುರಾಗಿದೆ.

Fishermens ready to fight for a sea ambulance sat

ಉಡುಪಿ (ಡಿ.24):  ಪ್ರತೀ ದಿನ, ಪ್ರತೀ ಕ್ಷಣ ಸಮುದ್ರದ ನಡುವೆ ಸಾಹಸಮಯ ಹೋರಾಟ ಮಾಡುತ್ತಾ ಬಂದಿರುವ ಮೀನುಗಾರರು ಸರ್ಕಾರದಿಂದ ಸವಲತ್ತು ಸೌಲಭ್ಯ ಪಡೆಯಲು ಕೂಡ ಹೋರಾಟಕ್ಕೆ ಇಳಿಯಬೇಕಿದೆ. ಇದೀಗ ಸಮುದ್ರ (ಸೀ) ಆಂಬುಲೆನ್ಸ್‌ಗಾಗಿ ಮತ್ತೆ ಹೋರಾಟ ಮಾಡುವ ಅನಿವಾರ್ಯ ಎದುರಾಗಿದೆ.

ಮೀನುಗಾರರು ತಮ್ಮ ಪ್ರಾಣ ಆರೋಗ್ಯ ಕಾಪಾಡಲು ಒಂದು ಸುಸಜ್ಜಿತ ಸೀ ಆ್ಯಂಬುಲೆನ್ಸ್ ಬೇಡಿಕೆ ಇಟ್ಟಿದ್ದಾರೆ. ಮೀನುಗಾರಿಕೆಗೆ ತೆರಳಿರುವ ವೇಳೆ ಎದುರಾಗುವ ಆರೋಗ್ಯ ಸಮಸ್ಯೆ, ಬೋಟ್ ‌ಅವಘಡದಿಂದ ಪ್ರಾಣ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮುದ್ರದಲ್ಲಿ ಸಂಚರಿಸುವ‌ ಬೋಟ್  ಆ್ಯಂಬುಲೆನ್ಸ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ‌ಈ ಬೇಡಿಕೆ ನೆನ್ನೆ ಮೊನ್ನೆಯದಲ್ಲ.‌ ಕಳೆದ ಐದು ವರ್ಷಗಳಿಂದ ಈ ಬೇಡಿಕೆಯನ್ನ ಮೀನುಗಾರರು, ಶಾಸಕರು ಇಡುತ್ತಾ ಬಂದಿದ್ದಾರೆ. 

 

Karwar: ಮೀನುಗಾರರ ಜೀವನವನ್ನು ಅತಂತ್ರಗೊಳಿಸಿದ ಮ್ಯಾಂಡೌಸ್ ಚಂಡಮಾರುತ

ಹೋರಾಟಕ್ಕೆ ಸಿದ್ಧಗೊಂಡ ಮೀನುಗಾರರ ಪಡೆ: ಆದರೆ ಗೃಹ ಇಲಾಖೆ ಮಾತ್ರ ಕಿಮ್ಮತ್ತಿನ ಬೆಲೆ‌ ನೀಡಿಲ್ಲ ಹೀಗಾಗಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಮೀನುಗಾರ ಮುಖಂಡರು.ಹೌದು, ಮೀನುಗಾರಿಕೆಗೆ ತೆರಳಿದ್ರೆ ಮೀನುಗಾರರು  ಮರಳಿ ಬರೋದು ಹತ್ತು ಹದಿನೈದು ದಿನದ ನಂತರವೇ.‌ ಕೆಲವೊಮ್ಮೆ ಸಮುದ್ರದಲ್ಲಿ‌ ಎದುರಾಗುವ ಅವಘಡ, ಹವಾಮಾನ ವೈಪರೀತ್ಯ, ಕಡಲು ಪ್ರಕ್ಷುಬ್ದತೆ ಕಾರಣದಿಂದ ತಿಂಗಳಾದರೂ ಮರಳಿ ಬಾರದ ಸ್ಥಿತಿ ಎದುರಾಗುತ್ತೆ. ಈ ವೇಳೆ ಬೋಟಿನಲ್ಲಿರುವ ಮೀನುಗಾರರ ಆರೋಗ್ಯ ಏರುಪೇರಾಗುತ್ತೆ ಅಥವಾ ಬೋಟು ಮುಳುಗಡೆಯಾಗಿ ಪ್ರಾಣವೇ ಹೋಗುವ ಸ್ಥಿತಿ ಹಲವು ಬಾರಿ ಎದುರಾಗಿದೆ. 

