Asianet Suvarna News Asianet Suvarna News

ಸಾಗರ ಮಾಲ ವಿರೋಧಿಸಿ ಬೃಹತ್ : ಮೀನುಗಾರರು ಅಸ್ವಸ್ಥ

ಕಾರವಾರದಲ್ಲಿ ಆರಂಭವಾದ ಸಾಗರ ಮಾಲ ಯೋಜನೆಯನ್ನು ವಿರೋಧಿಸಿ ಮೀನುಗಾರರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಲವು ಮೀನುಗಾರರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು. 

Fishermen protest Sagarmala project
Author
Bengaluru, First Published Jan 14, 2020, 9:32 AM IST
  • Facebook
  • Twitter
  • Whatsapp

ಕಾರವಾರ [ಜ.14]: ‘ಸಾಗರಮಾಲಾ’ ಯೋಜನೆ ವಿರೋಧಿಸಿ ಕಾರವಾರದಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಈ ವೇಳೆ ಸಮುದ್ರಕ್ಕಿಳಿದು ಹೋರಾಟ ನಡೆಸುವ ವೇಳೆ ಮೂವರು ಅಸ್ವಸ್ಥಗೊಂಡಿದ್ದಾರೆ.

‘ಸಾಗರಮಾಲಾ’ ಯೋಜನೆಯಡಿ ಇಲ್ಲಿನ ಬಂದರು ವಿಸ್ತರಣೆ ಕಾಮಗಾರಿಗೆ ಸೋಮವಾರ ಬೆಳಗ್ಗೆ ಚಾಲನೆ ದೊರೆಯುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ನೂರಾರು ಮೀನು ಗಾರರು ಏಕಾಏಕಿ ಪ್ರತಿಭಟನೆಗಿಳಿ ದರು. 

ಈ ವೇಳೆ ಕೆಲವರು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಲು ಮುಂದಾಗು ತ್ತಿದ್ದಂತೆ 80 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದರು. ಈ ವೇಳೆ ಕೆಲವರು ಸಮುದ್ರಕ್ಕಿಳಿದು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಮೂವರು ಅಸ್ವಸ್ಥಗೊಂಡರು.

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ...

ಅಸ್ವಸ್ಥಗೊಂಡ ಮೀನುಗಾರರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಕಳೆದ ಕೆಲ ದಿನಗಳ ಹಿಂದಷ್ಟೇ ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉತ್ತರ ಕನ್ನಡಕ್ಕೆ ಆಗಮಿಸಿದ್ದು, ಈ ವೇಳೆಯೂ ಸಾಗರ ಮಾಲಾ ಯೋಜನೆಗೆ ವಿರೋಧಿಸಿ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದ್ದರು.

Follow Us:
Download App:
  • android
  • ios