ಮೀನುಗಾರರ ಆರೋಗ್ಯ ರಕ್ಷಣೆಯೂ ಮುಖ್ಯ: ಹೀಗಾಗಿ ಸಮುದ್ರದಲ್ಲಿ ಸಂಚರಿಸುವ ಆ್ಯಂಬುಲೆನ್ಸ್ ಇದ್ದಲ್ಲಿ ಮೀನುಗಾರರಿಗೆ ತುರ್ತು ಚಿಕಿತ್ಸೆ, ಪ್ರಾಣ ರಕ್ಷಣೆ ಮಾಡಬಹುದು. ಇಲ್ಲವಾದರೆ ಬೇರೊಂದು ಬೋಟ್ ಸಹಾಯದಿಂದ ದಡಕ್ಕೆ ಕರೆತಂದು ಮತ್ತೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಪ್ರಾಣ ಉಳಿಯೋದು ಕಷ್ಟ. ಹೀಗಾಗಿ ಸೀ ಆ್ಯಂಬುಲೆನ್ಸ್ ಅನಿವಾರ್ಯವಾಗಿದೆ. 

ಉಡುಪಿ: ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಮೀನುಗಾರರ ಯತ್ನ

ಗೃಹ ಇಲಾಖೆಯಿಂದ ನಿರ್ಲಕ್ಷ್ಯ: ಈ ಬಗ್ಗೆ ಕಳೆದ ಐದು ವರ್ಷದಿಂದ ಮೀನುಗಾರ ಮುಖಂಡರು ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಸ್ವತಃ ಶಾಸಕ ರಘುಪತಿ ಭಟ್ ಕೂಡ ವಿಧಾನಸಭೆ ಕಲಾಪದಲ್ಲಿ ಈ ಬಗ್ಗೆ ‌ಧ್ವನಿ ಎತ್ತಿದ್ದಾರೆ. ಆದ್ರೆ ಗೃಹ ಇಲಾಖೆ ಮಾತ್ರ ಮಂಜುರಾತಿ ನೀಡಿಲ್ಲ. ಕರಾವಳಿ ಕಾವಲು ಪಡೆ ಮುಖ್ಯ ಕಚೇರಿ ಇರೋದು ಮಲ್ಪೆ ಬಂದರಿನಲ್ಲಿ. ಈ ಇಲಾಖೆಯಲ್ಲೂ ಸುಸಜ್ಜಿತ ಬೋಟ್ ಇಲ್ಲ. ಹೀಗಾಗಿ ಸುಸಜ್ಜಿತ ರಕ್ಷಣಾ ಬೋಟ್ ಜೊತೆಗೆ ಸೀ ಆ್ಯಂಬುಲೆನ್ಸ್ ‌ನೀಡಬೇಕೆನ್ನುವುದು ಮೀನುಗಾರ ಮುಖಂಡರ ಒತ್ತಾಯವಾಗಿದೆ.

ಇನ್ನಾದರೂ ಸರ್ಕಾರ ಈ ಬಗ್ಗೆ ಗಮನಹರಿಸಿ ಮೀನುಗಾರರ ರಕ್ಷಣೆಗೆ ಸೀ ಆ್ಯಂಬುಲೆನ್ಸ್ ಸಹಿತ ಸುಸಜ್ಜಿತ ಬೋಟ್ ಮಂಜೂರು ಮಾಡುವ ಮೂಲಕ ಮೀನುಗಾರರ ರಕ್ಷಣೆ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ.

Latest Videos
Follow Us:
Download App:
  • android
  • ios